Prajwal Revanna: ಏಕಾಂಗಿಯಾಗಿ ಬಂದು ಮತದಾನ ಮಾಡಿದ ಪ್ರಜ್ವಲ್ ರೇವಣ್ಣ

ಹಾಸನ, ಏಪ್ರಿಲ್‌ 26: ಕರ್ನಾಟಕದಲ್ಲಿ 2024ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಈಗಾಗಲೇ ಅನೇಕರು ಮತದಾನ ಮಾಡಿದ್ದು, ಸಿನಿಮಾ ನಟರು, ರಾಜಕೀಯ ಗಣ್ಯರು ಬೆಳ್ಳಂಬೆಳಗ್ಗೆ ಮತ ಚಲಾಯಿಸಿದ್ದಾರೆ.

ಹಾಸನ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಏಕಾಂಗಿಯಾಗಿ ಬಂದು ಮತದಾನ ಮಾಡಿದ್ದಾರೆ. ಈ ಹಿಂದೆಯೇ ಶುಕ್ರವಾರ 8 ಗಂಟೆಗೆ ಮತದಾನ ಮಾಡಲಿದ್ದೇನೆ ಎಂದು ಹೇಳಿದ್ದ ಪ್ರಜ್ವಲ್‌ ರೇವಣ್ಣ, ಬೆಳ್ಳಂಬೆಳಗ್ಗೆ ಹರದನಹಳ್ಳಿ ಗ್ರಾಮದಲ್ಲಿರುವ ದೇವೇಶ್ವರ ದೇವಾಲಯಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

Lok Sabha Election 2024 Hassan JDS Candidate Prajwal Revanna Voted

ಬಳಿಕ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆಯ ಮತಗಟ್ಟೆಗೆ ಏಕಾಂಗಿಯಾಗಿ ಬಂದು ಪ್ರಜ್ವಲ್‌ ರೇವಣ್ಣ ಮತದಾನ ಚಲಾಯಿಸಿದ್ದಾರೆ. ಪ್ರತಿ ಬಾರಿಯೂ ಕುಟಂಬ ಸಮೇತರಾಗಿ ಬಂದು ಮತದಾನ ಮಾಡುತ್ತಿದ್ದ ಪ್ರಜ್ವಲ್ ರೇವಣ್ಣ, ಈ ಬಾರಿ ಒಬ್ಬರೇ ಬಂದು ಮತದಾನ ಮಾಡಿದ್ದಾರೆ.

ಮತಚಲಾಯಿಸಿದ ಯದುವೀರ್

ಮೈಸೂರು: ಬಿಜೆಪಿ ಅಭ್ಯರ್ಥಿ ಯದುವೀರ್ ಮತಗಟ್ಟೆ ಸಂಖ್ಯೆ 176ರಲ್ಲಿ ಮತದಾನ ಮಾಡಿದ್ದಾರೆ. ಮತಚಲಾಯಿಸೋದಕ್ಕೂ ಮುನ್ನ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಹಾರಾಣಿ ಪ್ರಮೋದ ದೇವಿ ಹಾಗೂ ಪತ್ನಿ ತ್ರಿಶಿಕಾ ದೇವಿ ಜೊತೆ ಆಗಮಿಸಿದ ಯದುವೀರ್ ಅಗ್ರಹಾರದ ಶ್ರೀಕಾಂತ ಶಾಲೆಯ ಮತಗಟ್ಟೆ ಸಂಖ್ಯೆ 176ರಲ್ಲಿ ಮತದಾನ ಮಾಡಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ್ದಾರೆ. ಮತಗಟ್ಟೆ ಸಂಖ್ಯೆ 179ರಲ್ಲಿ ಪ್ರಮೋದ ದೇವಿ ಮತದಾನ ಮಾಡಿದ್ದಾರೆ.

ಸಿ.ಟಿ.ರವಿ ದಂಪತಿಯಿಂದ ಮತದಾನ

ಚಿಕ್ಕಮಗಳೂರು: ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ದಂಪತಿ ಚಿಕ್ಕಮಗಳೂರು ನಗರದ ಬಸವನಹಳ್ಳಿಯಲ್ಲಿ ಮತದಾನ ಮಾಡಿದ್ದಾರೆ. ಬೆಳ್ಳಂಬೆಳಗ್ಗೆ ಮತದಾನ ಕೇಂದ್ರಕ್ಕೆ ಆಗಮಿಸಿದ ಸಿ.ಟಿ.ರವಿ ದಂಪತಿ ಮತಗಟ್ಟೆ ಸಂಖ್ಯೆ 204ರಲ್ಲಿ ಮತದಾನ ಮಾಡಿದ್ದಾರೆ.

ಸುನಿಲ್ ಕುಮಾರ್ ಮತದಾನ

ಉಡುಪಿ: ಕಾರ್ಕಳದ ಬಿಜೆಪಿ ಶಾಸಕ ಸುನಿಲ್ ಕುಮಾರ್ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದರು. ಬೂತ್ ಸಂಖ್ಯೆ 140 ರಲ್ಲಿ ಕುಟುಂಬ ಸಮೇತರಾಗಿ ಅವರು ಮತದಾನ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+