ಹಾಸನ ಜಿಲ್ಲೆಯ ಚೌಡನಹಳ್ಳಿಯಲ್ಲಿ 38 ಕೋತಿಗಳನ್ನು ಕೊಂದ ಕ್ರೂರಿಗಳು!?

ಹಾಸನ, ಜುಲೈ 29: ಹಾಸನ ಜಿಲ್ಲೆಯ ಗ್ರಾಮವೊಂದರ ರಸ್ತೆ ಮಧ್ಯದಲ್ಲೇ ದೊಡ್ಡ ಗೋಣಿ ಚೀಲವೊಂದನ್ನು ಎಸೆಯಲಾಗಿತ್ತು. ನಡುರಸ್ತೆಯಲ್ಲಿ ಬಿದ್ದಿರುವ ಈ ಚೀಲದಲ್ಲಿ ಏನಿರಬಹುದು ಎಂದು ಸ್ಥಳೀಯರು ಅದನ್ನು ತೆರೆದು ನೋಡಿದಾಗ ಮನಕಲುಕುವಂತಾ ದೃಶ್ಯ ಕಣ್ಣಿಗೆ ರಾಚಿತು.
ಕರ್ನಾಟಕದ ಹಾಸನ ಜಿಲ್ಲೆಯ ಚೌಡನಹಳ್ಳಿ ಗ್ರಾಮವು ಗುರುವಾರ ಅಮಾನುಷ ಸನ್ನಿವೇಶವೊಂದಕ್ಕೆ ಸಾಕ್ಷಿ ಆಯಿತು. 38ಕ್ಕೂ ಹೆಚ್ಚು ಕೋತಿಗಳಿಗೆ ವಿಷಾಹಾರ ಉಣಿಸಿ ಹಾಗೂ ಹೊಡೆದು ಕೊಂದು ಹಾಕಿರುವ ಬಗ್ಗೆ ವರದಿಯಾಗಿದೆ. 35ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆಯಾಗಿದ್ದು, 20ಕ್ಕೂ ಹೆಚ್ಚು ಕೋತಿಗಳು ಗಾಯಗೊಂಡಿರುವುದು ಗೊತ್ತಾಗಿದೆ.

"ಹಾಸನ ಜಿಲ್ಲೆಯ ಚೌಡನಹಳ್ಳಿಯಲ್ಲಿ ಕೆಲವು ದುಷ್ಕರ್ಮಿಗಳಉ ಕೋತಿಗಳಿಗೆ ವಿಷಾಹಾರ ನೀಡಿ ನಂತರ ಅವುಗಳನ್ನು ಗೋಣಿ ಚೀಲದಲ್ಲಿ ತುಂಬಿ ಥಳಿಸಿ ಕೊಂದಿರುವ ಬಗ್ಗೆ ಎಂದು ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡು ನರಳುತ್ತಿದ್ದ 20 ಕೋತಿಗಳಿಗೆ ಗ್ರಾಮಸ್ಥರು ನೀರು ಆಹಾರ ನೀಡಿ ಆರೈಕೆ ಮಾಡಿದ್ದಾರೆ.

In Karnatakas Hassan district 38 monkeys Death by poisoning

Recommended Video

      ವಿಜೇತ ಟ್ವೀಟ್ ಗೆ ಸ್ವಾಗತ ಕೋರಿದ HDK | Oneindia Kannada

      ದುಷ್ಕರ್ಮಿಗಳ ಕೃತ್ಯಕ್ಕೆ ಗ್ರಾಮಸ್ಥರ ತೀವ್ರ ಆಕ್ರೋಶ:
      ಹಾಸನ ಜಿಲ್ಲೆಯ ಚೌಡನಹಳ್ಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಕೋತಿಗಳೇ ಇರಲಿಲ್ಲ. ಬೇರೆ ಯಾವುದೋ ಊರಿನಿಂದ ಕೋತಿಗಳನ್ನು ಹೊಡೆದು ಹಾಕಿ ಅದನ್ನು ಈ ಗ್ರಾಮದ ರಸ್ತೆಯ ನಡುವೆ ಎಸೆದು ಹೋಗಲಾಗಿದೆ," ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋತಿಗಳಿಗೆ ವಿಷ ಮಿಶ್ರಿತ ಆಹಾರವನ್ನು ನೀಡಲಾಗಿದೆ. ಅದರಿಂದ ನಿತ್ರಾಣಗೊಂಡ ಕೋತಿಗಳನ್ನು ಗೋಣಿ ಚೀಲದಲ್ಲಿ ತುಂಬಿ ಅವುಗಳು ಸಾವನ್ನಪ್ಪುವಂತೆ ಥಳಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+