• search
For hassan Updates
Allow Notification  

  ಎಚ್ಡಿಕೆ ಆಸೆ : ಪ್ರತಿ ತಿಂಗಳು ಜಿಲ್ಲೆಯೊಂದರಲ್ಲಿ ರೈತರ ಜತೆ ಸಂವಾದ

  By Mahesh
  |

  ಹಾಸನ, ಆಗಸ್ಟ್ 14: ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವುದರ ಜೊತೆಗೆ ಜನಪರ ಆಡಳಿತದ ಮೂಲಕ ಅಭಿವೃದ್ದಿ ಸಾಧಿಸುವುದು ತಮ್ಮ ಗುರಿ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

  ಇನ್ನು ಮುಂದೆ ಪ್ರತಿ ತಿಂಗಳೂ ರಾಜ್ಯದ ಯಾವುದಾದರೊಂದು ಜಿಲ್ಲೆಯಲ್ಲಿ ಒಂದು ದಿನ ಬೆಳಗ್ಗೆಯಿಂದ ಸಂಜೆಯವರೆಗೆ ರೈತರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

  ರಾಜ್ಯದಲ್ಲಿ ಅತಿವೃಷ್ಟಿಯಿಂದ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ನಗರ ಸ್ಥಳಿಯ ಸಂಸ್ಥೆಗಳ ಚುನಾವಣೆ ನಂತರ ಆ ಭಾಗದ ಜಿಲ್ಲೆಗಳಿಗೆ ತೆರಳಿ ಎರೆಡೆರಡು ದಿನ ಇದ್ದು ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ಕ್ರಮ ವಹಿಸಲಾಗುವುದು ಎಂದರು.

  ಹಾಸನದ ಹರದನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಸರ್ವತೋಮುಖ ಅಭೀವೃದ್ದಿಗೆ ನಿರಂತರ ಶ್ರಮ ವಹಿಸಲಾಗುವುದು. ಉತ್ತರ-ದಕ್ಷಿಣ ಎಂಬ ತಾರತಮ್ಮವಿಲ್ಲದೆ ಸರ್ಕಾರ ಕೆಲಸ ನಿರ್ವಹಿಸುತ್ತಿದದ್ದು ಅಭಿವೃದ್ದಿಯ ಮೂಲಕವೇ ಟಿಕೆಗಳಿಗೆ ಉತ್ತರ ನೀಡಲಾಗುವುದು ಎಂದರು.

  ಹರದನಹಳ್ಳಿ ತಮ್ಮ ಹುಟ್ಟೂರು ಬಾಲ್ಯದಿಂದಲು ಇಲ್ಲಿ ತಂದೆಯವರೊಂದಿಗೆ ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ, ಶ್ರಾವಣ ಮಾಸ ವಿಶೇಷ, ನಾಡಿನ ಜನತೆಗೆ ಒಳಿತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೂಜೆ ಸಲ್ಲಿಸುವುದಾಗಿ ಅವರು ಹೇಳಿದರು.

  ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವರಾದ ಹೆಚ್.ಡಿ.ರೇವಣ್ಣ ಶಾಸಕರಾದ ಸಿ.ಎನ್ ಬಾಲ ಕೃಷ್ಣ, ಕೆ.ಎಸ್. ಲಿಂಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

  ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಮನ್ನಾ

  ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಮನ್ನಾ

  ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಲಾಗಿದೆ 10,734 ಕೋಟಿ ರೂಪಾಯಿ ಸಾಲದಲ್ಲಿ ರೂ 944ಕೋಟಿ ಸಾಲ ಮನ್ನಾ ಆಗಲಿದೆ.ಈ ಬಗ್ಗೆ ಆರ್ಥಿಕ ಹಾಗೂ ಸಹಕಾರ ಇಲಾಖೆಗಳ ಜೊತೆ ಚರ್ಚಿಸಿ ಮೊದಲ ಕಂತಿನ ಹಣ ಬಿಡುಗೆಡೆ ಮಾಡಲಾಗಿದೆ, ಹಿಂದಿನ ಸರ್ಕಾರ ಮಾಡಿದ್ದ ರೂ 50,000 ವರೆಗಿನ ಸಾಲ ಮನ್ನಾದ ಮೊತ್ತ ರೂ. 4,000 ಕೋಟಿ ಸೇರಿಸಿ 13,500 ಕೋಟಿ ರೂ ಸಾಲ ಮನ್ನಾಮಾಡಿ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿ ಯವರು ಹೇಳಿದರು.

  ಮುಂದಿನ ಗುರುವಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲವನ್ನು ಮನ್ನಾ ಮಾಡಲಾಗುವುದು 37,000 ಕೋಟಿ ರೂಪಾಯಿ ಸಾಲ ಅಂದಾಜಿಸಲಗಿದೆ. ನಾಲ್ಕು ಕಂತಿನಲ್ಲಿ ಇದನ್ನು ಪಾವತಿಲಾಗುವುದು ಬ್ಯಾಂಕ್‍ಗಳು ಒಪ್ಪಿವೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

  ಸಾಲ ಮನ್ನಾ ಸಂಪನ್ಮೂಲ ಕ್ರೂಡಿಕರಣಕ್ಕೆ ಆತಂಕ ಇಲ್ಲ

  ಸಾಲ ಮನ್ನಾ ಸಂಪನ್ಮೂಲ ಕ್ರೂಡಿಕರಣಕ್ಕೆ ಆತಂಕ ಇಲ್ಲ

  ಸಾಲ ಮನ್ನಾ ಸಂಪನ್ಮೂಲ ಕ್ರೂಡಿಕರಣಕ್ಕೆ ಯಾವುದೇ ಆತಂಕ ಇಲ್ಲ ಈ ಬಾರಿ ಶೇ. 33.5ರಷ್ಟು ಆದಾಯ ಸಂಗ್ರಹ ಹೆಚ್ಚಳದ ನಿರೀಕ್ಷೆ ಇದೆ. ಸೋರಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಕ್ರಮವಹಿಸಲಾಗಿದೆ ಎಂದು ಅವರು ವಿವರಿಸಿದರು.
  2018-19ನೇ ಸಾಲಿನಲ್ಲಿ ಅಬಕಾರಿ ತೆರಿಗೆ ಈಗಾಗಲೆ 6,541 ಕೋಟಿ ರೂಪಾಯಿ ಸಂಗ್ರಹವಾಗಿದೆ, ಕಳೆದ ಸಾಲಿಗಿಂತ 883 ಕೋಟಿ ರೂಪಾಯಿ ಅಂದರೆ ಶೇ 15ರಷ್ಟು ಹೆಚ್ಚಳವಾಗಿದೆ. ಇದೇ ರೀತಿ ಮೋಟಾರು ವಾಹನ ತೆರಿಗೆ ಸಂಗ್ರಹ, ನೊಂದಣಿ ಮತ್ತು ಮುದ್ರಾಕ ಶುಲ್ಕ, ವಾಣಿಜ್ಯ ತೆರಿಗೆ ಹೆ ಸಂಗ್ರಗಳು ಹೆಚ್ಚಳವಾಗಿದೆ ಕೇಂದ್ರದಿಂದ ಜಿ.ಎಸ್.ಟಿ ಹೊಂದಾಣಿಕೆ ಹಣವೂ ಬರಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು.

  ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳುದಂಧೆಯನ್ನು ನಿಯಂತ್ರಿಸಿ ಬಡವರಿಗೆ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಸಿಗುವಂತೆ ಮಾಡಲು ಹಾಲಿಇರುವ ನಿಯಾವಳಿಯಲ್ಲಿ ತಿದ್ದುಪಡಿ ತರಲಾಗುವುದು ಇದ್ದಕ್ಕಾಗಿ ಮುಂದಿನ ವಾರದಲ್ಲಿ ವಿಶೇಷ ಸಭೆ ಕರೆಯಲಾಗುವುದು ಎಂದರು.

  ಆಲೂಗೆಡ್ಡೆ ಬೆಳೆಯುವವರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ

  ಆಲೂಗೆಡ್ಡೆ ಬೆಳೆಯುವವರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ

  ಹಾಸನದಲ್ಲಿ ಆಲೂಗೆಡ್ಡೆ ಬೆಳೆಯುವವರು ಪ್ರತಿವರ್ಷ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಇದ್ದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಿದೆ. ಅದರ ಬಗ್ಗೆಯೂ ಕೂಡಾ ಸಮಾಲೋಚನೆ ನಡೆಸಿ ಹವಾಮಾನಕ್ಕೆ ತಕ್ಕಂತೆ ಬೆಳೆಬ ಪದ್ದತಿ ಜಾರಿಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಾಗುವುದು.
  ಕೃಷಿಕರಿಗೆ ಸಹಕಾರ ಕ್ಷೇತ್ರದಲ್ಲಿಯೇ ಬದಲಾವಣೆ ತರುವ ಮೂಲಕ ಮೀಟರ್ ಬಡ್ಡಿ ದಂಧೆ ಮಟ್ಟಕ್ಕೆ ಬ್ರೇಕ್ ಹಾಕುವ ಕ್ರಮಗಳನ್ನು ಕೈಗೊಳ್ಳಾಲಾಗುವುದು ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.
  ರೈತರನ್ನು ಉಳಿಸಲು ಹಲವು ಪೂರಕ ಯೋಜನೆಗಳ ಜಾರಿಯಾಗಬೇಕಿವೆ, ತಾಂತ್ರಿಕ ನೆರವು ಅಗತ್ಯವಿದೆ ಇದಕ್ಕಾಗಿ ಇಸ್ರೇಲ್ ಮಾದರಿ ಕೃಷಿಗೆ ಸರ್ಕಾರ ಒತ್ತು ನೀಡುತ್ತಿದೆ. ವಿಪ್ರೋದ ಅಜೀಂಪ್ರೇಮ್ ಜಿ ಫೌಂಡೇಷನ್ ಆಂಧ್ರಪ್ರದೇಶದಲ್ಲಿ ಅನುಷ್ಠಾನಕ್ಕೆ ತಂದಿರುವ ಶೂನ್ಯ ಬಂಡವಾಳ ಕೃಷಿಯನ್ನು ರಾಜ್ಯದಲ್ಲೂ ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

  ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ

  ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆ

  ರೈತರು ನೆಮ್ಮದಿಯಾಗಿದ್ರೆ ರಾಜ್ಯವೂ ಸಂತೋಷವಾಗಿರಲು ಸಾಧ್ಯ ಎಂದ ಅವರು, ರಾಷ್ಟ್ರ ರಾಜಕಾರಣದ ಬಗ್ಗೆ ತಮಗೆ ಒಲವಿಲ್ಲ ರಾಜ್ಯದಲ್ಲೇ ಇದ್ದು ಇಲ್ಲಿನ ಸಮಸ್ಯೆ ಬಗೆಹರಿಸಿ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಯತ್ತಕೊಂಡೊಯ್ಯುವುದು ತಮ್ಮ ಆಧ್ಯತೆ ಎಂದು ಅವರು ತಿಳಿಸಿದರು.

  ಬಾಗೂರು -ನವಿಲೆ ಏತ ನೀರಾವರಿ ಮೂಲಕ 19 ಕೆರೆಗಳಿಗೆ ನೀರು ತುಂಬಿಸುವ 32 ಕೋಟಿ ರೂಪಾಯಿ ಯೋಜನೆಗೆ ಈಗಾಗಾಲೆ ಅನುಮೋದನೆಗೊಂಡಿದೆ, ಶೀಘ್ರದಲ್ಲೇ ಕಾಮಗಾರಿ ಚಾಲನೆಗೊಳ್ಳಲಿದೆ ಎಂದು ಹೇಳಿದರು.

  ದೇಶದಲ್ಲಿ ಯಾವುದೇ ರಾಜ್ಯದಲ್ಲಿ ತೆಂಗು ಬೆಳೆಗಾರರಿಗೆ ನೀಡದಂತಹ ಉತ್ತಮ ಪರಿಹಾರವನ್ನು ನಮ್ಮ ಸರ್ಕಾರ ಒದಗಿಸಿದೆ ಪ್ರತಿ ಎಕರೆ ತೆಂಗು ಬೆಳೆ ಹಾನಿಗೆ 20 ಸಾವಿರ ರೂಪಾಯಿವರೆಗೆ ಪರಿಹಾರ ನೀಡಿದ್ದು ಇದೊಂದು ಐತಿಹಾಸಿಕ ಎಂದು ಅವರು ಹೇಳಿದರು.

  ರಾಜ್ಯದ 2,18,000 ಕೋಟಿ ರೂಪಾಯಿ ಬಜೆಟ್ ನಲ್ಲಿ ಹಾಸನ, ಮಂಡ್ಯ, ರಾಮನಗರ, ಮೈಸೂರು ಜಿಲ್ಲೆಗಳಿಗೆ ನೀಡಿದ್ದು ಒಟ್ಟಾರೆ ಕೇವಲ 516 ಕೋಟಿ ರೂಪಾಯಿ, ಆದರೆ ಉತ್ತರ ಕರ್ನಾಟಕದಲ್ಲಿ ಯುವಸಮೂದಾಯಕ್ಕೆ ಉದ್ಯೋಗ ಸೃಷ್ಠಿ ಯೋಜನೆ ಜಾರಿಗೆ ತರಲು 500ಕೋಟಿ, ಇಸ್ರೇಲ್ ಮಾದರಿ ಕೃಷಿ ಪದ್ದತಿ ಅಳವಡಿಕೆಗೆ 600ಕೋಟಿ ರೂಪಾಯಿ ಅಲ್ಲದೆ ಇನ್ನೂ ಹತ್ತಾರು ಯೋಜನೆಗಳಿಗೆ ಅನುದಾನ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  ಇನ್ನಷ್ಟು ಹಾಸನ ಸುದ್ದಿಗಳುView All

  English summary
  Karnataka Chief Minister HD Kumaraswamy wants to interact with Farmers every month at district level.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more