ಕಾರಿನಡಿ ಸಿಲುಕಿದರೂ ಪವಾಡ ರೀತಿಯಲ್ಲಿ ಪಾರಾದ ಬಾಲಕಿ
ಹಾಸನ, ಜುಲೈ 31: ಕಾರಿನಡಿ ಸಿಲಿಕಿದರೆ ಯಾರಾದರೂ ಬದುಕುಳಿಯುವುದುಂಟೇ ಆದರೆ ಮಗುವೊಂದು ಕಾರಿನ ಚಕ್ರಕ್ಕೆ ಸಿಲುಕಿ ಅದೃಷ್ಟವಷಾತ್ ಪಾರಾಗಿ ಬಂದಿರುವ ಘಟನೆ ಹಾಸನದಲ್ಲಿ ನಡೆದಿದೆ.
ಮಗುವೊಂದು ಪೋಷಕರ ಕಣ್ತಪ್ಪಿನಿಂದ ರಸ್ತೆಗೆ ಬಂದಿದೆ, ಅದನ್ನು ನೋಡದ ಕಾರು ಚಾಲಕ ಮಗುವಿನ ಮೇಲೆ ಕಾರು ಹರಿಯುವಂತೆ ರಿವರ್ಸ್ ತೆಗೆದಿದ್ದಾರೆ, ಚಕ್ರ ಮಗುವಿನ ಮೇಲೆ ಹತ್ತಿದೆ, ಬಳಿಕ ಕಾರು ಅಲ್ಲಿಂದ ಮುಂದಕ್ಕೆ ಹೋಗಿದೆ, ಬಳಿಕ ಅಲ್ಲಿ ಮಗು ಇದ್ದುದನ್ನು ಕಂಡ ಸಾರ್ವಜನಿಕರು ತಕ್ಷಣವೇ ಚಿಕಿತ್ಸೆಗಾಗಿ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.

ಈ ಘಟನೆ ಹಾಸನದ ಕುವೆಂಪು ನಗರದಲ್ಲಿ ನಡೆದಿದ್ದು, ಮಗು ಪವಾಡವೆಂಬಂತೆ ಬದುಕಿಬಂದಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ, ಮಗುವು ಅದೃಷ್ಟವಷಾತ್ ಪಾರಾಗಿರುವುದು ಸಿಸಿಕ್ಯಾಮರಾದಲ್ಲಿ ಸೆರೆಯಾಗಿದೆ, ಘಟನೆಯಿಂದ ಬಾಲಕಿ ಗಾಬಿರೊಗೊಂಡಿದ್ದಳು, ಈ ಘಟನೆ ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.












Click it and Unblock the Notifications