Breaking; ಗುವಾಹಟಿ ಪಾಲಿಕೆ ಚುನಾವಣೆ; ಬಿಜೆಪಿ ಮುನ್ನಡೆ
ದಿಸ್‌ಪುರ್, ಏಪ್ರಿಲ್ 24; ಅಸ್ಸಾಂನ ಗುವಾಹಟಿ ಪಾಲಿಕೆ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. 57 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11ರಲ್ಲಿ ಗೆಲವು ಸಾಧಿಸಿದೆ. ಮತ ಎಣಿಕೆ ಇನ್ನೂ ಪ್ರಗತಿಯಲ್ಲಿದೆ.
ಭಾನುವಾರ ಗುವಾಹಟಿ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. 57 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳಲ್ಲಿ ಬಿಜೆಪಿ ಜಯಗಳಿಸಿದೆ. ಬಿಜೆಪಿಯ ಮೈತ್ರಿಕೂಟ ಎಜಿಪಿ 2 ವಾರ್ಡ್‌ಗಳಲ್ಲಿ ಜಯಗಳಿಸಿದೆ.
ಕಮ್ರೂಪ್ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಮತ್ತು ಎಜೆಪಿ ಪಕ್ಷದ ಅಭ್ಯರ್ಥಿ ತಲಾ 1 ವಾರ್ಡ್‌ಗಳಲ್ಲಿ ಜಯಗಳಿಸಿದ್ದಾರೆ. 9 ವರ್ಷಗಳ ಬಳಿಕ ಗುಹಾವಟಿ ಪಾಲಿಕೆಗೆ ಚುನಾವಣೆ ನಡೆದಿತ್ತು.

ಬಿಜೆಪಿ ಗೆದ್ದಿರುವ 11 ವಾರ್ಡ್‌ಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾಸ್ ಶರ್ಮಾ ಪಾಲಿಕೆ ಚುನಾವಣೆಯ ಪ್ರಚಾರ ನೇತೃತ್ವ ವಹಿಸಿದ್ದರು. ನಗರದಲ್ಲಿ ಹಲವು ಸಮಾವೇಶ ಉದ್ದೇಶಿಸಿ ಮತ ಯಾಚನೆ ಮಾಡಿದ್ದರು.
57 ವಾರ್ಡ್‌ಗಳ ಪೈಕಿ ಬಿಜೆಪಿ ಅಭ್ಯರ್ಥಿಗಳು 20ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಆಮ್ ಆದ್ಮಿ ಪಕ್ಷದ ಶಾಸಕ ಅತಿಷಿ ಪಕ್ಷದ ಪರವಾಗಿ ಪ್ರಚಾರದ ಉಸ್ತುವಾರಿ ವಹಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿಗಳು 54 ವಾರ್ಡ್‌ಗಳಲ್ಲಿ ಕಣದಲ್ಲಿದ್ದರು. ಅಧಿಕಾರಕ್ಕೆ ಬಂದ 100 ದಿನದಲ್ಲಿ ಎಲ್ಲಾ ವಾರ್ಡ್‌ಗಳ ಎಲ್ಲಾ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಭರವಸೆಯನ್ನು ಪಕ್ಷದ ನೀಡಿತ್ತು.












Click it and Unblock the Notifications