ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಕತ್ತಲು ಬಯಸಿದರೆ ಕಾಂಗ್ರೆಸ್ ಜೊತೆಯಿರಿ, ಇಲ್ಲವೇ ಮೋದಿ ಕೈಹಿಡಿಯಿರಿ"

|
Google Oneindia Kannada News

ಅಸ್ಸಾಂ, ಮಾರ್ಚ್ 22: ಎರಡು ಬಗೆಯ ಹಲ್ಲುಗಳನ್ನು ಹೊಂದಿರುವ ಆನೆಯಂತೆ ಈ ಕಾಂಗ್ರೆಸ್. ಒಂದು ಪ್ರದರ್ಶನಕ್ಕಿದ್ದರೆ ಮತ್ತೊಂದು ಜಗಿಯುವುದಕ್ಕೆ. ಕಾಂಗ್ರೆಸ್ ಕೂಡ ಹಾಗೆಯೇ. ಒಂದನ್ನು ಹೇಳುತ್ತದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜೆ.ಪಿ. ನಡ್ಡಾ.

ಸೋಮವಾರ ಅಸ್ಸಾಂನ ದಿಬ್ರುಗಡ ಜಿಲ್ಲೆಯ ಟಿಂಗ್‌ಖಾಂಗ್‌ನಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮೇಲೆ ಟೀಕಾಪ್ರಹಾರ ಮಾಡಿದರು. ಕಾಂಗ್ರೆಸ್ ಅವಕಾಶವಾದ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಸ್ಸಾಂ ಕತ್ತಲಿಗೆ ಸರಿಯುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದರು. ಮುಂದೆ ಓದಿ...

"ಕಾಂಗ್ರೆಸ್‌ನದು ಅವಕಾಶವಾದದ ರಾಜಕೀಯ"

ಅವಕಾಶವಾದದ ರಾಜಕೀಯ ಕಾಂಗ್ರೆಸ್‌ನ ಏಕೈಕ ಗುರಿಯಾಗಿದೆ. ಮುಸ್ಲಿಂ ಲೀಗ್‌ ಜೊತೆ ಸೇರಿ ಕೇರಳದಲ್ಲಿ ಸಿಪಿಐ (ಎಂ) ವಿರುದ್ಧ ಕಾಂಗ್ರೆಸ್ ಕಣದಲ್ಲಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ಹಾಗೂ ಅಸ್ಸಾಂನಲ್ಲಿ ಆ ಪಕ್ಷದ ಜೊತೆಗೇ ಮೈತ್ರಿಯಲ್ಲಿದೆ. ಇದು ಅವಕಾಶವಾದ ರಾಜಕೀಯವಲ್ಲದೇ ಮತ್ತೇನು ಎಂದು ನಡ್ಡಾ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ಗೆ ನಾಯಕರೂ ಇಲ್ಲ, ನೀತಿಯೂ ಇಲ್ಲ, ಸಿದ್ಧಾಂತವೂ ಇಲ್ಲ; ಮೋದಿಕಾಂಗ್ರೆಸ್‌ಗೆ ನಾಯಕರೂ ಇಲ್ಲ, ನೀತಿಯೂ ಇಲ್ಲ, ಸಿದ್ಧಾಂತವೂ ಇಲ್ಲ; ಮೋದಿ

"ಅಂಧಕಾರ ಬೇಕಿದ್ದರೆ ಕಾಂಗ್ರೆಸ್ ಜೊತೆಯಿರಿ"

ಎರಡು ರೀತಿಯ ಹಲ್ಲುಗಳನ್ನು ಹೊಂದಿರುವ ಆನೆಯಂತೆ ಕಾಂಗ್ರೆಸ್‌. ಒಂದನ್ನು ಹೇಳಿ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತದೆ. ಕಾಂಗ್ರೆಸ್ ಸಮಾಜವನ್ನೇ ಒಡೆಯುತ್ತಿದೆ ಎಂದು ದೂರಿದರು. "ನಿಮಗೆ ಅಂಧಕಾರ ಬೇಕೆಂದರೆ, ಕಾಂಗ್ರೆಸ್‌ ಜೊತೆಗಿರಿ. ಅಭಿವೃದ್ಧಿ ಬೇಕೆಂದರೆ ನರೇಂದ್ರ ಮೋದಿಯವರ ಕೈ ಹಿಡಿಯಿರಿ" ಎಂದು ಹೇಳಿದರು.

"50 ವರ್ಷಗಳಿಂದಲೂ ಬೋಡೊ ಸಮಸ್ಯೆ ನಿವಾರಿಸಿಲ್ಲ"

ಸ್ವಾತಂತ್ರ್ಯಾನಂತರದಿಂದಲೂ ಕಾಂಗ್ರೆಸ್ ಅಸ್ಸಾಂ ಅನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಈ ಪ್ರದೇಶದ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ. ಐವತ್ತು ವರ್ಷದಿಂದಲೂ ಬೋಡೊಗಳ ಸಮಸ್ಯೆಯನ್ನು ನಿವಾರಿಸಿಲ್ಲ. ಕಾಂಗ್ರೆಸ್‌ನಿಂದಲೇ ಅಭಿವೃದ್ಧಿ ರಥದ ಚಕ್ರಗಳು ನಿಂತಿವೆ. ಅಸ್ಸಾ ಸಂಸ್ಕೃತಿಯನ್ನೇ ಬದಿಗಿಟ್ಟು ನಾಗರಿಕತೆ ಮೇಲೆ ಕಾಂಗ್ರೆಸ್ ಆಕ್ರಮಣ ಮಾಡಿತು. ಆದರೆ ಬಿಜೆಪಿ ಇಲ್ಲಿ ಅಭಿವೃದ್ಧಿ ತಂದು ಅಸ್ಸಾಂನ ಸಂಸ್ಕೃತಿ ಹಾಗೂ ಭಾಷೆಯನ್ನು ರಕ್ಷಿಸಿತು ಎಂದು ಹೇಳಿದರು.

ಪ್ರಧಾನಿ ಎಂದಾದರೂ ಚಹಾ ತೋಟಕ್ಕೆ ಹೋಗಿದ್ದೀರಾ?: ಪ್ರಿಯಾಂಕಾ ಪ್ರಶ್ನೆಪ್ರಧಾನಿ ಎಂದಾದರೂ ಚಹಾ ತೋಟಕ್ಕೆ ಹೋಗಿದ್ದೀರಾ?: ಪ್ರಿಯಾಂಕಾ ಪ್ರಶ್ನೆ

 ಅಸ್ಸಾಂನಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷಗಳು

ಅಸ್ಸಾಂನಲ್ಲಿ ಕಾಂಗ್ರೆಸ್ ಮೈತ್ರಿ ಪಕ್ಷಗಳು

ಇಲ್ಲಿನ ಎಐಯುಡಿಎಫ್, ಬಿಪಿಎಫ್, ಸಿಪಿಐ, ಸಿಪಿಐ (ಎಂ), ಸಿಪಿಐ (ಎಂಎಲ್), ಅಚಾಲಿಕ್ ಗಣ ಮೋರ್ಚ, ಆರ್‌ಜೆಡಿ ಹಾಗೂ ಜಿಮೊಚಯನ್ ಪೀಪಲ್ ಪಾರ್ಟಿ ಜೊತೆ ಕಾಂಗ್ರೆಸ್ ಮೈತ್ರಿಯಲ್ಲಿದ್ದು, ಬಿಜೆಪಿ- ಎನ್‌ಡಿಎ ವಿರುದ್ಧ ಅಸ್ಸಾಂನ ಮುಂಬರುವ ಚುನಾವಣೆಯಲ್ಲಿ ಕಣದಲ್ಲಿದೆ. ಅಸ್ಸಾಂನಲ್ಲಿ 126 ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಚುನಾವಣೆ ಆರಂಭವಾಗಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.

English summary
BJP national president J P Nadda on Monday mocked the Congress, comparing it with an elephant having two sets of teeth - "one to show off and another to chew", alleges JP Nadda in assam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X