ಅಸ್ಸಾಂ ಚುನಾವಣೆ; ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಅಸ್ಸಾಂ, ಮಾರ್ಚ್ 07: ಅಸ್ಸಾಂ ವಿಧಾನಸಭೆ ಚುನಾವಣೆ ಮಾರ್ಚ್ 27ರಿಂದ ಆರಂಭಗೊಳ್ಳಲಿದ್ದು, ಕಾಂಗ್ರೆಸ್ ತನ್ನ 40 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆಗೊಳಿಸಿದೆ.

ಬಿಜೆಪಿಯಿಂದ ಎದುರಾಗಿರುವ ಸವಾಲಿನ ನಡುವೆ ಕಾಂಗ್ರೆಸ್ ಅಧಿಕಾರ ಪಡೆಯುವ ಹಂಬಲದಲ್ಲಿದ್ದು, ಇದಕ್ಕೆ ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದೆ.

ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟವು ಎಐಯುಡಿಎಫ್‌, ಬಿಪಿಎಫ್, ಸಿಪಿಐ (ಎಂ), ಸಿಪಿಐ, ಸಿಪಿಐ (ಎಂಎಲ್) ಹಾಗೂ ಅಂಚಾಲಿಕ್ ಗಣ ಮೋರ್ಚಾವನ್ನು ಮೈತ್ರಿ ಪಕ್ಷಗಳಾಗಿ ಹೊಂದಿದ್ದು, ತನ್ನ ಪಕ್ಷದಲ್ಲಿ ಸೀಟು ಹಂಚಿಕೆ ಕುರಿತು ತೀವ್ರ ಮಾತುಕತೆ ನಡೆಸುತ್ತಿದೆ.

Assam Assembly Election 2021 Congress Releases 40 Candidates List

ಮುಖ್ಯವಾಗಿ, ಬಿಜೆಪಿಯಿಂದ ಟಿಕೆಟ್ ವಂಚಿತನಾಗಿ ಕಾಂಗ್ರೆಸ್ ಸೇರಿದ್ದ ಬಿಟುಪೊನ್ ಸೈಕಿಯಾ ಅವರಿಗೆ ಗೋಲಾಘಾಟ್‌ನಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಅಸ್ಸಾಂ ಮಾಜಿ ಸಚಿವ ಅಂಜನ್ ದತ್ತ ಅವರ ಪುತ್ರಿ ಅಂಕಿತಾ ದತ್ತ ಅಮ್ಗುರಿಯಿಂದ ಕಣಕ್ಕೆ ಇಳಿಯಲಿದ್ದಾರೆ.

ಲಾಹೋವಾಲ್‌ನಿಂದ ಮನೋಜ್ ಧನ್ವಾರ್ ಸ್ಪರ್ಧಿಸಲಿದ್ದಾರೆ. ಮನೋಜ್ ಅವರು ಮಾಜಿ ಸಚಿವ ರಾಮೇಶ್ವರ ಧನ್ವಾರ್ ಅವರ ಪುತ್ರ. ಪ್ರಣಾಜ್ ಘಾಟೊವರ್ ಮೋರಾನ್‌ನಿಂದ ಸ್ಪರ್ಧಿಸಲಿದ್ದಾರೆ. ಅವರು ಕೂಡ ಕೇಂದ್ರ ಮಾಜಿ ಸಚಿವ ಪ್ರಬನ್ ಸಿಂಗ್ ಗಾಟೋವರ್ ಅವರ ಪುತ್ರ.

Assam Assembly Election 2021 Congress Releases 40 Candidates List

ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್‌ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸೀಟುಗಳಿಗೆ ಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+