ಅಸ್ಸಾಂ; ಸಿಡಿಲು ಬಡಿದು 18 ಆನೆಗಳು ಸಾವು

ಗೌಹಾತಿ, ಮೇ 13; ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ 18 ಆನೆಗಳು ಮೃತಪಟ್ಟಿವೆ. ಸಿಡಿಲು ಬಡಿದ ಕಾರಣ ಆನೆಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

"ಬುಧವಾರ ರಾತ್ರಿ ಉದ್ದೇಶಿತ ಖಂಡಾಲಿ ಅಭಯಾರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ" ಎಂದು ವನ್ಯಜೀವಿ ವಿಭಾಗದ ಮುಖ್ಯ ಸಂರಕ್ಷಣಾಧಿಕಾರಿ ಅಮಿತ್ ಶಾಯ್ ಮಾಹಿತಿ ನೀಡಿದ್ದಾರೆ.

"ಘಟನೆ ನಡೆದ ಪ್ರದೇಶ ದುರ್ಗಮವಾಗಿದ್ದು, ಗುರುವಾರ ಮಧ್ಯಾಹ್ನದ ತನಕ ನಮ್ಮ ತಂಡ ಅಲ್ಲಿಗೆ ತಲುಪಲು ಸಾಧ್ಯವಾಗಿಲ್ಲ. ಬೆಟ್ಟಪ್ರದೇಶವೊಂದರ ಮೇಲೆ 14, ಕೆಳಗೆ 8 ಆನೆಗಳ ಶವಗಳು ಪತ್ತೆಯಾಗಿದೆ" ಎಂದು ಅಮಿತ್ ಶಾಯ್ ವಿವರಣೆ ನೀಡಿದ್ದಾರೆ.

elephant

"ಪ್ರಾಥಮಿಕ ಮಾಹಿತಿಯಂತೆ ಆನೆಗಳು ಸಿಡಿಲು ಬಡಿದು ಮೃತಪಟ್ಟಿವೆ. ಶುಕ್ರವಾರ ಮೃತಪಟ್ಟ ಆನೆಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಖಚಿತ ಮಾಹಿತಿ ತಿಳಿಯಲಿದೆ" ಎಂದು ಹೇಳಿದ್ದಾರೆ.

ಸಾಲಾಗಿ ಆನೆಗಳು ಸತ್ತು ಬಿದ್ದಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲವರು ಈ ಘಟನೆಗೆ ಸಂತಾಪವನ್ನು ಸೂಚಿಸಿದ್ದಾರೆ. ಆನೆಗಳ ಸಾವಿಗೆ ನಿಖರ ಕಾರಣ ಏನು ಎಂಬುದು ಶುಕ್ರವಾರ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+