ಗುಪ್ತಾಂಗ ಪ್ರದರ್ಶಿಸಿ, ಹಸ್ತಮೈಥುನ ಮಾಡಿಕೊಂಡವನ ವಿರುದ್ಧ ದೂರು
ಗುರುಗ್ರಾಮ, ಜೂನ್ 18: ವ್ಯಕ್ತಿಯೊಬ್ಬ ಗುಪ್ತಾಂಗವನ್ನು ಪ್ರದರ್ಶಿಸಿ, ಹಸ್ತ ಮೈಥುನ ಮಾಡಿಕೊಂಡಿದ್ದಾಗಿ ಇಪ್ಪತ್ತೊಂಬತ್ತು ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಗುರುಗ್ರಾಮದಲ್ಲಿರುವ ಹೂಡಾ ಸಿಟಿ ಸೆಂಟರ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆ ವ್ಯಕ್ತಿ ಎದುರಾದಾಗ ಸಹಾಯಕ್ಕಾಗಿ ಕೂಗಿದರೂ ಯಾರೂ ನೆರವಿಗೆ ಬರಲಿಲ್ಲ ಎಂದು ಮಹಿಳೆಯು ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ.
ಅರೋಪಿಯು ಬಹಳ ಹೊತ್ತು ಗುಪ್ತಾಂಗ ಪ್ರದರ್ಶಿಸುತ್ತಾ, ಬಯ್ಯುತ್ತಿದ್ದರೂ ಸುತ್ತಮುತ್ತಲಿದ್ದ ಜನರು ನೋಡುತ್ತಿದ್ದರೇ ಹೊರತು ಯಾರೂ ನೆರವಿಗೆ ಬಂದಿಲ್ಲ. ಮಳೆಗೆಯೊಂದರಲ್ಲಿ ಬಟ್ಟೆ ಖರೀದಿ ಮಾಡಿದಾ ಮಹಿಳೆಯು ಎಸ್ಕಲೇಟರ್ ಮೂಲಕ ಇಳಿದು ಮೆಟ್ರೋ ಸಮುಚ್ಚಯವನ್ನು ಪ್ರವೇಶಿಸಿದ್ದರು.

ನಾನು ಮಳಿಗೆಯಿಂದ ಬಂದು, ಎಸ್ಕಲೇಟರ್ ನಿಂದ ಇಳಿಯುವಾಗ ಏನೋ ಆಗುತ್ತಿದೆ ಎಂದು ಹಿಂತಿರುಗಿ ನೋಡಿದೆ. ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ನನಗೆ ಗಾಬರಿ ಆಯಿತು. ನನಗೆ ಎದುರಾದ. ಅವನ ಗುಪ್ತಾಂಗ ತೋರಿಸಿ, ಅವಾಚ್ಯ ಶಬ್ದ ಬಳಸಿದ. ಅವನ ಕಪಾಳಕ್ಕೆ ಹೊಡೆದೆ ಎಂದು ಆಕೆ ಹೇಳಿದ್ದಾರೆ.
ಸಿಸಿಟಿವಿ ಫೂಟೇಜ್ ನಲ್ಲಿ ಆರೋಪಿಯನ್ನು ಮಹಿಳೆಯು ಗುರುತಿಸಿದ್ದಾರೆ. ಆತನ ವಿರುದ್ಧ ಗುರುಗ್ರಾಮ ಪೊಲೀಸರು ಲಿಖಿತ ದೂರು ಪಡೆದಿದ್ದಾರೆ.












Click it and Unblock the Notifications