Get Updates
Get notified of breaking news, exclusive insights, and must-see stories!

Karnataka Elections: ಪತ್ನಿ, ಸಹೋದರನಿಂದ ಟಿಕೆಟ್‌ಗಾಗಿ ಪೈಪೋಟಿ- ವಿಚಿತ್ರ ಸಂದಿಗ್ಧ ಎದುರಿಸುತ್ತಿರುವ ಬಿಜೆಪಿ ಶಾಸಕ

ಗದಗ, ಏಪ್ರಿಲ್‌ 10: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೂ ( Karnataka Assembly Elections 2023 ) ಮುನ್ನ ರಾಜ್ಯದಲ್ಲಿ ಹಲವು ಕುತೂಹಲಕರ ಬೆಳವಣಿಗೆಗಳು ನಡೆಯುತ್ತಿವೆ. ರೋಣ ಬಿಜೆಪಿ ( BJP ) ಶಾಸಕ ಕಳಕಪ್ಪ ಬಂಡಿ ಈ ಬಾರಿ ಟಿಕೆಟ್‌ಗಾಗಿ ಹರಸಾಹಸ ಪಡುತ್ತಿದ್ದಾರೆ. ಕಾರಣ, ರೋಣ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ಪತ್ನಿ ಸಂಯಕ್ತಾ ಹಾಗೂ ಸಹೋದರ ಸಿದ್ದಪ್ಪ ತೀವ್ರ ಪೈಪೋಟಿ ನಡೆಸಿದ್ದಾರೆ.

ಸಂಯುಕ್ತಾ ಅವರು ತಮ್ಮ ಬೆಂಬಲಿಗರ ಮೂಲಕ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರೆ, ಸಿದ್ದಪ್ಪ ಬಹಿರಂಗವಾಗಿಯೇ ತಮ್ಮ ಉಮೇದುವಾರಿಕೆ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಇನ್ನು ಹಲವು ಆಕಾಂಕ್ಷಿಗಳು ಕೂಡ ಕ್ಷೇತ್ರದಲ್ಲಿ ತಮ್ಮ ಉಮೇದುವಾರಿಕೆ ಬಗ್ಗೆ ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ರೋಣ ಕ್ಷೇತ್ರದ ಹಾಲಿ ಶಾಸಕ ಕಳಕಪ್ಪ ಬಂಡಿ ಅವರು ವಿಚಿತ್ರ ಸಂದಿಗ್ಧ ಎದುರಿಸುತ್ತಿರುವ ಮೇಲ್ನೋಟಕ್ಕೆ ಕಂಡುಬಂದಿದೆ.

Karnataka Elections: BJP MLA Kalakappa Bandi faces competition for ticket from wife and brother

ಈ ವಿಚಾರವಾಗಿ 'ಟೈಮ್ಸ್‌ ಆಫ್‌ ಇಂಡಿಯಾ' ಜೊತೆ ಮಾತನಾಡಿರುವ ಸಿದ್ದಪ್ಪ ಅವರು, 'ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದೇನೆ. ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ವರೆಗೂ ಬಿಜೆಪಿಗಾಗಿ ಶ್ರಮಿಸಿದ್ದೇನೆ' ಎಂದು ಹೇಳಿದ್ದಾರೆ.

'ನಾವು ಕಳೆದ 20 ವರ್ಷಗಳಿಂದ ನಮ್ಮ ಅಣ್ಣನಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದಾಗ್ಯೂ, 2018 ರಿಂದ ಅವರ ಕಾರ್ಯಕ್ಷಮತೆಯ ಬಗ್ಗೆ ನಾವು ನಿರಾಶೆಗೊಂಡಿದ್ದೇವೆ. ವಿಶೇಷವಾಗಿ, ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಅವರು ನಮ್ಮ ಜನರಿಗೆ ಸಹಾಯ ಮಾಡಲಿಲ್ಲ. ಆದರೆ ನರಗುಂದ ಶಾಸಕ ಸಿ ಸಿ ಪಾಟೀಲ್‌ ನಮ್ಮ ಕ್ಷೇತ್ರದ ಜನರ ನೆರವಿಗೆ ಬಂದರು' ಎಂದು ತಿಳಿಸಿದ್ದಾರೆ.

'ನಮ್ಮ ಸಹೋದರನ ವರ್ತನೆ ನೋಡಿ ಕ್ಷೇತ್ರದ ಅನೇಕ ಯುವಕರು ಮತ್ತು ಹಿರಿಯರು ನಾನು ಚುನಾವಣೆಗೆ ಸ್ಪರ್ಧಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಬರುವ ರೋಣ, ಗಜೇಂದ್ರಗಡ, ನರೇಗಲ್ ಪಟ್ಟಣಗಳ ಮತದಾರರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದೇವೆ. ನಾನು ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದರಿಂದ ಪಕ್ಷದ ಮುಖಂಡರು ಟಿಕೆಟ್ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.

Karnataka Elections: BJP MLA Kalakappa Bandi faces competition for ticket from wife and brother

ಸಹೋದರರ ನಡುವಿನ ಪೈಪೋಟಿಯನ್ನು ರೋಣ ಕ್ಷೇತ್ರದ ಜನರು ಸಂಶಯಾಸ್ಪದವಾಗಿ ನೋಡುತ್ತಿದ್ದಾರೆ. ಇದು ಬಂಡಿ ಕುಟುಂಬದ ಸದಸ್ಯರಿಗೆ ಟಿಕೆಟ್ ಉಳಿಸಿಕೊಳ್ಳುವ ತಂತ್ರ ಎಂದು ಜನರು ಹೇಳುತ್ತಿದ್ದಾರೆ. ಇದು ನಾಟಕವಲ್ಲ ಎಂದು ಗಜೇಂದ್ರಗಡ ಸಮೀಪದ ಕಾಲಕಾಲೇಶ್ವರ ದೇವಸ್ಥಾನದಲ್ಲಿ ಪ್ರಮಾಣ ಮಾಡುವುದಾಗಿ ಎಂದು ಸಿದ್ದಪ್ಪ ಹೇಳಿದ್ದಾರೆ.

ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆಯಲ್ಲಿ ಈ ಬಾರಿ ಬಂಡಿ ಸೋಲುವ ಶಂಕೆ ವ್ಯಕ್ತವಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮೂಲಗಳು ತಿಳಿಸಿವೆ. 'ಈ ವರದಿಯನ್ನು ತಿಳಿದ ಬಂಡಿ ತನ್ನ ಹೆಂಡತಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿರಬಹುದು' ಎಂದೂ ಮೂಲಗಳು ಹೇಳಿವೆ.

ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳಲ್ಲಿ ಪತಿಯ ಯಶಸ್ಸಿಗೆ ಶ್ರಮಿಸಿದ್ದೇನೆ ಎಂದು ಸಂಯುಕ್ತಾ ಹೇಳಿದ್ದಾರೆ.

'ಈಗ ನಾನು ರಾಜಕೀಯದಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಉದ್ದೇಶದಿಂದ ನನಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ಅವರು ಮನಃಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ. ನಾನು ಎರಡು- ಮೂರು ವರ್ಷಗಳಿಂದ ತಳಮಟ್ಟದಲ್ಲಿ ಕೆಲಸ ಮಾಡಿದ್ದು, ಮಹಿಳಾ ಮತದಾರರು ಬೆಂಬಲ ನೀಡಿದ್ದಾರೆ. ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರನಾಗಿರುವುದರಿಂದ ಮತ್ತು ಕಿತ್ತೂರು ಚನ್ನಮ್ಮನ ಕುಟುಂಬಕ್ಕೆ ಸೇರಿದ ನಾನು ನನ್ನನ್ನು ಸಾಬೀತುಪಡಿಸಲು ಬಯಸುತ್ತೇನೆ' ಎಂದು ಸಂಯುಕ್ತಾ 'ಟೈಮ್ಸ್‌ ಆಫ್‌ ಇಂಡಿಯಾ' ಪತ್ರಿಕೆಗೆ ತಿಳಿಸಿದ್ದಾರೆ.

ಕಳಕಪ್ಪ ಕರೆಗಳಿಗೆ ಸ್ಪಂದಿಸಲಿಲ್ಲ ಎಂದು ಪತ್ರಿಕೆ ವರದಿ ಮಾಡಿದೆ.

ಬಂಡಿ ಕುಟುಂಬದ ಮೂವರು ಸದಸ್ಯರು ಅಲ್ಲದೇ, ರವಿ ದಂಡಿನ್, ಅಂದಪ್ಪ ಸಂಕನೂರು, ಹೇಮಗಿರೀಶ್ ಹಾವಿನಾಳ್ ಸೇರಿದಂತೆ ಹಲವು ಆಕಾಂಕ್ಷಿಗಳೂ ಬಿಜೆಪಿ ಟಿಕೆಟ್ ಪಡೆಯಲು ರೇಸ್ ನಲ್ಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+