• search
  • Live TV
ಗದಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗದಗದಲ್ಲಿ ಕೊರೊನಾ; ಸೋಂಕಿತ ವೃದ್ಧೆಯ ಸಂಪರ್ಕದಲ್ಲಿರುವವರಿಗೆ ನೆಗಟಿವ್

|

ಗದಗ, ಎಪ್ರಿಲ್ 8: ಬಯಲು ಸೀಮೆ ಜಿಲ್ಲೆ ಗದಗನಲ್ಲೂ ಕೊರೊನಾ ಸೋಂಕು ಕಾಲಿಟ್ಟಿದೆ. ಒಬ್ಬ ವೃದ್ಧೆಗೆ ಕೊರೊನಾ ಸೋಂಕು (ರೋಗಿ-166) ತಗುಲಿರುವುದು ಗದಗ ಜಿಲ್ಲೆಯಲ್ಲಿ ಆತಂಕ್ಕೆ ಕಾರಣವಾಗಿದೆ.

ಈ ನಿಟ್ಟಿನಲ್ಲಿ ಸೋಂಕು ಹರಡದಂತೆ ತಡೆಯಲು ವ್ಯಾಪಕ ಕ್ರಮಗಳನ್ನು ಅಲ್ಲಿನ ಜಿಲ್ಲಾಡಳಿತ ಕೈಗೊಳ್ಳುತ್ತಿದೆ. ಬುಧವಾರ ಗದಗ ಜಿಲ್ಲೆಯ ಕೊರೊನಾ ಪಿಡುಗು ತಡೆ ಕುರಿತ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬಿಡುಗಡೆ ಮಾಡಿದ್ದಾರೆ.

ಕೊರೊನಾಕ್ಕೆ ಔಷಧಿ: ರಾಮಾಯಣ ಉಲ್ಲೇಖಿಸಿದ ಬ್ರೆಜಿಲ್ ಅಧ್ಯಕ್ಷ..!ಕೊರೊನಾಕ್ಕೆ ಔಷಧಿ: ರಾಮಾಯಣ ಉಲ್ಲೇಖಿಸಿದ ಬ್ರೆಜಿಲ್ ಅಧ್ಯಕ್ಷ..!

ಮಂಗಳವಾರ ಕಳುಹಿಸಲಾಗಿದ್ದ ಒಟ್ಟು 49 ಗಂಟಲು ದ್ರವ್ಯ ಮಾದರಿಗಳಲ್ಲಿ 2 ತಿರಸ್ಕøತಗೊಂಡಿದ್ದು ಉಳಿದ 47 ಪ್ರಕರಣಗಳ ವರದಿ ನಕಾರಾತ್ಮಕವಾಗಿವೆ.

ಇದರಲ್ಲಿ ಪಿ-166 ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 35 ಜನ ಹಾಗೂ ಚಿಕಿತ್ಸೆ ನೀಡಿದ 7 ಜನ ವೈದ್ಯ ಸಿಬ್ಬಂದಿಗಳು ಸೇರಿ 42 ಮತ್ತು ಇನ್ನೂಳಿದ 5 ಪ್ರಕರಣಗಳ ವರದಿಯೂ ನಕಾರಾತ್ಮಕ ಆಗಿರುತ್ತವೆ ಎಂದು ಜಿಲ್ಲಾಧಿಕಾರಿ ತಿಳಿಸಿರುತ್ತಾರೆ.

ಕರ್ನಾಟಕದಲ್ಲಿ ಕೊರೊನಾ ಸೋಂಕು ನಿಧಾನಗತಿಯಲ್ಲಿ ಏರುತ್ತಿದೆ. ಬುಧವಾರ 175 ಜನಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿದೆ.

English summary
1 Case Coronavirus Positive In Gadag And Rest Of Others Report Negative Who contact with corona patient in gadag.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
loader
X