ವಿದೇಶಿ ಕೈದಿಗಳನ್ನು ದೇಶಕ್ಕೆ ಮರಳಿಸಲು ಟಿಕೆಟ್ ಖರೀದಿಸಿದ ಭಾರತೀಯ ಉದ್ಯಮಿ
ದುಬೈ, ಅಕ್ಟೋಬರ್ 16: ದುಬೈನಲ್ಲಿ 13 ವಿದೇಶಿ ಕೈದಿಗಳನ್ನು ಬಿಡುಗಡೆ ಮಾಡಿದ್ದು, ಕೈದಿಗಳನ್ನು ಅವರವರ ದೇಶಕ್ಕೆ ಕಳುಹಿಸುವ ಜವಾಬ್ದಾರಿಯನ್ನು ಭಾರತ ಮೂಲದ ಉದ್ಯಮಿ ಹೊತ್ತುಕೊಂಡಿದ್ದಾರೆ.
ಪಾಕಿಸ್ತಾ, ಬಾಂಗ್ಲಾದೇಶ, ಚೀನಾ, ಅಫ್ಘಾನಿಸ್ತಾನ ಮೂಲದ ಒಟ್ಟು 13 ಕೈದಿಗಳನ್ನು ಸೋಮವಾರ ದುಬೈ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಅವರವರ ದೇಶಕ್ಕೆ ಕಳುಹಿಸಲು ಭಾರತ ಮೂಲದ ಉದ್ಯಮಿ ಜೋಗಿಂದರ್ ಸಿಂಗ್ ಸಲಾರಿಯಾ ಒನ್ ವೇ ಟಿಕೆಟ್ ಖರೀದಿಸಿದ್ದಾರೆ.
ಪೆಹಲ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕರಾಗಿರುವ ಜೋಗಿಂದರ್ ಅವರು ದುಬೈ ಪೊಲೀಸ್ ಇಲಾಖೆ ಜೊತೆ ಸಂಪರ್ಕ ಸಾಧಿಸಿ ಒನ್ ವೇ ವಿಮಾನ ಟಿಕೆಟ್ ಖರೀದಿಸಿದ್ದಾರೆ. ಪಾಕಿಸ್ತಾನ, ನೈಜೀರಿಯಾ, ಬಾಂಗ್ಲಾದೇಶ, ಉಗಾಂಡ, ಅಫ್ಘಾನಿಸ್ತಾನ, ಚೀನಾ, ಇಥೋಫಿಯಾಕ್ಕೆ ಕೈದಿಗಳನ್ನು ಕಳುಹಿಸಲಾಗುತ್ತಿದೆ.

ಪೊಲೀಸರು ಕೈದಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಲ್ಲಿ ವೀಸಾ ಮುಗಿದರೂ ಕೂಡ ಅಲ್ಲೇ ವಲಸೆ ಮಾಡಿದ್ದವರು, ಸಣ್ಣ ಪುಟ್ಟ ಅಪರಾಧದಲ್ಲಿ ತೊಡಗಿದವರೇ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications