ಭಾರತದಲ್ಲಿ ಎಡಗಡೆ ಸ್ಟೀರಿಂಗ್ ನ ಚಾಲನೆ ಕೇಂದ್ರ ಶುರುವಾಗಲಿದೆ, ಏಕೆ ಗೊತ್ತೆ?

ದುಬೈ, ಮೇ 16: ಭಾರತದ ಆಯ್ದ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಎಡಗಡೆ ಸ್ಟೀರಿಂಗ್ ಇರುವ ತರಬೇತಿಯನ್ನು ಆರಂಭಿಸಲಾಗುತ್ತದೆ. ಇದು ಭಾರತ ಹಾಗೂ ಯುಎಇ ಜಂಟಿಯಾಗಿ ಆರಂಭಿಸುತ್ತಿರುವ ಯೋಜನೆ. ಯಾರು ಗಲ್ಫ್ ರಾಷ್ಟ್ರಗಳಿಗೆ ವಲಸೆ ಹೋಗಬೇಕು ಅಂದುಕೊಳ್ಳುತ್ತಾರಲ್ಲಾ ಅಂಥವರಿಗೆ ಅನುಕೂಲ ಆಗಲಿ ಎಂದು ಈ ಯೋಜನೆ.

ಇದರಿಂದ ಚಾಲಕರಿಗೆ ಸಮಯ ಹಾಗೂ ಹಣದ ಉಳಿತಾಯ ಆಗುತ್ತದೆ. ಜತೆಗೆ ಲೈಸೆನ್ಸ್ ಪಡೆದುಕೊಳ್ಳಲು ಶ್ರಮ ಆಗಲ್ಲ ಎಂದು ಮಾಧ್ಯಮದ ವರದಿ ಬಂದಿದೆ. ಯುಎಇಯಲ್ಲಿ ವಾಹನದ ಎಡ ಭಾಗಕ್ಕೆ ಸ್ಟೀರಿಂಗ್ ಇರುತ್ತದೆ. ಅವರು ರಸ್ತೆಯ ಬಲ ಭಾಗದಲ್ಲಿ ವಾಹನ ಚಾಲನೆ ಮಾಡುತ್ತಾರೆ. ಆದರೆ ಭಾರತದಲ್ಲಿ ವಾಹನದ ಸ್ಟೀರಿಂಗ್ ಬಲ ಭಾಗ ಇರುತ್ತದೆ.

ಈ ತರಗತಿಯನ್ನು ಪೂರ್ಣಗೊಳಿಸುವ ಭಾರತೀಯರಿಗೆ ಯುಎಇ ತಲುಪಿದ ನಂತರ ಸರ್ಟಿಫಿಕೇಟ್ ವಿತರಿಸಲಾಗುತ್ತದೆ. ಆ ನಂತರ ಅದಾಗಲೇ 'ಸಿದ್ಧಪಡಿಸಿದ' ಕೋರ್ಸ್ ಪೂರ್ಣಗೊಳಿಸಿದರೆ ಆಯಿತು. ಪರೀಕ್ಷೆ ಮುಗಿಸಿ, ಲೈಸೆನ್ಸ್ ಪಡೆಯುವುದಕ್ಕೆ ಹೆಚ್ಚು ಹಣ, ಸಮಯ ಬೇಕಾಗುವುದಿಲ್ಲ.

Left hand drive

ಈ ಯೋಜನೆಯ ಸೌಲಭ್ಯ ಒದಗಿಸುವ ಸಲುವಾಗಿಯೇ ಯುಎಇ ನಿಯಮಗಳು ಬಲ್ಲ ಚಾಲನಾ ಸಂಸ್ಥೆಗಳು ಭಾರತದ ನಾನಾ ಭಾಗಗಳಲ್ಲಿ ಆರಂಭವಾಗಲಿವೆ. ಇದಕ್ಕಾಗಿ ಭಾರತದ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮವು ಎಮಿರೇಟ್ಸ್ ಚಾಲನಾ ಸಂಸ್ಥೆ ಹಾಗೂ ಯುವ ವಾಣಿಜ್ಯ ಒಕ್ಕೂಟ, ಯುಎಇಯ ಜತೆ ಸಂಯೋಗ ಮಾಡಿಕೊಂಡಿದೆ.

ಉತ್ತರಪ್ರದೇಶ, ಕೇರಳ, ಪಂಜಾಬ್, ಜಾರ್ಖಂಡ್, ಆಂಧ್ರಪ್ರದೇಶ ಸೇರಿ ಹದಿನೈದರಿಂದ ಇಪ್ಪತ್ತು ಕಡೆ ಇಂಥ ಚಾಲನಾ ತರಬೇತಿ ಸಂಸ್ಥೆಗಳನ್ನು ಆರಂಭಿಸುವ ಗುರಿ ಇದೆ. ತರಬೇತುದಾರರನ್ನು ಯುಎಇಯಿಂದಲೇ ಕಳುಹಿಸಲಾಗುತ್ತದೆ. ಇಡೀ ಯೋಜನೆಯ ಉಸ್ತುವಾರಿಯನ್ನು ಅವರೇ ವಹಿಸಿಕೊಳ್ಳುತ್ತಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+