ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದುಬೈನಲ್ಲಿ ಭಾರತೀಯನಿಗೆ ಶಿಕ್ಷೆ

ದುಬೈ, ಫೆಬ್ರವರಿ 20: ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ ಭಾರತ ಮೂಲದ ವ್ಯಾಪಾರಿಗೆ ದುಬೈನಲ್ಲಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಅವಧಿ ಪೂರ್ಣಗೊಂಡ ಬಳಿಕ ಆತನನ್ನು ಗಡಿಪಾರು ಮಾಡುವಂತೆಯೂ ಆದೇಶಿಸಲಾಗಿದೆ.

ದುಬೈನ ಸೂಪರ್‌ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿರುವ ಭಾರತದ 23 ವರ್ಷದ ಯುವಕ, ಜನವರಿ 10ರಂದು ಕೀನ್ಯಾದ 10 ವರ್ಷದ ಬಾಲಕಿಯ ಮೈಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ ಎಂದು ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಆರೋಪಿಸಿತ್ತು. ಬಾಲಕಿಯ ಪೋಷಕರು ಅಲ್ ಖುಸೈಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಯುವಕನಿಗೆ ಮೂರು ತಿಂಗಳ ಸೆರೆವಾಸ ವಿಧಿಸಿದ ದುಬೈನ ನ್ಯಾಯಾಲಯ, ಆತನ ಕಾರಾಗೃಹ ಶಿಕ್ಷೆ ಅವಧಿ ಮುಗಿದ ಬಳಿಕ ಗಡಿಪಾರು ಮಾಡುವಂತೆ ಆದೇಶ ನೀಡಿದೆ.

'ನಾವು ವಾಸವಿರುವ ಕಟ್ಟಡದಲ್ಲಿಯೇ ಇರುವ ಸೂಪರ್ ಮಾರ್ಕೆಟ್‌ನಿಂದ ಬ್ರೆಡ್ ಖರೀದಿ ಮಾಡಿ ತರುವಂತೆ ನನ್ನ ಮಗಳನ್ನು ಬೆಳಿಗ್ಗೆ 10 ಗಂಟೆಗೆ ಕಳುಹಿಸಿದ್ದೆ. ಕೆಲವೇ ನಿಮಿಷಗಳಲ್ಲಿ ಆಕೆ ನಡುಗುತ್ತಾ ಓಡಿಬಂದಳು. ಆಕೆ ತುಂಬಾ ಹೆದರಿದಂತೆ ಕಂಡಳು. ಪೊಲೀಸರಿಗೆ ಕರೆ ಮಾಡುವಂತೆ ಆಕೆ ಹೇಳಿದ್ದಳು' ಎಂದು ಬಾಲಕಿಯ ತಾಯಿ ಹೇಳಿದರು.

ಮಗಳ ಮೇಲೆ ದೌರ್ಜನ್ಯ

ಮಗಳ ಮೇಲೆ ದೌರ್ಜನ್ಯ

ಆರೋಪಿ ಮಗಳ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂಬುದನ್ನು ಅರಿತ ತಾಯಿ, ತಮ್ಮ ಪತಿಗೆ ಮಾಹಿತಿ ನೀಡಿದರು. ಬಳಿಕ ಆ ಮಾರಾಟಗಾರನನ್ನು ಹುಡುಕಲು ಮನೆಯಿಂದ ಕೆಳಗೆ ಬಂದಿದ್ದರು. ನಂತರ ಕಟ್ಟಡದ ವಿಡಿಯೋ ದೃಶ್ಯಗಳನ್ನು ಪರಿಶೀಲಿಸಿದಾಗ ಆತ ದೌರ್ಜನ್ಯ ಎಸಗಿರುವುದು ದೃಢಪಟ್ಟಿತ್ತು.

ಲಿಫ್ಟ್‌ ಒಳಗೆ ಬಂದು ದೌರ್ಜನ್ಯ

ಲಿಫ್ಟ್‌ ಒಳಗೆ ಬಂದು ದೌರ್ಜನ್ಯ

ಮಗಳು ಏನು ತನಗೆ ತಿಳಿಸಿದ್ದಳೋ ಅದನ್ನೇ ಹೇಳುತ್ತಿರುವುದಾಗಿ ಬಾಲಕಿಯ ತಾಯಿ ಪ್ರಾಸಿಕ್ಯೂಟರ್ ತನಿಖಾಧಿಕಾರಿಗೆ ತಿಳಿಸಿದರು. ಸೂಪರ್ ಮಾರ್ಕೆಟ್‌ನ ಉದ್ಯೋಗಿಗಳಿಗೆ ಅದೇ ಮಹಡಿಯಲ್ಲಿ ವಾಸಕ್ಕೆ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲಿನ ಲಿಫ್ಟ್‌ನಲ್ಲಿ ಆ ಯುವಕನನ್ನು ಕಂಡಿದ್ದಾಗಿ ಮಗಳು ಹೇಳಿದ್ದಳು. ಆಕೆ ಬ್ರೆಡ್ ಖರೀದಿ ಮಾಡಿ ಹೊರಡುವಾಗ ಸ್ವಲ್ಪ ಕಾಯುವಂತೆ ಹೇಳಿದ ಯುವಕ, ಲಿಫ್ಟ್‌ವರೆಗೂ ಆಕೆಯನ್ನು ಹಿಂಬಾಲಿಸಿದ. ನಂತರ ಆಕೆಯ ಬಾಯಿಯನ್ನು ಕೈಗಳಿಂದ ಮುಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದರು.

ವಿಡಿಯೋ ನೋಡಿ ದೃಢ

ವಿಡಿಯೋ ನೋಡಿ ದೃಢ

ಮಗಳ ಹಿಂದೆಯೇ ಆತ ಬಂದು ಲಿಫ್ಟ್ ಒಳಗೆ ಹೋದ ವಿಡಿಯೋವನ್ನು ದಾಖಲಿಸಿದ ಕಟ್ಟಡದ ಭದ್ರತಾ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಪರಿಶೀಲಿಸಿದ ಬಾಲಕಿಯ ಪೋಷಕರು, ಪೊಲೀಸರಿಗೆ ಕರೆ ಮಾಡಿದರು. ಯುವಕನನ್ನು ಬಂಧಿಸಲಾಯಿತು.

ಕೂಗಲು ಸಾಧ್ಯವಾಗಲಿಲ್ಲ

ಕೂಗಲು ಸಾಧ್ಯವಾಗಲಿಲ್ಲ

ಲಿಫ್ಟ್‌ನಲ್ಲಿ ಮೊದಲು ನೋಡಿದ ಸಮಯದಿಂದಲೂ ಆತ ತನ್ನನ್ನು ಮುಟ್ಟುವ ಉದ್ದೇಶದಿಂದಲೇ ದುರುಗುಟ್ಟಿಕೊಂಡು ನೋಡುತ್ತಿದ್ದ. ವಾಪಸ್ ಬರುವಾಗ ಮೈ ಎಲ್ಲಾ ಮುಟ್ಟತೊಡಗಿದ. ಆತ ನನ್ನ ಬಾಯಿಯನ್ನು ಕೈಗಳಿಂದ ಮುಚ್ಚಿದ್ದರಿಂದ ನನಗೆ ಸಹಾಯಕ್ಕಾಗಿ ಕೂಗಲೂ ಸಾಧ್ಯವಾಗಲಿಲ್ಲ ಎಂದು ಬಾಲಕಿ ಹೇಳಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+