ಯುಎಇಯ ಜುಮೈರಾ ಕಡಲ ತೀರದಲ್ಲಿ ಹೃದಯ ಸ್ಥಂಭನವಾಗಿ ಭಾರತೀಯ ಸಾವು

ದುಬೈ, ಜೂನ್ 16: ನಲವತ್ತು ವರ್ಷದ ಭಾರತೀಯರೊಬ್ಬರಿಗೆ ಹೃದಯ ಸ್ಥಂಭನವಾಗಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಯುಎಇಯ ಜುಮೈರಾ ಕಡಲ ತೀರದಲ್ಲಿ ನಡೆದಿದೆ. ತನ್ನ ಕುಟುಂಬದ ಜತೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಮಾಧ್ಯಮ ವರದಿಗಳು ಭಾನುವಾರ ತಿಳಿಸಿವೆ.

ಜಾನ್ ಪ್ರೀತಮ್ ಪೌಲ್ ಮೃತರು. ಅವರು ಮೂಲತಃ ಬೆಂಗಳೂರಿನವರು. ಈ ದುರ್ಘಟನೆ ಸಂಭವಿಸಿದ ವೇಳೆ ಮೂವರು ಮಕ್ಕಳು, ಸಂಬಂಧಿಕರು ಜತೆಯಲ್ಲೇ ಇದ್ದರು. ತಮ್ಮ ಮೈಗೆ ಅಂಟಿದ್ದ ಮರಳನ್ನು ತೊಳೆಯುವ ಸಲುವಾಗಿ ನೀರಿನಲ್ಲಿ ಮುಳುಗಿದಾಗ ಹೃದಯ ಸ್ಥಂಭನ ಆಗಿದೆ.

"ನಾವು ಹಿಂತಿರುಗುವ ಸ್ವಲ್ಪ ಸಮಯಕ್ಕೆ ಮುಂಚೆ ಸಮುದ್ರದಲ್ಲಿ ಮುಳುಗಿ ಹಾಕಿ ಬರುವುದಾಗಿ ತೆರಳಿದರು. ಕೆಲ ನಿಮಿಷದಲ್ಲಿ ದೇಹವು ನೀರಿನಲ್ಲಿ ತೇಲುತ್ತಿರುವುದನ್ನು ಕುಟುಂಬದವರು ಗಮನಿಸಿದರು" ಎಂದು ಪೌಲ್ ರ ಪತ್ನಿ ಎವೆಲೈನ್ ತಿಳಿಸಿದ್ದಾರೆ. ಅವರು ಬಹಳ ಒಳ್ಳೆ ಈಜುಗಾರ. ಅದೇನಾಯಿತು ಎಂಬುದು ನನಗೆ ಈಗಲೂ ತಿಳಿಯುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Bengaluru based Indian died by cardiac arrest at UAEs Jumeirah beach

ಯುಎಇ ಮೂಲದ ರೇಡಿಯೊ ಸ್ಟೇಷನ್ ಗಿಲ್ಲಿ ಎಫ್ ಎಂನಲ್ಲಿ ಜಾನ್ ಪ್ರೀತಂ ಪೌಲ್ ಮಾರಾಟ ವಿಭಾಗದ ಮುಖ್ಯಸ್ಥರಾಗಿದ್ದರು. ಹದಿನಾಲ್ಕು ವರ್ಷಕ್ಕೂ ಹೆಚ್ಚು ಕಾಲ ಈ ದೇಶದಲ್ಲಿ ಇದ್ದರು. ಸದ್ಯಕ್ಕೆ ಶವಾಗಾರದಲ್ಲಿ ಶವವನ್ನು ಇರಿಸಲಾಗಿದೆ. ಭಾನುವಾರದಂದು ಬೆಂಗಳೂರಿಗೆ ತರಲಾಗುವುದು ಎಂದು ವರದಿಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+