• search
  • Live TV
ದುಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಬುಧಾಬಿ ಕೋರ್ಟ್ ನಲ್ಲಿ ಇನ್ನುಮುಂದೆ ಹಿಂದಿ ಮೂರನೇ ಅಧಿಕೃತ ಭಾಷೆ

|
Google Oneindia Kannada News

ದುಬೈ, ಫೆಬ್ರವರಿ 10: ಅಬುಧಾಬಿಯ ಕೋರ್ಟ್ ಗಳಲ್ಲಿ ಮೂರನೇ ಅಧಿಕೃತ ಭಾಷೆಯಾಗಿ ಹಿಂದಿಯನ್ನು ಸೇರಿಸುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಅರೇಬಿಕ್ ಹಾಗೂ ಇಂಗ್ಲಿಷ್ ಜತೆಗೆ ಇನ್ನು ಮುಂದೆ ಹಿಂದಿ ಕೂಡ ಸೇರಿಕೊಳ್ಳಲಿದೆ. ಇದರಿಂದ ನ್ಯಾಯದಾನ ಪ್ರಕ್ರಿಯೆಗೆ ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ಇದೆ.

ಅಬುಧಾಬಿಯ ನ್ಯಾಯಾಂಗ ಇಲಾಖೆಯು ಶನಿವಾರ ಈ ಬಗ್ಗೆ ತಿಳಿಸಿದೆ. ಕಾರ್ಮಿಕರ ಪ್ರಕರಣಗಳಲ್ಲಿ ಕೋರ್ಟ್ ಮುಂದೆ ಸಲ್ಲಿಸುವ ಅರ್ಜಿಗಳನ್ನು ಅರೇಬಿಕ್ ಮತ್ತು ಇಂಗ್ಲಿಷ್ ಅಲ್ಲದೆ ಹಿಂದಿಯಲ್ಲಿ ಕೂಡ ಸಲ್ಲಿಸಬಹುದು. ಹಿಂದಿ ಮಾತನಾಡುವವರಿಗೆ ಕೂಡ ವ್ಯಾಜ್ಯದ ಪ್ರಕ್ರಿಯೆಗಳನ್ನು ತಿಳಿಯಲು ಅನುಕೂಲ ಆಗಲಿ, ಭಾಷೆ ಸಮಸ್ಯೆ ಆಗದಿರಲಿ ಎಂದು ಈ ತೀರ್ಮಾನ ಮಾಡಲಾಗಿದೆ.

8ನೇ ತರಗತಿ ವರೆಗೆ ಹಿಂದಿ ಭಾಷೆ ಕಡ್ಡಾಯ ಮಾಡಲು ಕೇಂದ್ರ ಸಜ್ಜು8ನೇ ತರಗತಿ ವರೆಗೆ ಹಿಂದಿ ಭಾಷೆ ಕಡ್ಡಾಯ ಮಾಡಲು ಕೇಂದ್ರ ಸಜ್ಜು

ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಯುಎಇ ಜನಸಂಖ್ಯೆ ಅಂದಾಜು 90 ಲಕ್ಷ ಇದೆ. ಅದರಲ್ಲಿ ಮೂರನೇ ಎರಡು ಭಾಗದಷ್ಟು ವಿದೇಶಗಳಿಂದ ಬಂದ ವಲಸಿಗರು. 26 ಲಕ್ಷ ಅಂದರೆ ಒಟ್ಟಾರೆ ಜನಸಂಖ್ಯೆಯ ಶೇಕಡಾ 30ರಷ್ಟು ಭಾರತೀಯರಿದ್ದಾರೆ. "ಯಾವುದೇ ವ್ಯಾಜ್ಯಗಳಿಗೆ ಸಂಬಂಧಿಸಿದ ಹಾಗೆ ಸಾರ್ವಜನಿಕರಿಗೆ ಮಾಹಿತಿ ದೊರೆಯಬೇಕು. ಕಾನೂನು ಪಠ್ಯ ಲಭ್ಯವಾಗಬೇಕು ಎಂದು ಅಲ್ಲಿನ ಕಾನೂನು ಇಲಾಖೆಯ ಅಧಿಕಾರಿ ಹೇಳಿದ್ದಾರೆ.

English summary
Abu Dhabi has included Hindi as the third official language used in its courts, alongside Arabic and English, as part of a move designed to improve access to justice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X