ವಿಡಿಯೋ : ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜ
ದುಬೈ, ಆಗಸ್ಟ್ 16 : 74ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ಭಾರತದ ತ್ರಿವರ್ಣ ಧ್ವಜ ಮೂಡಿಬಂದಿದೆ. ದುಬೈನ ಬುರ್ಜ್ ಖಲೀಫಾದಲ್ಲಿ ವಿದ್ಯುತ್ ದೀಪಗಳಿಂದ ತ್ರಿವರ್ಣ ಧ್ವಜವನ್ನು ಮೂಡಿಸಲಾಗಿದೆ.
ಶನಿವಾರ ಭಾರತದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಲಾಗಿದೆ. ಕೊರೊನಾ ಭೀತಿಯ ನಡುವೆಯ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ತುಂಬಾ ಆಚರಣೆ ಮಾಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿದ್ಯುತ್ ದೀಪಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸಲಾಗಿದೆ. ರಾತ್ರಿ 8.45ಕ್ಕೆ ತ್ರಿವರ್ಣ ಧ್ವಜ ಮೂಡಿಸುವ ಮೂಲಕ ಭಾರತೀಯರಿಗೆ ಗೌರವ ಸಲ್ಲಿಸಲಾಗಿದೆ.

ಬುರ್ಜ್ ಖಲೀಫಾ ಜಗತ್ತಿನ ಅತಿ ಎತ್ತರದ ಕಟ್ಟಡ. ದುಬೈನಲ್ಲಿರುವ ಗಗನಚುಂಬಿ ಕಟ್ಟಡದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸುವ ಮೂಲಕ ಎರಡೂ ದೇಶಗಳ ಸ್ನೇಹವನ್ನು ಜಗತ್ತಿಗೆ ಸಾರಲಾಗಿದೆ.
2018ರಲ್ಲಿ ಭಾರತದಲ್ಲಿ ಮಹಾತ್ಮಾ ಗಾಂಧೀಜಿ 150ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಆಗ ಬುರ್ಜ್ ಖಲೀಫಾ ಮೇಲೆ ಗಾಂಧೀಜಿ ಅವರ ಚಿತ್ರ, ಜೀವನ ಸಂದೇಶವನ್ನು ಪ್ರಕಟಿಸಲಾಗಿತ್ತು.
ಹಲವು ವರ್ಷಗಳಿಂದ ಭಾರತದಲ್ಲಿನ ಸ್ವಾತಂತ್ರ್ಯ ದಿನಾಚರಣೆಯಂದು ದುಬೈನ ಬುರ್ಜ್ ಖಲೀಫಾದಲ್ಲಿ ವಿದ್ಯುತ್ ದೀಪಗಳಿಂದ ಭಾರತದ ತ್ರಿವರ್ಣ ಧ್ವಜವನ್ನು ಮೂಡಿಸಲಾಗುತ್ತಿದೆ.
ವಿಡಿಯೋ
#WATCH United Arab Emirates: Burj Khalifa illuminated in colours of the Tricolour on #IndiaIndependenceDay. (Video source: Consulate General of India, Dubai) pic.twitter.com/GKn1BVqjW4
— ANI (@ANI) August 15, 2020











Click it and Unblock the Notifications