ಯಶವಂತಪುರ-ಮೀರಜ್ ರೈಲು ಸೇವೆ ವಿಸ್ತರಣೆ
ಹುಬ್ಬಳ್ಳಿ, ಜ. 20 : ನೈಋತ್ಯ ರೈಲ್ವೆ ವಲಯ ಯಶವಂತಪುರ-ಮೀರಜ್-ಯಶವಂತಪುರ ನಡುವೆ ಸಂಚರಿಸುತ್ತಿದ್ದ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಣೆ ಮಾಡಲು ನಿರ್ಧರಿಸಿದೆ. ವಾರಕ್ಕೆ ಎರಡು ಸಲ ಸಂಚರಿಸುತ್ತಿದ್ದ ವಿಶೇಷ ರೈಲು ಸೇವೆ ವಿಸ್ತರಣೆಯಾಗಲಿದೆ.
ನೈಋತ್ಯ ರೈಲ್ವೇ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಯಶವಂತಪುರದಿಂದ ಜ. 22ರಿಂದ ಫೆ. 19ರವರೆಗೆ ಹಾಗೂ ಮಿರಜ್‌ನಿಂದ ಜ. 23ರಿಂದ ಫೆ. 20ರವರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಮುಂದುವರೆಯಲಿದೆ. [ಫೇಸ್ ಬುಕ್, ಟ್ವಿಟರ್ ಗೆ ಬಂತು ನೈಋತ್ಯ ರೈಲ್ವೆ]

ವೇಳಾಪಟ್ಟಿ : ಸೋಮವಾರ ಮತ್ತು ಗುರುವಾರ ರಾತ್ರಿ 8.20ಕ್ಕೆ ಯಶವಂತಪುರದಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 10.15ಕ್ಕೆ ಮಿರಜ್ ತಲುಪಲಿದೆ. ಮಂಗಳವಾರ ಮತ್ತು ಶುಕ್ರವಾರ ಸಂಜೆ 4.45ಕ್ಕೆ ಮಿರಜ್‌ನಿಂದ ಹೊರಡುವ ರೈಲು ಮರುದಿನ ಬೆಳಗ್ಗೆ 6.20ಕ್ಕೆ ಯಶವಂತಪುರಕ್ಕೆ ಬಂದು ತಲುಪಲಿದೆ.
ಒಂದು ತಿಂಗಳ ಕಾಲ ಪ್ಯಾಸೆಂಜರ್ ರೈಲು ಸೇವೆ : ಹುಬ್ಬಳ್ಳಿ-ವಿಜಯಪುರ-ಹುಬ್ಬಳ್ಳಿ ಮಾರ್ಗದ ನಡುವೆ ಫೆ. 1ರಿಂದ 28ರವರೆಗೆ ಒಂದು ತಿಂಗಳ ಕಾಲ ಪ್ಯಾಸೆಂಜರ್ ವಿಶೇಷ ರೈಲು ಸೇವೆ ಆರಂಭವಾಗಲಿದೆ. [ಸರಕು ಸಾಗಣೆಗೆ ಬರಲಿದೆ ರೈಲ್ವೆ ಲಾಜಿಸ್ಟಿಕ್ಸ್]
ಈ ರೈಲು ಬೆಳಗ್ಗೆ 6.20ಕ್ಕೆ ಹುಬ್ಬಳ್ಳಿಯಿಂದ ಹೊರಡಲಿದ್ದು, ಮಧ್ಯಾಹ್ನ 1ಕ್ಕೆ ವಿಜಯಪುರ ತಲುಪಲಿದೆ. ಅದೇ ದಿನ ಮಧ್ಯಾಹ್ನ 1.30ಕ್ಕೆ ವಿಜಯಪುರದಿಂದ ಹೊರಡುವ ರೈಲು ರಾತ್ರಿ 8.20ಕ್ಕೆ ಹುಬ್ಬಳ್ಳಿಗೆ ಬಂದು ತಲುಪಲಿದೆ.












Click it and Unblock the Notifications