ಪತಿಯ ಪಾರ್ಥಿವ ಶರೀರದ ಮುಂದೆಯೇ ಮತದಾನ ಮಾಡಿದ ಮಹಿಳೆ!

ಧಾರವಾಡ, ಮೇ 02; ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ಮೇ 10ರಂದು ನಡೆಯಲಿದೆ. ಆದರೆ 12ಡಿ ಅರ್ಜಿ ನೀಡಿರುವ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಏ. 29, 30 ಮತ್ತು ಮೇ.1 ರಂದು ಮನೆಯಿಂದಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಧಾರವಾಡದಲ್ಲಿ ವೃದ್ಧೆಯೊಬ್ಬರು ಮನೆಯಲ್ಲಿ ಪತಿಯ ಶವದ ಮುಂದೆಯೇ ಮತದಾನ ಮಾಡಿದ್ದಾರೆ.

ಧಾರವಾಡದ ಸಾರಸ್ವತಪುರದ ಬಡಾವಣೆಯಲ್ಲಿ ಸೋಮವಾರ ವಯೋಸಹಜ ಅನಾರೋಗ್ಯದಿಂದ ಜ್ಯೋತಿಬಾ ತಿಬೇಲಿ (95) ಮೃತಪಟ್ಟಿದ್ದರು. ಅವರ ಪತ್ನಿ ಶಾಂತಾ ಬಾಯಿ ಪತಿಯ ಸಾವಿನ ದುಃಖದಲ್ಲಿಯೂ, ಶವದ ಎದುರೇ ಮತ ಚಲಾಯಿಸುವ ಮೂಲಕ ಮತದಾನದ ಮಹತ್ವವನ್ನು ಇತರರಿಗೆ ತಿಳಿಸಿದ್ದಾರೆ.

Woman Voted In front of Husband Dead Body

ಮನೆಯಿಂದಲೇ ಮತದಾನ ಮಾಡುವುದಾಗಿ ಹೇಳಿದ್ದರಿಂದ ಜ್ಯೋತಿಬಾ ತಿಬೇಲಿ ಮತ್ತು ಶಾಂತಾ ಬಾಯಿಗೆ 12ಡಿ ಅರ್ಜಿ ನೀಡಲಾಗಿತ್ತು. ಆದರೆ ಭಾನುವಾರ ತಡರಾತ್ರಿಯೇ ಜ್ಯೋತಿಬಾ ತಿಬೇಲಿ ನಿಧನ ಹೊಂದಿದರು. ಆದರೆ ಶಾಂತಾ ಬಾಯಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ಮನೆಯಿಂದಲೇ ಮಾತದಾನ ಮಾಡಲು ಚುನಾವಣಾ ಆಯೋಗ ಕಲ್ಪಿಸಿದ ಅವಕಾಶ ಸದುಪಯೋಗ ಮಾಡಿಕೊಂಡಿದ್ದಾರೆ.

ಮನೆಗೆ ಆಗಮಿಸಿದ ಚುನಾವಣಾಧಿಕಾರಿಗಳು; ಮನೆಯಿಂದಲೇ ಮತದಾನ ಮಾಡಲು 12ಡಿ ಅರ್ಜಿ ನೀಡಿದ್ದರಿಂದ ಸೋಮವಾರ ಜನರು ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ್ದಾಗಲೇ ಚುನಾವಣಾಧಿಕಾರಿಗಳು ಸಹ ಮನೆಗೆ ಆಗಮಿಸಿದರು. ಜ್ಯೋತಿಬಾ ತಿಬೇಲಿ ನಿಧನ ಹೊಂದಿದ ಸಂಗತಿ ತಿಳಿದು ವಾಪಸ್ ಹೋಗಲು ಸಿದ್ಧರಾದರು.

Woman Voted In front of Husband Dead Body

ಅಲ್ಲದೇ ಚುನಾವಣಾಧಿಕಾರಿಗಳೇ ಒಂದು ಪ್ರಯತ್ನವಾಗಿ ಶಾಂತಾ ಬಾಯಿ ಅವರಲ್ಲಿ ಮತದಾನ ಮಾಡುವಿರಾ? ಎಂದು ಮನವಿ ಮಾಡಿದರು. ಆಗ ಅವರು ಮತದಾನಕ್ಕೆ ಒಪ್ಪಿಗೆ ನೀಡಿದರು. ಪತಿ ಜ್ಯೋತಿಬಾ ತಿಬೇಲಿ ಶವದ ಮುಂದೆಯೇ ಅವರಯ ಮತದಾನ ಮಾಡಿ, ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಸದುಪಯೋಗ ಮಾಡಿಕೊಂಡು ಮಾದರಿಯಾದರು.

ಹೇಗೆ ನಡೆಯಲಿದೆ ಮತದಾನ?; ಕರ್ನಾಟಕ ಚುನಾವಣೆಯಲ್ಲಿ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮನೆಯಿಂದ ಮತದಾನ ಮಾಡುವವರಿಗೆ ಈಗಾಗಲೇ 12ಡಿ ಅರ್ಜಿ ವಿತರಣೆ ಮಾಡಲಾಗಿತ್ತು. ಅರ್ಜಿ ಪಡೆದಿರುವವರ ಮನೆಗೆ ಚುನಾವಣಾಧಿಕಾರಿಗಳು ತೆರಳಿ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಿಸಿದ್ದಾರೆ. ಮನೆಯಿಂದ ಮತದಾನ ಮಾಡುವವರು ಯಾರಿಗೆ ಚಲಾಯಿಸುತ್ತಾರೆ? ಎಂಬುದನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಧಾರವಾಡ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 80 ವರ್ಷ ಮೇಲ್ಪಟ್ಟ 1686 ಮತದಾರರು ಮತ್ತು 399 ವಿಶೇಷಚೇತನ ಮತದಾರರು ಸೇರಿ ಒಟ್ಟು 2085 ಮತದಾರರಿಗೆ ಮನೆಯಿಂದಲೇ ಮತದಾನ ವ್ಯವಸ್ಥೆ ಮಾಡಲಾಗಿತ್ತು. ಮತದಾನದ ವೇಳೆ ಯಾವುದೇ ವ್ಯಕ್ತಿ ಪ್ರಭಾವ ಬೀರಲು ಅವಕಾಶ ಇರಬಾರದು ಎಂಬ ನಿಯಮವಿದೆ. ಮತದಾನ ಮಾಡುವ ವ್ಯಕ್ತಿ ಅಂಧರಾಗಿದ್ದರೆ ಅಥವಾ ಹಾಸಿಗೆಯ ಮೇಲಿದ್ದು ಅಶಕ್ತರಾಗಿದ್ದರೆ, ಅಂತವರು 18 ವರ್ಷ ತುಂಬಿದ ಒಬ್ಬರನ್ನು ವೋಟಿಂಗ್ ಅಸಿಸ್ಟೆಂಟ್ ಅಂತಾ ನೇಮಿಸಿಕೊಳ್ಳಲು ಅವಕಾಶವಿದೆ. ಒಬ್ಬ ವೋಟಿಂಗ್ ಅಸಿಸ್ಟೆಂಟ್ ಒಬ್ಬರಿಗೆ ಮಾತ್ರ ಸಹಾಯಕರಾಗಿ ನೇಮಕವಾಗಬಹುದು.

80 ವರ್ಷ ಮೇಲ್ಪಟ್ಟವರು, ವಿಶೇಷ ಚೇತನರು ಮನೆಯಿಂದ ಮತದಾನ ಮಾಡಿದ್ದಾರೆ. ಸೇವಾ ಮತದಾರರು, ಚುನಾವಣಾ ಕಾರ್ಯದಲ್ಲಿ ತೊಡಗಿರುವವರು ಮೇ 2 ರಿಂದ 4ರ ತನಕ ಮತದಾನ ಮಾಡಲಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಾಮಾನ್ಯ ಮತದಾರರು ಮತದಾನದ ದಿನವಾದ ಮೇ 10ರಂದು ನೇರವಾಗಿ ಮತಗಟ್ಟೆಗಳಿಗೆ ಹೋಗಿ ಮತದಾನ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+