ಧಾರವಾಡ: ಟಾಟಾ ಮಾರ್ಕೋಪೋಲೋ ಕಂಪನಿ ಲಾಕ್ ಔಟ್ ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಫೆಬ್ರವರಿ,02: ಧಾರವಾಡ ಬಳಿ ಇರುವ ಪ್ರತಿಷ್ಠಿತ ಟಾಟಾ ಕಂಪನಿಯ ಮಾರ್ಕೋಪೋಲೋ ಕಂಪನಿಯನ್ನು ತಾತ್ಕಾಲಿಕವಾಗಿ ಒಂದು ವಾರದ ಮಟ್ಟಿಗೆ ಬಂದ್ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ

ಕೆಲವು ಅನ್ಯವ್ಯಕ್ತಿಗಳ ಮಾತಿಗೆ ಕಿವಿಗೊಟ್ಟ ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಅಕಾಲಿಕ ಬೇಡಿಕೆಗಳನ್ನು ಕಾರ್ಮಿಕರು ಕೇಳುತ್ತಿದ್ದಾರೆ. ಇದರಿಂದ ಮಾರ್ಕೋಪೋಲೋ ಕಂಪನಿಯ ಕಾರ್ಯಚಟುವಟಿಕೆಗಳಿಗೆ ತೊಡಕಾಗಿದೆ. ಹಾಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.[ಟಾಟಾ ಸಂಸ್ಥೆಯಿಂದ 4 ಸಾವಿರ ಹಳ್ಳಿಗರಿಗೆ ನೆರವಾಗುವ ನೀರಿನ ಘಟಕ]

Dharwad

ಕಂಪನಿಯ ಗೌರವ ಮತ್ತು ನಷ್ಟ ತಡೆಯುವದಕ್ಕಾಗಿ ಕಾರ್ಮಿಕರೊಂದಿಗೆ ಸಂಧಾನ ಮಾತುಕತೆ ನಡೆಸಲಾಗಿತ್ತು. ಪ್ರತಿ ವರ್ಷವೂ ವೇತನವನ್ನು ಪರಿಷ್ಕರಿಸಿ ನೀಡಲಾಗುತ್ತಿದೆ. ಆದರೂ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಿದ್ದಾರೆ.

ಜಿ.ಪಂ, ತಾ.ಪಂ. ಚುನಾವಣೆ ವೀಕ್ಷಕರಾಗಿ ಶಶಿಧರ ಕುರೇರ ಆಯ್ಕೆ

ಹುಬ್ಬಳ್ಳಿ, ಫೆಬ್ರವರಿ,02: ಧಾರವಾಡ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗೆ ವೀಕ್ಷಕರನ್ನಾಗಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಕಮೀಷನರ್ ಶಶಿಧರ ಕುರೇರ ಅವರನ್ನು ಚುನಾವಣಾ ಆಯೋಗ ನೇಮಿಸಿದೆ.

ಚುನಾವಣೆಯ ಚಟುವಟಿಕೆಯಲ್ಲಿ ಅಕ್ರಮಗಳು ಕಂಡು ಬಂದಲ್ಲಿ ಅಥವಾ ದೂರುಗಳನ್ನು ಸಲ್ಲಿಸಬೇಕಾದಲ್ಲಿ 9900546354,7760955111 ಯನ್ನು ಸಂಪರ್ಕಿಸಬಹುದು ಎಂದು ಚುನಾವಣಾ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.[ಮತದಾನಕ್ಕಾಗಿ ಫೆ.13, 20ರಂದು ಸರ್ಕಾರಿ ರಜೆ]

ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆ ಕಾವು ಹೆಚ್ಚಾಗುತ್ತಿದ್ದು, ತಾಲೂಕಿನ ನಾಲ್ಕು ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಒಟ್ಟು 36 ನಾಮಪತ್ರ ಸಲ್ಲಿಕೆಯಾಗಿವೆ. ನಗರದ ತಾಲೂಕು ಪಂಚಾಯಿತಿಯ 15 ಸ್ಥಾನಗಳಿಗೆ 114 ನಾಮಪತ್ರ ಸಲ್ಲಿಕೆಯಾಗಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
TATA Marcopolo company lock out one week in Dharwad told by company administrative committee.
Please Wait while comments are loading...