ಮಾರ್ಚ್ 1ರಿಂದ ಹುಬ್ಬಳ್ಳಿಯಲ್ಲಿ ಮತ್ತೆ ಸ್ಪೈಸ್ ಜೆಟ್ ಹಾರಾಟ
ಹುಬ್ಬಳ್ಳಿ, ಫೆ.12 : ಸ್ಪೈಸ್ ಜೆಟ್ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ತನ್ನ ವಿಮಾನಯಾನ ಸೇವೆಯನ್ನು ಮಾರ್ಚ್ 1ರಿಂದ ಮತ್ತೆ ಆರಂಭಿಸಲಿದೆ. ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಕಾರ್ಯದ ಹಿನ್ನಲೆಯಲ್ಲಿ ಆಗಸ್ಟ್‌ನಿಂದ ಹುಬ್ಬಳ್ಳಿಯಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿತ್ತು.
ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ದರ್ಜೆ ವಿಮಾನ ನಿಲ್ದಾಣವಾಗಿ ಮೇಲ್ದರ್ಜೇಗೇರಿಸುವ ಕಾಮಗಾರಿಯನ್ನು ಆಗಸ್ಟ್‌ನಲ್ಲಿ ಆರಂಭಿಸಿತ್ತು. ಸದ್ಯ ಕಾಮಗಾರಿ ಮುಕ್ತಾಯಗೊಂಡಿದ್ದು ಸ್ಪೈಸ್ ಜೆಟ್ ಮಾರ್ಚ್ 1ರಿಂದ ಸೇವೆ ಆರಂಭಿಸಲಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆ ಸ್ಥಗಿತಗೊಂಡ ಕಾರಣ ಜನರು ಮುಂಬೈ ಮತ್ತು ಬೆಂಗಳೂರಿಗೆ ತೆರಳಲು ಬೆಳಗಾವಿ ವಿಮಾಣ ನಿಲ್ದಾಣಕ್ಕೆ ಪ್ರಯಾಣಿಸಬೇಕಿತ್ತು. ಸ್ಪೈಸ್ ಜೆಟ್ ಹಾರಾಟ ಮತ್ತೆ ಆರಂಭಿಸಿದರೆ ಜನರಿಗೆ ಸಹಾಯಕವಾಗಲಿದೆ. [ಆ.1ರಿಂದ ಹುಬ್ಬಳ್ಳಿ ವಿಮಾನ ನಿಲ್ದಾಣ ಬಂದ್]
ಹುಬ್ಬಳ್ಳಿ ನಿಲ್ದಾಣದಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಸ್ಪೈಸ್ ಜೆಟ್ ಮೊದಲಿದ್ದ ಸೇವೆಯಂತೆಯೇ ಬೆಂಗಳೂರು ಮತ್ತು ಮುಂಬೈಗೆ ತನ್ನ ಸೇವೆಯನ್ನು ಪ್ರತಿದಿನ ಒದಗಿಸಲಿದೆ. ಬೆಂಗಳೂರು-ಹುಬ್ಬಳ್ಳಿ ಮಾರ್ಗಕ್ಕೆ 2,931 ಮತ್ತು ಹುಬ್ಬಳ್ಳಿ-ಮುಂಬೈ ಮಾರ್ಗಕ್ಕೆ 3,061 ರೂ. ಪ್ರಯಾಣದರವಿರುತ್ತದೆ. [599 ರೂ. ಗೆ ವಿಮಾನ ಪ್ರಯಾಣ]
ಸ್ಪೈಸ್ ಜೆಟ್ ಈ ವಿಮಾನಯಾನ ಸೇವೆಗಾಗಿ 78 ಸೀಟುಗಳ 'Bombardier Q-400' ವಿಮಾನವನ್ನು ಬಳಸಲಿದೆ. ಟಿಕೆಟ್ ಬುಕ್ಕಿಂಗ್‌ಗಾಗಿ www.spicejet.com. ವೆಬ್‌ಸೈಟ್ ನೋಡಬಹುದಾಗಿದೆ.
60 ಕೋಟಿ ಕಾಮಗಾರಿ : ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ದರ್ಜೆ ವಿಮಾನ ನಿಲ್ದಾಣವಾಗಿ ಮೇಲ್ದರ್ಜೇಗೇರಿಸುವ ಕಾಮಗಾರಿ ಪೂರ್ಣಗೊಂಡಿದೆ. ಸುಮಾರು 60 ಕೋಟಿ ವೆಚ್ಚದಲ್ಲಿ ನಿಲ್ದಾಣದಲ್ಲಿದ್ದ 4500 ಅಡಿ ಉದ್ದರ ರನ್ ವೇಯನ್ನು 7500 ಅಡಿಗೆ ವಿಸ್ತರಣೆ ಮಾಡಲಾಗಿದೆ.












Click it and Unblock the Notifications