ಹುಬ್ಬಳ್ಳಿ : ಕಿಮ್ಸ್ ಆಸ್ಪತ್ರೆಯಲ್ಲಿ ಐದು ಮಕ್ಕಳ ಸಾವು

KIMS
ಹುಬ್ಬಳ್ಳಿ, ಜು. 15 : ಹುಬ್ಬಳ್ಳಿ ನಗರದ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಐದು ನವಜಾತ ಶಿಶುಗಳು ಸಾವನ್ನಪ್ಪಿವೆ. ಸೂಕ್ತ ಆರೈಕೆ ಕೊರತೆಯಿಂದಾಗಿ ಶಿಶುಗಳು ಮೃತಪಟ್ಟಿವೆ ಎಂದು ಪೋಷಕರು ದೂರು ನೀಡಿರುವ ಹಿನ್ನಲೆಯಲ್ಲಿ, ಈ ಕುರಿತು ತನಿಖೆ ನಡೆಸಲು ಕಿಮ್ಸ್ ಆಡಳಿತ ಮಂಡಳಿ ನಿರ್ಧರಿಸಿದೆ.

ಸೋಮವಾರ ಕಿಮ್ಸ್ ನಿರ್ದೇಶಕ ಡಾ.ಯು.ಎಸ್.ಹಂಗರಗಾ ಅವರಿಗೆ ಪೋಷಕರು ದೂರು ನೀಡಿದ್ದರು, ಸೂಕ್ತ ಆರೈಕೆ, ಸೌಲಭ್ಯಗಳ ಕೊರತೆ ಮತ್ತು ವೈದ್ಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಒಂದೇ ರಾತ್ರಿಯಲ್ಲಿ ಐದು ಶಿಶುಗಳು ಸಾವಿಗೀಡಾಗಿವೆ ತಿಳಿಸಿದ್ದಾರೆ. ಪ್ರಕರಣದ ಕುರಿತಂತೆ ಸಮಗ್ರ ವರದಿ ನೀಡುವಂತೆ ನಿರ್ದೇಶಕರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. [ಹುಬ್ಬಳ್ಳಿಯ ಕಿರ್ಲೋಸ್ಕರ್ ಕಂಪನಿಗೆ ಬೀಗ]

ಭಾನುವಾರ ಒಂದೇ ರಾತ್ರಿಯಲ್ಲಿ ಐದು ಶಿಶುಗಳು ಸಾವನ್ನಪ್ಪಿರುವುದು ಮಾತ್ರವಲ್ಲ. ಕಳೆದ ಒಂದು ವಾರದ ಅವಧಿಯಲ್ಲಿ 15ಕ್ಕೂ ಹೆಚ್ಚು ಶಿಶುಗಳು ಜನಿಸಿದ ತಕ್ಷಣವೇ ಸಾವಿಗೀಡಾಗಿವೆ ಎಂದು ಪೋಷಕರು ದೂರಿದ್ದಾರೆ. ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಂದ ಮಾಹಿತಿ ಪಡೆದು ಸೂಕ್ತ ತನಿಖೆ ನಡೆಸಲಾಗುವುದು ಎಂದು ನಿರ್ದೇಶಕರು ಪೋಷಕರಿಗೆ ಭರವಸೆ ನೀಡಿದ್ದಾರೆ.

ಐದು ಮಕ್ಕಳ ಸಾವು : ಭಾನುವಾರ ರಾತ್ರಿ ಕಿಮ್ಸ್‌ ನಲ್ಲಿ ಐದು ಮಕ್ಕಳು ಸಾವನ್ನಪ್ಪಿವೆ. ಹಾವೇರಿ ಜಿಲ್ಲೆ ಬ್ಯಾಡಗಿಯ ತಾಯಮ್ಮ ಬಿಸನಳ್ಳಿ ಹಾಗೂ ಶಿಗ್ಗಾವಿಯ ರೇಣುಕಾ ಮಹೇಂದ್ರಕರ್ ಎಂಬುವವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಕುಂದಗೋಳದ ದೇವಕ್ಕ ಲಮಾಣಿ ಹೆಣ್ಣು ಮಗುವಿಗೆ ಮತ್ತು ಹುಬ್ಬಳ್ಳಿ ನಗರದ ಮಹಾನಬಿ ಕಟರಗಿ ಹಾಗೂ ಬೆಳಗಾವಿ ಜಿಲ್ಲೆಯ ರಿಜ್ವಾನ್ ಗೋಕಾಕ್ ಎಂಬುವವರ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಎಲ್ಲ ಶಿಶುಗಳು ಭಾನುವಾರ ಹುಟ್ಟಿದ ಕೆಲವು ನಿಮಿಷಗಳಲ್ಲೇ ಮೃತಪಟ್ಟಿವೆ ಎಂದು ಆರೋಪಿಸಲಾಗಿದೆ.

ಘಟನೆ ಕುರಿತು ಸ್ಪಷ್ಟನೆ ನೀಡಿರುವ ಹೆರಿಗೆ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ್ ವಾರಿ, ನಾನಾ ಕಾರಣಗಳಿಂದ ಶಿಶುಗಳು ಸಾವಿಗೀಡಾಗಿವೆ. ಈ ಶಿಶುಗಳ ಸಾವಿಗೆ ವೈದ್ಯಕೀಯ ಸಿಬ್ಬಂದಿ ಹೊಣೆಯಲ್ಲ ಎಂದು ಸಮರ್ಥನೆ ನೀಡಿದ್ದಾರೆ. ಆದರೆ, ಪೋಷಕರು ಮಾತ್ರ ಸಿಬ್ಬಂದಿ ನಿರ್ಲಕ್ಷ್ಯ ಮತ್ತು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಶಿಶುಗಳು ಮೃತಪಟ್ಟಿವೆ ಎಂದು ದೂರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+