ಸೋಂಕಿತರಿಗೆ ಕೇರ್ ಸೆಂಟರ್‌ನಲ್ಲಿ ಪೌಷ್ಠಿಕಾಂಶಯುಕ್ತ ಆಹಾರ

ಧಾರವಾಡ, ಮೇ 28; ಧಾರವಾಡ ಜಿಲ್ಲೆಯಲ್ಲಿನ ಕೋವಿಡ್ ಕೋವಿಡ್ ಕಾಳಜಿ ಕೇಂದ್ರದಲ್ಲಿ ದಾಖಲಾಗಿರುವ ಸೋಂಕಿತರಿಗೆ ಪೌಷ್ಠಿಕಾಂಶ ಯುಕ್ತ ಆಹಾರವನ್ನು ನೀಡಲಾಗುತ್ತಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಅವಶ್ಯಕವಾಗಿರುವುದರಿಂದ ಆರೋಗ್ಯ ಇಲಾಖೆ ತಜ್ಞರ ಸಲಹೆಯಂತೆ ಆಹಾರ ನೀಡಲಾಗುತ್ತಿದೆ.

ಉತ್ತಮ ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರವನ್ನು ಸೋಂಕಿತರಿಗೆ ಕಾಲಕಾಲಕ್ಕೆ ಪೂರೈಸಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಕುರಿತು ಎಲ್ಲಾ ತಹಶೀಲ್ದಾರ್‌ಗೆ ಆದೇಶಪತ್ರ ಹೊರಡಿಸಲಾಗಿದೆ.

ಯಾವ ಸಮಯಕ್ಕೆ ಯಾವ ಪೋಷಕಾಂಶ ಇರುವ ಆಹಾರ ನೀಡಬೇಕು ಎಂದು ಮಾಹಿತಿ ನೀಡಲಾಗಿದೆ. ಸಾಧ್ಯವಾದಷ್ಟು ಸರಕಾರ ನೀಡಿರುವ ಪಟ್ಟಿಯಲ್ಲಿ ಸೂಚಿರುವ ಆಹಾರಗಳನ್ನು ಸೋಂಕಿತರಿಗೆ ಪೂರೈಸಬೇಕೆಂದು ತಿಳಿಸಲಾಗಿದೆ.

Nutrition Foods For Covid Patients At Covid Care Center

ಆಹಾರದ ಪಟ್ಟಿ

ಬೆಳಗಿನ ಉಪಹಾರ; ಸೋಮವಾರ 7 ಗಂಟೆಗೆ ಇಡ್ಲಿ, 10 ಗಂಟೆಗೆ ಕಲ್ಲಂಗಡಿ ಹಣ್ಣು, ರಾಗಿಗಂಜಿ. ಮಂಗಳವಾರ ಪಲಾವ್, ಬೆಳಗ್ಗೆ 10 ಗಂಟೆಗೆ ಪಪ್ಪಾಯಿ ಹಣ್ಣು, ಕಷಾಯ. ಬುಧವಾರ ದೋಸೆ, ಬೆಳಗ್ಗೆ 10 ಗಂಟೆಗೆ ಖರಜೂರ ಹಣ್ಣು, ರಾಗಿ ಗಂಜಿ. ಗುರುವಾರ ಇಡ್ಲಿ, ಬೆಳಗ್ಗೆ 10 ಗಂಟೆಗೆ ಕಲ್ಲಂಗಡಿ ಹಣ್ಣು, ಕಷಾಯ.

ಶುಕ್ರವಾರ ಅವಲಕ್ಕಿ, ಬೆಳಗ್ಗೆ 10 ಗಂಟೆಗೆ ಪಪ್ಪಾಯಿ ಹಣ್ಣು, ರಾಗಿ ಗಂಜಿ. ಶನಿವಾರ ಪಲಾವ್, ಬೆಳಗ್ಗೆ 10 ಗಂಟೆಗೆ ಖರಜೂರ ಹಣ್ಣು, ಕಷಾಯ. ರವಿವಾರ ದೋಸೆ, ಬೆಳಗ್ಗೆ 10 ಗಂಟೆಗೆ ಪಪ್ಪಾಯಿ ಹಣ್ಣು, ರಾಗಿ ಗಂಜಿ.

ಮಧ್ಯಾಹ್ನ 1 ಗಂಟೆಗೆ ಊಟ. 2 ರೂಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು ಅಥವಾ ಮೊಟ್ಟೆ. ಸಾಯಂಕಾಯ 5.30ಕ್ಕೆ ಅಲ್ಪೊಪಹಾರ ಏಲಕ್ಕಿ ಬಾಳೆ ಹಣ್ಣು, 3 ಮಾರಿ ಬಿಸ್ಕಿಟ್ ಅಥವಾ 2 ಪ್ರೋಟಿನ್ ಬಿಸ್ಕಿಟ್ ಅಥವಾ 2 ಫ್ರೇಶ್ ಡೇಟ್ಸ್, ಮ್ಯಾಂಗೋ ಬಾರ್ (ವಿಟಮಿನ್-ಸಿ ಯುಕ್ತ) ನೀಡಲಾಗುತ್ತದೆ. ರಾತ್ರಿ 7 ಗಂಟೆಗೆ ಊಟ. 2 ರೂಟ್ಟಿ ಅಥವಾ ಚಪಾತಿ, ಪಲ್ಯ, ಅನ್ನ, ಬೇಳೆ ಸಾರು, ಮೊಸರು. ರಾತ್ರಿ 9 ಗಂಟೆಗೆ ಪ್ಲೇವರ್ಡ ಮಿಲ್ಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+