Modi Dharwad Visit: ಪ್ರಧಾನಿ ಮೋದಿ ಸ್ವಾಗತಕ್ಕೆ ಸಿದ್ಧವಾದ ಪೇಡಾನಗರಿ, ವರದಿ ಇಲ್ಲಿದೆ

ಧಾರವಾಡ, ಮಾರ್ಚ್‌, 12: ಧಾರವಾಡದ ಐಐಟಿ ಉದ್ಘಾಟನೆ ಇಂದು ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಐಟಿ ಬಳಿ ಮುಖ್ಯವೇದಿಕೆ, ಆಸನಗಳ ವ್ಯವಸ್ಥೆ, ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಸೇರಿದಂತೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ.

ಕಾರ್ಯಕ್ರಮದ ಮುಖ್ಯವೇದಿಕೆಯಲ್ಲಿ ಚಾಲುಕ್ಯ ಹಾಗೂ ವಿಜಯನಗರದ ವಾಸ್ತು ಶಿಲ್ಪ ಮಾದರಿಗಳನ್ನು ನಿರ್ಮಾಣ ಮಾಡಲಾಗಿದೆ. ಹಾಗೆಯೇ ಸಿರಿಧಾನ್ಯಗಳಿಂದ ಆರ್ಟ್ ಮಾಡಲಾಗಿದ್ದು, ಅವುಗಳ ಮೂಲಕ ಮೋದಿ ಅವರಿಗೆ ಸ್ವಾಗತ ಕೋರಲಾಗುತ್ತಿದೆ.

Modi Dharwad Visit: Grand preparations to welcome Narendra Modi in Dharwad

ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆ

ಮೋದಿ ಆಗಮಿಸುವ ಮುಖ್ಯವೇದಿಕೆ ಹಾಗೂ ಅವರು ಬರುವ ಮಾರ್ಗಗಳಲ್ಲಿ ಶ್ವಾನದಳದವರು ಅಂತಿಮ ಹಂತದ ಪರಿಶೀಲನೆ ನಡೆಸಿದರು. ಹಾಗೆಯೇ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರಿಗೆ ಉಚಿತ ಬಸ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.

ಭಾನುವಾರ (ಮಾರ್ಚ್‌ 12) ಮಧ್ಯಾಹ್ನ ನರೇಂದ್ರ ಮೋದಿ ಅವರು ಐಐಟಿಗೆ ಆಗಮಿಸಲಿದ್ದು, ಅದಕ್ಕಾಗಿ ಧಾರವಾಡ ಸೇರಿದಂತೆ ಗ್ರಾಮಾಂತರ ಭಾಗದ ಜನರಿಗಾಗಿ ಉಚಿತ ಸಾರಿಗೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಬಸ್‌ಗಳ ಮೂಲಕ ಲಕ್ಷಾಂತರ ಜನ ಈ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ. ಸುಮಾರು 2 ಲಕ್ಷಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.

ಮಾರ್ಗಗಳ ವಿವರ ಇಲ್ಲಿದೆ

ಇನ್ನು ಐಐಟಿ ಉದ್ಘಾಟನೆಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಿಗೆ ಆಗಮಿಸುವ ಸಾರ್ವಜನಿಕ ವಾಹನಗಳಿಗೆ ಬೇರೆ ಬೇರೆ ಮಾರ್ಗಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಎಸ್‌ಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದ್ದರು.

Modi Dharwad Visit: Grand preparations to welcome Narendra Modi in Dharwad

ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಬೆಳಗಾವಿ ಕಡೆಯಿಂದ ಎನ್‌ಎಚ್-4 ರಸ್ತೆಯ ಮೇಲೆ ಬರುವ ಕಾರು, ಕ್ರೂಸರ್, ಬೈಕ್, ಜೀಪ್‌ಗಳಿಗೆ ಹೆಗ್ಗೇರಿ ಗ್ರಾಮ ದಾಟಿ ನಂತರ ಬರುವ ಬೇಲೂರು ಸ್ಲೀಪ್‌ ಜೌಟ್‌ನ ಮುಖಾಂತರ ಸರ್ವಿಸ್ ರಸ್ತೆಯಲ್ಲಿ ಬಂದು ಮೊದಲು ಮತ್ತು ಎರಡನೇ ಅಂಡರ್ ಪಾಸ್‌ಗಳ ಮೂಲಕ ಬೇಲೂರು ಇಂಡಸ್ಟ್ರೀಯಲ್ ಏರಿಯಾಕ್ಕೆ ಬಂದು ಐಐಟಿ ಮುಖ್ಯ ರಸ್ತೆಗೆ ಸೇರಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳಕ್ಕೆ ಬರುವುದು.

ಯಾವ ಮಾರ್ಗಗಳಲ್ಲಿ ಸಂಚರಿಸಬೇಕು?

ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ-ಧಾರವಾಡ, ಕಲಘಟಗಿ ಮತ್ತು ಅಳ್ನಾವರ ಕಡೆಯಿಂದ ಬರುವ ಕಾರು, ಕ್ರೂಸರ್, ಬೈಕ್, ಜೀಪ್‌ಗಳು ನರೇಂದ್ರ ಅಂಡರ್ ಪಾಸ್ ಮುಖಾಂತರ ಎನ್ಎಚ್-4 ರಸ್ತೆಯಲ್ಲಿ ಬೆಳಗಾವಿ ಕಡೆಗೆ ಆಕಾಶ ಹೋಟೆಲ್ ಸ್ಲೀಪ್ ಔಟ್‌ನಲ್ಲಿ ಇಳಿದು ಸರ್ವಿಸ್ ರಸ್ತೆ ಸೇರಿ ಐಐಟಿ ಮುಖ್ಯರಸ್ತೆಗೆ ಬಂದು ಸೇರುವುದು.

ಗರಗ ಕಡೆಯಿಂದ ಬರುವ ಎಲ್ಲಾ ಹಂತದ ವಾಹನಗಳು ಗರಗ ಕ್ರಾಸ್‌ನಿಂದ ಮುಮ್ಮಿಗಟ್ಟಿ ಅಂಡರ್ ಪಾಸ್ ಮುಖಾಂತರ ಯಪ್ಲೆಕ್ಸ್ ಸರ್ಕಲ್‌ಗೆ ಬಂದು ಐಐಟಿ ಮುಖ್ಯ ರಸ್ತೆಗೆ ಬಂದು ಸೇರಬೇಕು. ಗರಗ ಕಡೆಯಿಂದ ಬರುವ ಟ್ರ್ಯಾಕ್ಟರ್‌ಗಳು ಗರಗ ಕ್ರಾಸ್‌ನಿಂದ ಹೈಕೋರ್ಟ್ ಬಳಿ ಇರುವ ಅಂಡರ್ ಪಾಸ್ ಮುಖಾಂತರ ಬೇಲೂರು ಇಂಡಸ್ಟ್ರೀಯಲ್ ಏರಿಯಾದಲ್ಲಿ ಬಂದು ಸೇರಬೇಕಾಗುತ್ತದೆ. ಹಾಗೆಯೇ ಐಐಟಿ ಮುಖ್ಯ ರಸ್ತೆಗೆ ಬಂದು ಸೇರಿ ನಿಗದಿಪಡಿಸಲಾದ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಬೇಕು ಎಂದು ಎಸ್‌ಪಿ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+