Mango Price: ಚಿನ್ನದ ಬೆಲೆಗೆ ಮಾವಿನ ಹಣ್ಣುಗಳ ಮಾರಾಟ: ಮಳೆಯಾದರೂ ತಗ್ಗದ ದರ
ಹುಬ್ಬಳ್ಳಿ, ಜೂನ್ 07: ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಆಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಅತ್ಯಧಿಕ ಮಳೆ ಆಗುತ್ತಿದ್ದರು ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳ ಬೆಲೆ ಇಳಿಕೆ ಆಗಿಲ್ಲ. ಕೆಲವು ಮಾವುಗಳು ಚಿನ್ನದ ಬೆಲೆಗೆ ಬಿಕರಿಯಾಗುತ್ತಿವೆ. ಗ್ರಾಹಕರು ಬೆಲೆ ಏರಿಕೆಯಿಂದ ಖರೀದಿಗೆ ಹಿಂದೆ ಮುಂದೆ ನೋಡುತ್ತಿದ್ದಾರೆ.
ಸಾಕಷ್ಟು ಮಳೆ ಬೀಳುತ್ತಿದ್ದರು ಹುಬ್ಬಳ್ಳಿ ಮತ್ತು ಧಾರವಾಡದ ಮಾರುಕಟ್ಟೆಗಳಲ್ಲಿ ಹಣ್ಣುಗಳಿಗೆ ರಾಜಾ 'ಮಾವು'. ಅದೇ ಮಾವಿನ ಹಣ್ಣುಗಳ ರಾಜಾ ಎಂದು ಹೆಸರಾಗಿರುವ ಆಪೂಸ್, ಕಲ್ಕಿ, ಬದಾಮಿ (ಅಲಾನ್ನೋ), ಮಲ್ಯೂಬಾ ತಳಿಯ ಮಾವಿನ ಹಣ್ಣುಗಳು ಹೆಚ್ಚಾಗಿ ಆವಕ ಆಗುತ್ತಿವೆ. ಕಳೆದೊಂದು ವಾರದಿಂದ ನಗರದ ಮಾರುಕಟ್ಟೆಗೆ ಬರುತ್ತಿವೆ. ಹೆಚ್ಚಿನ ಪ್ರಮಾಣದಲ್ಲಿ ಈ ಭಾಗದ ಮಾರುಕಟ್ಟೆಗಳಿಗೆ ಆವಕ ಆಗುತ್ತಿವೆ.

ವ್ಯಾಪಕ ಮಳೆ ನಡುವೆ ಮಾವುಗಳ ಬೆಲೆ ಏರಿಕೆ ಗ್ರಾಹಕರಿಗೆ ಕತ್ತರಿ ಬಿದ್ದಿದೆ. ಆಪೂಸ್, ಕಲ್ಕಿ, ಬದಾಮಿ (ಅಲಾನ್ನೋ) ಆವಕವಾದರೆ, ಈಗಾಗಲೇ ಗೋದಾಮಿನಲ್ಲಿ ರಸಪೂರಿ ಹಣ್ಣುಗಳನ್ನು ದಾಸ್ತಾನು ಮಾಡಲಾಗಿದೆ. ಬೆಲೆ ಗಗನಕ್ಕೇರಿದ್ದ ಕಾರಣ ಜನರು ಖರೀದಿಗೆ ಹಿಂದೇಟು ಹಾಕುತ್ತಿಲ್ಲ.
ಆಪೂಸ್ ಕೆಜಿಗೆ ರೂ. 600ರಿಂದ 700 ಬೆಲೆ
ಹುಬ್ಬಳ್ಳಿಯ ಜನತಾ ಬಜಾರ್ ನಲ್ಲಿ ವ್ಯಾಪಾರಿಗಳು ಮಾವಿನ ಹಣ್ಣುಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಬಹು ಬೇಡಿಕೆ ಇರುವ ಆಪೂಸ್ ತಳಿಯ ಮಾವಿಗೆ ಪ್ರತಿ ಕೆ.ಜಿಗೆ ಬೆಲೆ ರೂ. 600ರಿಂದ 700 ರವರೆಗೆ ಇದೆ. ಬೆಳಗಾವಿ ಪ್ರದೇಶದಲ್ಲಿ ಬೆಳೆಯುವ ಸಿಂಧೂರ ತಳಿಯ ಮಾವಿನ ಹಣ್ಣು ಸ್ಥಳೀಯವಾಗಿ ಮಾರುಕಟ್ಟೆಗೆ ಅವಕವಾಗುವ ಬದಾಮಿ ತಳಿಗೆ ಕೆ.ಜಿಗೆ 400ರಿಂದ 4 50 ವರೆಗೆ ಬೆಲೆ ನಿಗದಿ ಆಗಿದೆ.
ಜೂನ್ ನಲ್ಲೂ ಮಾವು ಆವಕ.!
ಗ್ರಾಹಕರು ಮಾರುಕಟ್ಟೆಗಳಲ್ಲಿ ಕೆಜಿ ಲೆಕ್ಕದಲ್ಲಿ ಬದಲಾಗಿ ಡಜನ್‌ಗೆ ಇಂತಿಷ್ಟು ಬೆಲೆ ನೀಡಿ ಖರೀದಿಸುತ್ತಾರೆ. ಒಂದು ಡಜನ್ ಆಪೂಸ್ ಮಾವಿನ ಹಣ್ಣಿಗೆ ಚಿಲ್ಲರೆ ವ್ಯಾಪಾರಿಗಳು 600ರಿಂದ 800 ದರ ಹೇಳುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್ ಆರಂಭದಲ್ಲಿ ಮಾವುಗಳು ಮಾರುಕಟ್ಟೆಗೆ ಆಮದಾಗುತ್ತಿದ್ದವು. ಆದರೆ ಈ ಭಾರಿ ಜೂನ್ ನಲ್ಲೂ ಆವಕವಾಗುತ್ತಿವೆ.

ಮಳೆ ಕೊರತೆಯಿಂದ ಮಾವು ಇಳುವರಿ ಕುಸಿತ
2023ರಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಕೊರತೆ ಉಂಟಾಗಿತ್ತು. ಇದರಿಂದ ತೋಟಗಾರಿಕೆ ಬೆಳೆಯಾದ ಮಾವಿಗೆ ಇಳುವರಿ ಕುಸಿಯಿತು. ಧಾರವಾಡ ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ, ಅಳ್ಳಾವರ, ಅಣ್ಣಿಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾವಿನ ತೋಟಗಳಿವೆ. ಬದಾಮಿ (ಅಲಾತೀನ್ಸ್), ದಶೇರಿ. ತೋತಾಪುರಿ, ಮಲ್ಲಿಕಾ ತಳಿಯ ಮಾವು ಬೆಳೆಯಲಾಗಿದೆ.
ಮಳೆಯ ಕೊರತೆ, ನೀರಿನ ಅಭಾವದಿಂದ ಮಾವಿನ ಗಿಡಗಳಿಗೆ ಪ್ರಮುಖವಾಗಿ ತೇವಾಂಶದ ಕೊರತೆ ಕಾಡಿದೆ. ಹೀಗಾಗಿ 'ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಮಾವಿನ ಹಣ್ಣುಗಳ ಗಾತ್ರ ಕಡಿಮೆ ಆಗಿದೆ. ಕಲ್ಪಿ, ಸಿಂಧೂರ, ಬದಾಮಿ, ಮಲ್ಲಿಕಾ, ತೋತಾಪುರಿ ತಳಿಯ ಮಾವಿನ ಹಣ್ಣುಗಳನ್ನು ತರಿಸಲಾಗುತ್ತಿದೆ. ಒಂದು ಡಜನ್ ಮಾವಿನ ಹಣ್ಣು ಕೆಜಿಗೆ 400 ರಿಂದ 450 ರವರೆಗೆ ಮಾರಾಟ ಮಾಡಲಾಗುತ್ತಿದೆ.
ಮಾವು ಪ್ರಿಯರಿಗೆ ನಿರಾಸೆ
ಮಾವಿನ ಸೀಜನ್ ಮುಗಿಯುತ್ತಾ ಬಂದರೂ ಸಹ ಬೆಲೆಯಲ್ಲಿ ಇಳಿಕೆ ಆಗದಿರುವುದು ಮಾವು ಪ್ರಿಯರಿಗೆ ನಿರಾಶೆ ಉಂಟು ಮಾಡಿದೆ. ಪ್ರತಿ ದಿನ ಸರಾಸರಿ 30ರಿಂದ 40 ಡಜನ್ ಹಣ್ಣುಗಳು ಮಾರಾಟವಾಗುತ್ತಿವೆ ಎಂದು ಬೀದಿ ಬದಿಯ ವ್ಯಾಪಾರಿಗಳು ಸದ್ಯದ ಸ್ಥಿತಿ ವ್ಯಾಪಾರದ ಬಗ್ಗೆ ತಿಳಿಸಿದರು. ಇತ್ತ ಗ್ರಾಹಕರು, ಮಾವಿನ ಸೀಸನ್ ಮುಗಿಯುತ್ತಾ ಬಂದರೂ ಸಹ ಬೆಳೆ ಇಳಿಕೆ ಆಗಿಲ್ಲ. ಇದರಿಂದ ಹೆಚ್ಚಿನ ಪ್ರಯಾಣದಲ್ಲಿ ಖರೀದಿಸಲು ಮನಸ್ಸಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications