ಕುಂದಗೋಳ ಉಪ ಚುನಾವಣೆ : ಅನುಕಂಪದ ನಿರೀಕ್ಷೆಯಲ್ಲಿ ಬಿಜೆಪಿ, ಕಾಂಗ್ರೆಸ್

ಧಾರವಾಡ, ಏಪ್ರಿಲ್ 30 : ಸಧಾರವಾಡ ಜಿಲ್ಲೆಯ ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ವೇದಿಕೆ ಸಿದ್ಧವಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಡೆಯಲಿದ್ದು, ಎರಡೂ ಪಕ್ಷಗಳು ಅನುಕಂಪದ ಅಲೆ ನಿರೀಕ್ಷೆಯಲ್ಲಿವೆ.

ಸಿ.ಎಸ್.ಶಿವಳ್ಳಿ ಅವರ ನಿಧನದಿಂದ ತೆರವಾದ ಕುಂದಗೋಳ ಕ್ಷೇತ್ರಕ್ಕೆ ಮೇ 19ರಂದು ಚುನಾವಣೆ ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆ ಕಾರ್ಯ ಮುಕ್ತಾಯಗೊಂಡಿದೆ. ನಾಮಪತ್ರ ವಾಪಸ್ ಪಡೆಯಲು ಮೇ 2 ಕೊನೆಯ ದಿನ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅನುಕಂಪದ ಮತಗಳ ನಿರೀಕ್ಷೆಯಲ್ಲಿವೆ. ಕಾಂಗ್ರೆಸ್ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಬಿಜೆಪಿ ಕಳೆದ ಬಾರಿ 634 ಮತಗಳ ಅಂತರದಿಂದ ಸೋತಿದ್ದ ಎಸ್.ಐ.ಚಿಕ್ಕನಗೌಡ ಅವರನ್ನು ಕಣಕ್ಕಿಳಿಸಿದೆ.

ಅಭ್ಯರ್ಥಿಗಳ ಘೋಷಣೆ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇದನ್ನು ಬಗೆಹರಿಸಿಕೊಂಡು ಚುನಾವಣೆ ಎದುರಿಸುವುದು ಎರಡೂ ಪಕ್ಷಗಳ ಮುಂದಿರುವ ಸವಾಲಾಗಿದೆ. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ....

ಕಾಂಗ್ರೆಸ್‌ ಅನುಕಂಪದ ಲೆಕ್ಕಾಚಾರ

ಕಾಂಗ್ರೆಸ್‌ ಅನುಕಂಪದ ಲೆಕ್ಕಾಚಾರ

ಸಿ.ಎಸ್.ಶಿವಳ್ಳಿ ಅವರ ನಿಧನದಿಂದಾಗಿ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್‌ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್ ನೀಡಿದೆ. ಈ ಮೂಲಕ ಅನುಕಂಪದ ಮತಗಳನ್ನು ಪಡೆದು ಗೆಲ್ಲುವ ಲೆಕ್ಕಾಚಾರದಲ್ಲಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಉಪ ಚುನಾವಣೆ ಉಸ್ತುವಾರಿಯನ್ನಾಗಿ ನೇಮಿಸಿದೆ.

634 ಮತಗಳ ಸೋಲು

634 ಮತಗಳ ಸೋಲು

ಬಿಜೆಪಿ ಕಳೆದ ಚುನಾವಣೆ ಸೋಲಿನ ಅನುಕಂಪದ ಆಧಾರದಲ್ಲಿ ಜಯಗಳಿಸಲು ತಂತ್ರ ರೂಪಿಸಿದೆ. ಆದ್ದರಿಂದ, 2018ರ ವಿಧಾನಸಭೆ ಚುನಾವಣೆಯಲ್ಲಿ 634 ಮತಗಳ ಅಂತರದಿಂದ ಸೋತಿದ್ದ ಎಸ್‌.ಐ.ಚಿಕ್ಕನಗೌಡ ಅವರಿಗೆ ಈ ಬಾರಿಯೂ ಟಿಕೆಟ್ ನೀಡಿದೆ.

ಸಿ.ಎಸ್.ಶಿವಳ್ಳಿ ಅವರ ಗೆಲುವು

ಸಿ.ಎಸ್.ಶಿವಳ್ಳಿ ಅವರ ಗೆಲುವು

ಸಿ.ಎಸ್.ಶಿವಳ್ಳಿ ಅವರು ಕುಂದಗೋಳ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದರು. 1999ರಲ್ಲಿ ಜೆಡಿಯುನಿಂದ ಕಣಕ್ಕಿಳಿದಿದ್ದ ಎಂ.ಎಸ್.ಅಕ್ಕಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲಿಸಿದ್ದರು. 2013 ಮತ್ತು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದಿದ್ದರು.

ಎಸ್‌.ಐ.ಚಿಕ್ಕನಗೌಡ ಲೆಕ್ಕಾಚಾರ

ಎಸ್‌.ಐ.ಚಿಕ್ಕನಗೌಡ ಲೆಕ್ಕಾಚಾರ

ಎಸ್‌.ಐ.ಚಿಕ್ಕನಗೌಡ ಅವರು 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಗೆದ್ದಿದ್ದರು. 2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಕಣಕ್ಕಿಳಿದು ಸಿ.ಎಸ್.ಶಿವಳ್ಳಿ ಅವರ ವಿರುದ್ಧ ಸುಮಾರು 9 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. 2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು 634 ಮತಗಳಲ್ಲಿ ಸೋತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+