"ರಾಜ್ಯ ಸರ್ಕಾರವೂ ಜನನ - ಮರಣ ಎರಡಕ್ಕೂ ಟ್ಯಾಕ್ಸ್‌ ಹೆಚ್ಚಳ ಮಾಡಿದೆ"

ಹುಬ್ಬಳ್ಳಿ: ಕರ್ನಾಟಕ ಸರ್ಕಾರವು ಹುಟ್ಟಿದ್ರೂ.. ಸತ್ತರೂ ಟ್ಯಾಕ್ಸ್ ಹೆಚ್ಚಿಗೆ ಮಾಡಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್ ರವಿಕುಮಾರ್ ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಅವರು ಮಾತನಾಡಿದ ಅವರು, ರೈತರ ಬೆನ್ನು ಮೂಳೆಯನ್ನು ಈ ಸರ್ಕಾರ ಮುರಿದಿದ್ದು ನಮ್ಮ

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ಮಕ್ಕಳಿಗೆ ಜಾರಿ ತಂದಿದ್ದ ಸ್ಕಾಲರ್‌ಶಿಪ್‌ ಯೋಜನೆಗಳನ್ನು ನಿಲ್ಲಿಸಿದೆ. ಈ ಸರ್ಕಾರ ಬಂದ ಮೇಲೆ ಅದನ್ನು ತಡೆ ಹಿಡಿದಿದೆ ದಲಿತರ ಪರ ಎನ್ನುವ ಸರ್ಕಾರ ದಲಿತರಿಗೆ ದ್ರೋಹ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Karnataka Government Has also Increased taxes on Both Birth and Death Bjp

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯಕ್ಕೆ ನಿಗದಿ ಮಾಡಿರುವ ಹಣವನ್ನು ಬೇರೆಯ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಸರ್ಕಾರ‌ದ ಅಭಿವೃದ್ಧಿಗೆ ವಿರೋಧಿಯಾಗಿದೆ. ನಿಗಮಗಳಿಗೆ ಹಣ ಕೊಡುವುದನ್ನೇ ಈ ಸರ್ಕಾರ ನಿಲ್ಲಿಸಿ ಬಿಟ್ಟಿದ್ದು. ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ಮಾಡುತ್ತಿದೆ. ಆಡಳಿತದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೇಲ್ ಆಗಿದ್ದಾರೆ.

ಹಿಂದು ವಿರೋಧಿ ಸರ್ಕಾರ ಇದಾಗಿದೆ. ಸುಹಾಸ್ ಶೆಟ್ಟಿ ಕೊಲೆ ಸರ್ಕಾರಿ ಪ್ರಾಯೋಜಿತವಾಗಿದೆ ಎನ್ನುವ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ. ಪಾಜಿಲ್‌ಗೆ ಸರ್ಕಾರ ಪರಿಹಾರವಾಗಿ ನೀಡಿದ್ದ 25 ಲಕ್ಷ ರೂಪಾಯಿ ಹಣದಲ್ಲಿ 3 ಲಕ್ಷವನ್ನು ಕೊಲೆ ಸೂಪಾರಿಗೆ ಎಂದು ನೀಡಲಾಗಿದೆ‌. ಈ ಸರ್ಕಾರ ಹಿಂದು ವಿರೋಧಿ ಆಗಿದೆ. ಭಯೋತ್ಪಾದಕರಿಗೆ ಕರ್ನಾಟಕ ಸ್ಲೀಪರ್ ಶೆಲ್ ಆಗಿದೆ ಎಂದರು. ಇನ್ನು ರಾಜ್ಯ ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಜನಾಕ್ರೋಶ ಯಾತ್ರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದೇ 11ರಂದು ಹುಬ್ಬಳ್ಳಿಯಲ್ಲಿ ಜನಾಕ್ರೋಶ ಯಾತ್ರೆ ಸಮಾರೋಪ ಕಾರ್ಯಕ್ರಮ ನಡೆಯುತ್ತದೆ.

ಧಾರವಾಡ ಜಿಲ್ಲೆಯ ಕಾರ್ಯಕರ್ತರು ಸೇರಿದಂತೆ ರಾಜ್ಯದ ಅನೇಕ ನಾಯಕರು ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.

ನಮ್ಮ ನಿರೀಕ್ಷೆಗು ಮೀರಿ ಜನರು ಭಾಗಿಯಾಗುತ್ತಿದ್ದಾರೆ. ಜನಾಕ್ರೋಶ ಯಾತ್ರೆ ಇದು ಪ್ರಾರಂಭ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದಿನೇ ದಿನೇ ಬೆಲೆ ಏರಿಸುತ್ತಿದೆ. ಈ ಸರ್ಕಾರದಲ್ಲಿ ಒಂದು ವಿಂಗ್ ಬೆಲೆ ಏರಿಕೆ ಬಗ್ಗೆ ಕೆಲಸ ಮಾಡುತ್ತಿದೆ. ಈ ಸರ್ಕಾರ ಕಸಕ್ಕೂ ಟ್ಯಾಕ್ಸ್ ಹಾಕುತ್ತಿದ್ದು ಸುಮಾರು 50 ವಸ್ತುಗಳ ಮೇಲೆ ಟ್ಯಾಕ್ಸ್ ಹಾಕುವಂತ ಕೆಲಸ ಮಾಡಿದೆ. ಈ ಸರ್ಕಾರ ಬೆಲೆ ಏರಿಕೆ ಅಭಿಯಾನ ನಡೆಸುತ್ತಿದೆ ಎಂದಿದ್ದಾರೆ.

ಜಾತ್ರಾ ಮಹೋತ್ಸವದಲ್ಲಿ ಗಮನ ಸೆಳೆದ ಹೊನ್ನಾಟ

ಇಲ್ಲಿ ಇಡೀ ಗ್ರಾಮಕ್ಕೆ ಗ್ರಾಮವೇ ಭಂಡಾರಮಯವಾಗಿದೆ. ಪುರುಷರು, ಮಹಿಳೆಯರು, ಯುವಕ ಯುವತಿಯರು ಭಂಡಾರದ ಚೀಲ ಕೈಯಲ್ಲಿ ಇಡಿದು ಪರಸ್ಪರ ಒಬ್ಬರಿಗೊಬ್ಬರು ಎರಚಾಡುತ್ತಿರೋ ದೃಶ್ಯಗಳು ಕಂಡುಬಂದಿದ್ದು ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ. ಯಾದವಾಡ ಗ್ರಾಮದಲ್ಲಿ ಗ್ರಾಮದೇವಿ ಜಾತ್ರೆ ಸಂಭ್ರಮ ಮನೆಮಾಡಿದೆ. ಇಂದು ಬೀದಿಬೀದಿಗಳಲ್ಲಿ ನಡೆದ ಹೊನ್ನಾಟ ಇಡಿ ಗ್ರಾಮವನ್ನು ಭಂಡಾರಮಯಗೊಳಿಸಿತು. ಯಾವುದೇ ರೀತಿಯ ಬೇಧಭಾವ ಇಲ್ಲದೆ ಸಡಗರದಲ್ಲಿ ಪಾಲ್ಗೊಂಡು ಗಮನ ಸೆಳೆದರು. 21 ವರ್ಷಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಗ್ರಾಮದಲ್ಲಿ ವಿಶೇಷ ಸಂಭ್ರಮ ಕಾಣಿಸಿತು.

ಜಾತ್ರೆ ನಿಮಿತ್ತ ಮೂರು ದಿನಗಳ ಕಾಲ ಹೊನ್ನಾಟ ನಡೆಯುತ್ತಿದ್ದು, ಇದಕ್ಕೆ ಚಾಲನೆ ಸಿಕ್ಕಿದೆ. ಅದರಂತೆ ಇಂದು ಕೂಡ ಗ್ರಾಮದೇವಿಯರ ಮೂರ್ತಿಗಳೊಂದಿಗೆ ಮೆರವಣಿಗೆ ಹೊರಟಾಗ ಜನ ಭಂಡಾರ, ಹೂವುಗಳನ್ನು ತೂರಿ ಸ್ವಾಗತಿಸಿದರು ಸಂಭ್ರಮಿಸಿದರು. ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಸಂಕೇತವಾಗಿ ಹೊನ್ನಾಟ ನಡೆಸಲಾಗುತ್ತದೆ. ವಿರಾಟ ರೂಪ ತಾಳಿದ ದೇವಿಯು ರಥಿಕಳಾಗಿ ದುಷ್ಟಶಕ್ತಿಗಳನ್ನು ನಿಗ್ರಹಿಸಲು ದುರ್ಗಿ ರೂಪಿಣಿಯಾದ ದೇವಿಯನ್ನು ಹೆಗಲ ಮೇಲೆ ಹೊತ್ತ ಭಕ್ತರು ಬಡಾವಣೆಗಳಲ್ಲಿ ಸಾಗುವುದು ವಾಡಿಕೆ. ದೇವಿ ರಕ್ತ ಚಿಮ್ಮಿವಿಕೆಯ ಸಂಕೇತವೇ ಕುಂಕುಮ- ಭಂಡಾರ ಹಾರಿಸುವಿಕೆಯಾಗಿದೆ. ಹೀಗಾಗಿ ಮೆರವಣಿಗೆಯಲ್ಲಿ ಡೊಳ್ಳು ಸೇರಿದಂತೆ ವಾದ್ಯಮೇಳದೊಂದಿಗೆ ದೇವಿಯರು ಹೊನ್ನಾಟದ ರೂಪದಲ್ಲಿ ಗ್ರಾಮವನ್ನು ಪ್ರದಕ್ಷಿಣೆ ಹಾಕಿದರು.

ಹೀಗಾಗಿ ಯಾದವಾಡ ಊರಿಗೆ ಊರೇ ರಂಗೇರಿತ್ತು. ಎತ್ತ ನೋಡಿದರೂ ಭಂಡಾರದ ಹುಡಿಯಲ್ಲಿ ಹುದುಗಿದ ಜನಸಾಗರ ಮೇರೆಮೀರಿ ಹರಿದು ಬರುವಂತೆ ತೋರಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+