ಮತದಾರರ ಪಟ್ಟಿಯಲ್ಲಿ ಬದುಕಿದ್ದವರ ಹೆಸರೇ ಡಿಲೀಟ್: ಮತದಾನದಿಂದ ವಂಚಿತರಾದ 400 ಮಂದಿ
ಧಾರವಾಡ, ಮೇ 10: ರಾಜ್ಯ ರಾಜಕಾರಣದಲ್ಲಿ ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಇಂದು ಮೇ 10ರಂದು ಭರದಿಂದ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತ ಹಾಕಿ ನಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸಬೇಕು ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ.
ಮತದಾನ ಮಾಡಲು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಬಂದರೂ ಸಹ ನೂರಾರು ಮತದಾರರು ಮತದಾನದಿಂದ ವಂಚಿತರಾಗಿದ್ದಾರೆ. ವೋಟ್ ಮಾಡಲು ಬಂದವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಪರಿಶೀಲನೆ ಮಾಡಿದ ಅಧಿಕಾರಿಗಳು ಹೆಸರು ಡಿಲೀಟ್ ಆಗಿರುವ ಬಗ್ಗೆ ಮತದಾರರಿಗೆ ತಿಳಿಸಿದ್ದಾರೆ.

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಮತ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಒಂದೇ ಮತ ಕೇಂದ್ರದಲ್ಲಿ 400ಕ್ಕೂ ಅಧಿಕ ಮತಗಳು ಡಿಲೀಟ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ವ್ಯಾಪ್ತಿಯ ಒಂದೇ ಮತಗಟ್ಟೆಯಲ್ಲಿನ ಮತಗಳು ಡಿಲೀಟ್ ಆಗಿವೆ. ಗುರುನಾಥ ನಗರದಲ್ಲಿರುವ ಪ್ರಿಯದರ್ಶಿನಿ ಕಾಲೇಜಿನ ಮತಗಟ್ಟೆ ಮತಗಳು ಡಿಲೀಟ್ ಆಗಿದ್ದು, ಇಂದು ಮತದಾನ ಮಾಡಲು ಅವಕಾಶ ಸಿಗದೇಸಾರ್ವಜನಿಕರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಬದುಕಿದ್ದವರ ಹೆಸರೇ ಡಿಲೀಟ್ ಆಗಿದ್ದು, ಬದುಕಿದ್ದವರನ್ನೇ ಪಟ್ಟಿಯಿಂದ ಹೇಗೆ ಡಿಲೀಟ್ ಮಾಡಿದ್ದಾರೆ ಎಂದು ಮತದಾನದಿಂದ ವಂಚಿತರಾದ 400ಕ್ಕೂ ಅಧಿಕ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯವೇ ಮತದಾರರ ಹೆಸರು ಡಿಲೀಟ್ ಆಗಲು ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದರು.












Click it and Unblock the Notifications