ಹುಬ್ಬಳ್ಳಿಯಲ್ಲಿ ಫೆ.21ರಂದು ಉದ್ಯೋಗ ಮೇಳ
ಹುಬ್ಬಳ್ಳಿ, ಫೆ. 18 : ಹುಬ್ಬಳ್ಳಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಜಂಟಿಯಾಗಿ ಫೆ.21ರಂದು ಹುಬ್ಬಳ್ಳಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಿವೆ.
ನವನಗರದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಫೆ.21 ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ಉದ್ಯೋಗ ಮೇಳ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ವಿದ್ಯಾರ್ಹತೆಯ ಎಲ್ಲ ಮೂಲ ಪ್ರಮಾಣ ಪತ್ರಗಳು, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬಯೋಡಾಟಾಗಳೊಂದಿಗೆ ಸ್ವಂತ ಖರ್ಚಿನಲ್ಲಿ ಹಾಜರಾಗಬಹುದು.

ಈ ಮೇಳದಲ್ಲಿ ಟ್ರಿನಿಟಿ ಟೆಕ್ನಾಲಜೀಸ್, ಪ್ರೊಲಿಂ ಇನ್ಫೋಸಿಸ್ಟಮ್ಸ್, ಸುವಿಜನ್ ಹೋಲ್ಡಿಂಗ್ಸ್, ಪಾಟೀಲ್ ಎಲೆಕ್ಟ್ರಿಕ್ ವರ್ಕ್ಸ್, ಏಬಲ್ ಡಿಸೈನ್ ಎಂಜಿನಿಯರಿಂಗ್ ಸರ್ವೀಸಸ್, ಆಶಾ ಎಲೆಕ್ಟ್ರಿಕಲ್ಸ್, ಟಾಟಾ ಮಾರ್ಕೋಪೊಲೊ, ವರ್ಟೆಕ್ಸ್ ಮುಂತಾದ ಕಂಪನಿಗಳು ಪಾಲ್ಗೊಳ್ಳಲಿವೆ. [ಕೆಎಸ್ಆರ್ ಟಿಸಿಯಲ್ಲಿ 1463 ಹುದ್ದೆಗಳಿವೆ ಅರ್ಜಿ ಸಲ್ಲಿಸಿ]
ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಕಂಪ್ಯೂಟರ್ ಸೈನ್ಸ್ ಹಾಗೂ ಇನ್ಫಾರ್ಮೆಷನ್ ಸೈನ್ಸ್, ಬಿಸಿಎ, ಎಂಬಿಎ, ಎಂಕಾಂ ಹಾಗೂ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 0836-2225288/89 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.












Click it and Unblock the Notifications