ಚಿತ್ರಗಳು : ಹುಬ್ಬಳ್ಳಿಯಲ್ಲಿ ಹಳಿ ತಪ್ಪಿದ ಚಾಲುಕ್ಯ ಎಕ್ಸ್‌ಪ್ರೆಸ್
ಹುಬ್ಬಳ್ಳಿ, ಡಿಸೆಂಬರ್ 22 : ಹುಬ್ಬಳ್ಳಿಯ ಉಣಕಲ್ ನಿಲ್ದಾಣದ ಬಳಿ 'ಚಾಲುಕ್ಯ ಎಕ್ಸ್‌ಪ್ರೆಸ್' ರೈಲು ಹಳಿ ತಪ್ಪಿದ ಘಟನೆ ಸೋಮವಾರ ನಡೆದಿದೆ. ಅಪಘಾತದಲ್ಲಿ 8 ಪ್ರಯಾಣಿಕರು ಗಾಯಗೊಂಡಿದ್ದಾರೆ. ರೈಲಿನ ಎಂಜಿನ್ ಹಾಗೂ ಮೂರು ಬೋಗಿಗಳಿಗೆ ಅಪಘಾತದಿಂದಾಗಿ ಹಾನಿಯಾಗಿದೆ.
ಯಶವಂತಪುರದಿಂದ ಮುಂಬೈನ ದಾದರ್‌ಗೆ ಹೊರಟ್ಟಿದ್ದ 'ಚಾಲುಕ್ಯ ಎಕ್ಸ್‌ಪ್ರೆಸ್' ರೈಲು ಸೋಮವಾರ ಮಧ್ಯಾಹ್ನ 3.25ರ ಸುಮಾರಿಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟಿತು. ನಂತರ ಕೇವಲ 10 ನಿಮಿಷಗಳಲ್ಲಿ ಉಣಕಲ್ ನಿಲ್ದಾಣದ ಬಳಿ ಹಳಿ ತಪ್ಪಿತು. [ಮಡಕಶಿರ ಬಳಿಯ ರೈಲು ದುರಂತದ ಚಿತ್ರಗಳು]

'ಚಾಲುಕ್ಯ ಎಕ್ಸ್‌ಪ್ರೆಸ್' ಹಳಿ ತಪ್ಪಿದ ಸಮಯದಲ್ಲಿ ಎದುರಿನಿಂದ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ಬರುತ್ತಿತ್ತು. ಅದು ಕೂಡ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದ ಹಳಿಗೆ ಬಂದು ಸೇರಬೇಕಿತ್ತು. ಆದರೆ, ಸಮಯಪ್ರಜ್ಞೆಯಿಂದ ಅದು ತಪ್ಪಿತು. [ರೈಲ್ವೆ ಟಿಕೆಟ್ ಬುಕಿಂಗ್ : 15 ನಿಮಿಷ ಹೆಚ್ಚುವರಿ ಅವಕಾಶ]
17 ಬೋಗಿಗಳ 'ಚಾಲುಕ್ಯ ಎಕ್ಸ್‌ಪ್ರೆಸ್' ರೈಲು ಹಳಿ ತಪ್ಪಲು ತಪ್ಪು ಸಿಗ್ನಲಿಂಗ್ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಈ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ರೈಲು ಹಳಿ ತಪ್ಪಿದ ಚಿತ್ರಗಳು ಇಲ್ಲಿವೆ....

ಹುಬ್ಬಳ್ಳಿಯಲ್ಲಿ ತಪ್ಪಿದ ಭಾರೀ ದುರಂತ
ಹುಬ್ಬಳ್ಳಿಯ ಉಣಕಲ್ ನಿಲ್ದಾಣದ ಬಳಿ 'ಚಾಲುಕ್ಯ ಎಕ್ಸ್‌ಪ್ರೆಸ್' ರೈಲು ಹಳಿ ತಪ್ಪಿದ ಘಟನೆ ಸೋಮವಾರ ನಡೆದಿದೆ. ರೈಲಿನ ಎಂಜಿನ್ ಹಾಗೂ ಮೂರು ಬೋಗಿಗಳೂ ಹಳಿ ತಪ್ಪಿದ್ದು ಭಾರೀ ದುರಂತ ತಪ್ಪಿದೆ.

ಘಟನೆ ನಡೆದಿದ್ದು ಎಲ್ಲಿ?
ಯಶವಂತಪುರದಿಂದ ಮುಂಬೈನ ದಾದರ್‌ಗೆ ಹೊರಟ್ಟಿದ್ದ 'ಚಾಲುಕ್ಯ ಎಕ್ಸ್‌ಪ್ರೆಸ್' ರೈಲು ಸೋಮವಾರ ಮಧ್ಯಾಹ್ನ 3.25ರ ಸುಮಾರಿಗೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಟಿತು. ನಂತರ ಕೇವಲ 10 ನಿಮಿಷಗಳಲ್ಲಿ ಉಣಕಲ್ ನಿಲ್ದಾಣದ ಬಳಿ ಹಳಿ ತಪ್ಪಿತು.

8 ಪ್ರಯಾಣಿಕರಿಗೆ ಗಾಯ
ಈ ಅಪಘಾತದಲ್ಲಿ 8 ಪ್ರಯಾಣಿಕರು ಗಾಯಗೊಂಡರು. ರೈಲ್ವೆ ಆಸ್ಪತ್ರೆಗಳಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ಅಪಘಾತದಿಂದಾಗಿ ಈ ಮಾರ್ಗದಲ್ಲಿನ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ಬರುತ್ತಿತ್ತು
'ಚಾಲುಕ್ಯ ಎಕ್ಸ್‌ಪ್ರೆಸ್' ಹಳಿ ತಪ್ಪಿದ ಸಮಯದಲ್ಲಿ ಎದುರಿನಿಂದ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲು ಬರುತ್ತಿತ್ತು. ಅದು ಕೂಡ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದ ಹಳಿಗೆ ಬಂದು ಸೇರಬೇಕಿತ್ತು. ಆದರೆ, ಸಮಯಪ್ರಜ್ಞೆಯಿಂದ ಅದು ತಪ್ಪಿತು.

ತಪ್ಪು ಸಿಗ್ನಲಿಂಗ್ ಕಾರಣ?
17 ಬೋಗಿಗಳ ಚಾಲುಕ್ಯ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಲು ತಪ್ಪು ಸಿಗ್ನಲಿಂಗ್ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ರೈಲ್ವೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಹಲವು ರೈಲುಗಳು ವಿಳಂಬ
ಈ ಅಪಘಾತದಿಂದಾಗಿ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡರೆ, ಕೆಲವು ರೈಲುಗಳ ಸಂಚಾರ ವಿಳಂಬವಾಯಿತು. ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ಕುಮಾರ್ ಸಕ್ಸೆನಾ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

ಮೂರು ಬೋಗಿಗಳು ಜಖಂ
ಎಂಜಿನ್ ಮತ್ತು ಮೂರು ಬೋಗಿಗಳು ಹಳಿ ತಪ್ಪಿದ್ದರಿಂದ, ಎಂಜಿನ್‌ನ ಹಿಂಬದಿಯ ದ್ವಿತೀಯ ದರ್ಜೆ ಲಗ್ಗೇಜ್ ಕಮ್ ಬ್ರೇಕ್ ವ್ಯಾನ್, ದ್ವಿತೀಯ ದರ್ಜೆಯ ಜನರಲ್ ಕೋಚ್, ದ್ವಿತೀಯ ದರ್ಜೆಯ ಸ್ಲೀಪರ್ ಕೋಚ್ ಜಖಂಗೊಂಡವು.












Click it and Unblock the Notifications