ಬಸವರಾಜ ಹೊರಟ್ಟಿ ಸುಳ್ಳಿನ ಸರದಾರ: ಕುಬೇರಪ್ಪ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜೂನ್, 03: ಸೋಲಿಲ್ಲದ ಸರದಾರ ಎಂದು ಬೀಗುತ್ತಿರುವ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸುಳ್ಳಿನ ಸರದಾರ ಎಂದು ಶಿಕ್ಷಕರ ಸಂಘಟನೆಯಿಂದ ಪದವೀಧರರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಪ್ರೊ.ಆರ್.ಎಂ.ಕುಬೇರಪ್ಪ ಆರೋಪಿಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಸುಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸದೇ ಕೇವಲ ಮಾತಿನ ಮಲ್ಲರಾಗಿರುವ ಹೊರಟ್ಟಿ ಈ ಬಾರಿ ಚುನಾವಣೆಯಲ್ಲಿ ಸೋಲುವುದು ನಿಶ್ಚಿತ ಎಂದು ಹೇಳಿದರು.[36 ವರ್ಷ ಶಾಸಕರಾಗಿ ಹೊರಟ್ಟಿ ಶಿಕ್ಷಕರಿಗೆ ಏನು ಮಾಡಿದ್ದಾರೆ ]

hubballi

ಶೂನ್ಯ ಸಾಧನೆ ಮಾಡಿರುವ ಬಸವರಾಜ ಹೊರಟ್ಟಿ ಅವರಿಗೆ ನೈತಿಕವಾಗಿ ಶಿಕ್ಷಕರ ಮತ ಕೇಳುವ ಹಕ್ಕು ಇಲ್ಲ. ಈ ಬಾರಿಯ ಚುನಾವಣೆಯಲ್ಲಿ ಹೊರಟ್ಟಿ ಪಾಠ ಕಲಿಯಲಿದ್ದಾರೆ ಎಂದರು.['ಕರ್ನಾಟಕಕ್ಕೆ ಬಂದ ಪ್ರಧಾನಿಗೆ ಬರ ಪರಿಸ್ಥಿತಿ ಕಾಣಲಿಲ್ಲವೇ'?]

ಕುಬೇರಪ್ಪ ಅವರ ಪ್ರಣಾಳಿಕೆ:
ಇದೇ ವೇಳೆ ಕುಬೇರಪ್ಪ, ತಮ್ಮ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು. ಶಿಕ್ಷಕರ ಪ್ರತಿ ಸಮಸ್ಯೆಗಳನ್ನು ನಾನು ಅರಿತುಕೊಂಡಿದ್ದೇನೆ ಅವುಗಳನ್ನು ಬಗೆಹರಿಸಲು ಯತ್ನ ಮಾಡುತ್ತೇನೆ ಎಂದು ಹೇಳಿದರು.

ಪ್ರೌಢಶಾಲಾ ಶಿಕ್ಷಕರ ವೇತನ ತಾರತಮ್ಯ ಹೋರಾಟ, ಕಾಲ್ಪನಿಕ ವೇತನ ಬಡ್ತಿ, ಸುಪ್ರೀಂ ಕೋರ್ಟ್ ಆದೇಶ ಜಾರಿ ಸೇರಿದಂತೆ ಒಟ್ಟು 33 ಪ್ರಮುಖ ಅಂಶಗಳಿಗೆ ನನ್ನ ಆದ್ಯತೆ ಎಂದು ಹೇಳಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: 'Basavaraj Horatti will loose graduate and teacher constituency election' said by R M Kuberappa who is also one of the candidate of graduate and teacher constituency.
Please Wait while comments are loading...