ಧಾರವಾಡದಲ್ಲಿ ಮನೆ ಕುಸಿದು ಮೂವರ ದಾರುಣ ಸಾವು, ಇಬ್ಬರಿಗೆ ಗಾಯ
ಧಾರವಾಡ, ಮೇ 14: ಧಾರವಾಡದ ಕುಂದಗೋಳ ತಾಲೂಕಿನ ಹರಗುಪ್ಪಿ ಎಂಬಲ್ಲಿ ಕಟ್ಟಡವೊಂದು ಕುಸಿದ ಪರಿಣಾಮ ಮೂವರು ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಿಪ್ಪಿದ್ದು, ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಧಾರವಾಡದಲ್ಲಿ ಕಳೆದ ಮಾರ್ಚ್ 19 ರಂದು ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ 19 ಜನ ಮೃತರಾಗಿದ್ದರು.

ಸುಮಾರು ಒಂದು ವಾರಗಳ ಕಾಲ ಸತತವಾಗಿ ರಕ್ಷಣಾ ಕಾರ್ಯಾಚರಣೆ ಮಾಡಲಾಗಿತ್ತು. ನೂರಾರು ಜನರನ್ನು ರಕ್ಷಿಸಲಾಗಿತ್ತಾದರೂ ಕಟ್ಟಡದ ಅವಶೇಷದಡಿ ಸಿಲುಕಿದ ಹತ್ತೊಂಬತ್ತು ಜನ ಸಾವನ್ನಪ್ಪಿದ್ದರು. ಈ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣವೂ ಇದ್ದಿದ್ದರಿಂದ ಹೆಚ್ಚಿನ ಜನ ಆಗಮಿಸಿದ್ದರು. ಆದ್ದರಿಂದಲೇ ಸಾವಿನ ಸಂಖ್ಯೆ ಹೆಚ್ಚಾಯಿತು ಎನ್ನಲಾಗಿತ್ತು.












Click it and Unblock the Notifications