ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಗ್ಯಾಂಗ್ ರೇಪ್ : ಐವರು ಆರೋಪಿಗಳ ಬಂಧನ

|
Google Oneindia Kannada News

arrest
ಹುಬ್ಬಳ್ಳಿ, ಜೂನ್ 4 : ಹುಬ್ಬಳ್ಳಿಯಲ್ಲಿ ಮಹಿಳೆ ಮತ್ತು ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಟ್ಟೆ ಅಂಗಡಿಯಲ್ಲಿ ಸೇಲ್ಸ್ ಗರ್ಲ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅವಿವಾಹಿತ ಯುವತಿ ಮತ್ತು ವಿವಾಹಿತ ಮಹಿಳೆಯ ಮೇಲೆ ಸೋಮವಾರ ರಾತ್ರಿ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಹಳೇ ಹುಬ್ಬಳ್ಳಿ ಪೊಲೀಸರು ಬುಧವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಸೋಮವಾರ ರಾತ್ರಿ ರಾಯನಾಳ ಗ್ರಾಮದ ಹೊರವಲಯದಲ್ಲಿ ಅತ್ಯಾಚಾರ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. [ಹುಬ್ಬಳ್ಳಿಯಲ್ಲಿ ಗ್ಯಾಂಗ್ ರೇಪ್]

ಬಂಧಿತರನ್ನು ಜಹೀರ್ ಖಾನ್, ಫಾರೂಕ್ ದೊಡ್ಡಮನಿ, ಮುನ್ನಾ ಬಾಣಿ, ಗೌಸ್ ಮರಬಾ, ಆಶೀಸ್ ಶೇಖ್ ಎಂದು ಗುರುತಿಸಲಾಗಿದ್ದು ಎಲ್ಲರೂ ಹುಬ್ಬಳ್ಳಿಯವರಾಗಿದ್ದಾರೆ. ಪೊಲೀಸರು ಆರೋಪಿಗಳನ್ನು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಫಾರೂಕ್ ದೊಡ್ಡಮನಿ ಪ್ರಮುಖ ಆರೋಪಿ : ಸಾಮೂಹಿಕ ಅತ್ಯಾಚಾರಕ್ಕೊಳಗಾದವರಿಬ್ಬರೂ 24 ವರ್ಷದವರಾಗಿದ್ದು, ವಿವಾಹಿತ ಮಹಿಳೆ ವಿಚ್ಛೇದನ ಪಡೆದಿದ್ದು ಇಬ್ಬರು ಮಕ್ಕಳಿದ್ದಾರೆ. ಯುವತಿ ಅವಿವಾಹಿತಳಾಗಿದ್ದು ಮಹಿಳೆ ಜೊತೆ ವಾಸವಾಗಿದ್ದರು. ಸೋಮವಾರ ರಾತ್ರಿ ಹುಬ್ಬಳ್ಳಿ ಹೊರವಲಯದ ರಾಯನಾಳ ಗ್ರಾಮದಲ್ಲಿ ಇವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು.

ಹುಬ್ಬಳ್ಳಿಯ ಅಯೋಧ್ಯಾ ನಗರದ ನಿವಾಸಿ ಜಹೀರ್‌ ಖಾನ್ ಮತ್ತು ಟಿಪ್ಪು ನಗರದ ನಿವಾಸಿ ಫಾರೂಕ್ ದೊಡ್ಡಮನಿ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು, ಇವರು ಮಹಿಳೆಗೆ ಕರೆ ಮಾಡಿ ಬಂದು ಭೇಟಿಯಾಗುವಂತೆ ತಿಳಿಸಿದ್ದರು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದರು. ಇವರ ಬಂಧನದಿಂದಾಗಿ ಪ್ರಕರಣದ ಪ್ರಮುಖ ಆರೋಪಿ ಸೆರೆ ಸಿಕ್ಕಂತಾಗಿದೆ.

English summary
Old Hubli police arrested five accused in the case of young women gang-rape in Hubli Rayanala village on 2rd June. Vitim's recovering in KIMS hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X