ಧಾರವಾಡ : 4 ನೇ ಬಾರಿಗೆ ಗೆದ್ದು ಬೀಗಿದ ಪ್ರಹ್ಲಾದ್ ಜೋಶಿ
ಧಾರವಾಡ, ಮೇ 23 : ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ 4ನೇ ಬಾರಿಗೆ ಬಿಜೆಪಿಯ ಪ್ರಹ್ಲಾದ್ ಜೋಶಿ ಅವರು ಜಯಗಳಿಸಿದರು. 2004ರಿಂದ ಸತತ ನಾಲ್ಕು ಬಾರಿ ಅವರು ಜಯಗಳಿಸುತ್ತಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಹ್ಲಾದ್ ಜೋಶಿ ಬಿಜೆಪಿ ಅಭ್ಯರ್ಥಿಯಾಗಿದ್ದರು.
ಕಾಂಗ್ರೆಸ್-ಜೆಡಿಎಸ್‌ನಿಂದ ವಿನಯ್ ಕುಲಕರ್ಣಿ ಅವರು ಕಣದಲ್ಲಿದ್ದರು. ಪ್ರಹ್ಲಾದ್ ಜೋಶಿ ಅವರು 205072 ಮತಗಳ ಅಂತರದಿಂದ ಗೆಲುವು ದಾಖಲಿಸಿದರು.
ಕಾಂಗ್ರೆಸ್ ಪಕ್ಷ ನಾಮಪತ್ರ ಸಲ್ಲಿಕೆಗೆ ಎರಡು ದಿನ ಬಾಕಿ ಇರುವಾಗ ಅಭ್ಯರ್ಥಿಯನ್ನು ಅಂತಿಮಗೊಳಿಸಿತ್ತು. ಹಾಲಿ ಸಂಸದ ಪ್ರಹ್ಲಾದ್ ಜೋಶಿ ಅವರು ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿದ್ದವು.

2 ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಾಗಲೇ ಪ್ರಹ್ಲಾದ್ ಜೋಶಿ ಅವರು 10 ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡರು. ಬಳಿಕ ಅವರು ಮುನ್ನಡೆ ಪಡೆಯುತ್ತಲೇ ಸಾಗಿದರು. ಅಂತಿಮವಾಗಿ ಗೆಲುವಿನ ನಗೆ ಬೀರಿದರು.
ಪಡೆದ ಮತಗಳು : ಪ್ರಹ್ಲಾದ್ ಜೋಶಿ 684832 ಮತಗಳು, ವಿನಯ್ ಕುಲಕರ್ಣಿ 479765 ಮತಗಳು.











Click it and Unblock the Notifications