Dharwad Lok Sabha Election 2024 Results: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಜೋಶಿಗೆ 5ನೇ ಬಾರಿ ಗೆಲುವು
Dharwad Lok Sabha Election 2024: ಪೇಡಾನಗರಿ ಅಂತಲೇ ಪ್ರಖ್ಯಾತಿ ಪಡೆದಿರುವ ಧಾರವಾಡ ಲೋಕಸಭಾ ಚುನಾಚಣೆಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಈ ಬಗ್ಗೆ ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ.
ಈ ಕ್ಷೇತ್ರಕ್ಕೆ ಮೇ 07ರಂದು ನಡೆದ ಮತದಾನ ನಡೆದಿದ್ದು, ಶೇಕಡಾ 74.37ರಷ್ಟು ಮತದಾನ ಮಾಡಿದ್ದರು. ಇನ್ನು ಇಂದಿನ ಮತ ಎಣಿಕೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ವಿಜಯಮಾಲೆಯನ್ನು ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಮೂಲಕ ಅವರು ಸತತವಾಗಿ 5ನೇ ಬಾರಿ ಗೆಲುವು ಸಾಧಿಸಿದಂತಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿಯಿಂದ ಪ್ರಹ್ಲಾದ್ ಜೋಶಿ ಮತ್ತು ಕಾಂಗ್ರೆಸ್‌ನಿಂದ ವಿನೋದ್ ಅಸೂಟಿ ಸ್ಪರ್ಧಿಸಿದ್ದರು.
ಹೃದಯಾಘಾತದಿಂದ ಅಸುನೀಗಿದ ಬಿಜೆಪಿ ಕಟ್ಟಾಭಿಮಾನಿ: ಇನ್ನು ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ನಿರೀಕ್ಷಿತ ಬಹುಮತ ಸಿಗದ ಹಿನ್ನೆಲೆ ಹುಬ್ಬಳ್ಳಿಯ ವಿದ್ಯಾನಗರ ಶೆಟ್ಟರ್ ಲೇಔಟ್‌ನಲ್ಲಿ ಬಿಜೆಪಿ ಕಟ್ಟಾಭಿಮಾನಿಯೊಬ್ಬರು ತೀವ್ರ ಹೃದಯಾಘಾತದಿಂದ ಅಸುನೀಗಿದ್ದಾರೆ.
ಇವರು ಚುನಾವಣೆಯ ಫಲಿತಾಂಶವನ್ನು ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದಾಗ, ಎನ್‌ಡಿಎ ನೇತೃತ್ವದ ಬಿಜೆಪಿಗೆ ನಿರೀಕ್ಷಿತ ಬಹುಮತ ದೊರೆಯದಿದ್ದಾಗ ಘಾಸಿಗೊಂಡ ಇವರು ತೀವ್ರ ಹೃದಯಾಘಾತಕ್ಕೊಳಗಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕುಟುಂಬಸ್ಥರು ಕೆಎಲ್ಇ ಸುಚಿರಾಯು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪ್ರಾಣ ಬಿಟ್ಟಿರುವುದಾಗಿ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.
ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಅವರು ಬ್ರಾಹ್ಮಣ ಸಮುದಾಯದವರಾಗಿದ್ದು, ವಿನೋದ ಅಸೂಟಿ ಕುರುಬ ಕುಟುಂಬದವರಾಗಿದ್ದಾರೆ. ಆದರೂ ಕ್ಷೇತ್ರದಲ್ಲಿ ಜಾತಿ ಮೀರಿ ಪ್ರೀತಿ ತೋರಿದ ಉದಾಹರಣೆಗಳಿವೆ. 1951ರಿಂದ 1991ರವರೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಸತತ ಗೆಲುವು ದಾಖಲಿಸಿದ್ದು, 1996ರಿಂದ ಸತತ ಸೋಲನುಭವಿಸಿದ್ದು, 1996ರಿಂದ ಬಿಜೆಪಿ ವಿಜಯದ ಮಾಲೆಯನ್ನು ಹಾಕಿಕೊಳ್ಳುತ್ತಲೇ ಬಂದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಸಹಿತ 8 ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು ತಲಾ 4 ಕ್ಷೇತ್ರಗಳಲ್ಲಿದ್ದಾರೆ. 2013ರಿಂದ ಕಾಂಗ್ರೆಸ್‌ನಲ್ಲಿರುವ ವಿನೋದ ಅವರು, 2018ರಲ್ಲಿ ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಇದು ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಗಿದ್ದು, ಈ ವೇಳೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಸಾರ್ವತ್ರಿಕ ಚುನಾವಣೆಯಲ್ಲಿ 6,84,837 ಮತಗಳನ್ನು ಪಡೆಯುವ ಮೂಲಕ 2,05,072 ಮತಗಳ ಗೆಲುವಿನ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿಯೂ ಕೂಡ ಜೋಶಿ ಅವರು ಗೆಲುವು ಸಾಧಿಸಿದ್ದಾರೆ.












Click it and Unblock the Notifications