PM SHRI scheme: ಪಿಎಂಶ್ರೀ ಯೋಜನೆಗೆ ಧಾರವಾಡ ಜಿಲ್ಲೆಯ 4 ಶಾಲೆಗಳು ಆಯ್ಕೆ, ಇಲ್ಲಿದೆ ವಿವರ

ಹುಬ್ಬಳ್ಳಿ, ಆಗಸ್ಟ್‌, 22: ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇಂದು ಈ ಸರ್ಕಾರಿ ಶಾಲೆಗಳು ಸಹ ಎಲ್ಲ ಖಾಸಗಿ ಶಾಲೆಗಳ ಜೊತೆ ಗುಣಮಟ್ಟದಲ್ಲಿ ಸ್ಪರ್ಧೆ ಒಡ್ಡುತ್ತಿವೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆಧುನಿಕ ಕಲಿಕಾ ಸಾಮಗ್ರಿಗಳು, ಉತ್ತಮ ಮೂಲ ಸೌಕರ್ಯ ಒದಗಿಸುವತ್ತ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪಿಎಂಶ್ರೀ ಯೋಜನೆಗೆ ಧಾರವಾಡ ಜಿಲ್ಲೆಯ ನಾಲ್ಕು ಶಾಲೆಗಳು ಆಯ್ಕೆಯಾಗಿವೆ.

ಪಿಎಂ ಸ್ಕೂಲ್ಸ್‌ ಫಾರ್‌ ರೈಸಿಂಗ್‌ ಇಂಡಿಯಾ ಹೆಸರಿನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆಯ ಲಾಭ ಧಾರವಾಡ ಜಿಲ್ಲೆಗೂ ತಲುಪಲಿದೆ. ಹೀಗಾಗಿ ಜಿಲ್ಲೆಯ ನಾಲ್ಕು ಶಾಲೆಗಳು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಮಾದರಿಯಾಗಲಿವೆ. ದೇಶದಲ್ಲಿ14 ಸಾವಿರ ಶಾಲೆಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಲಾಗಿದ್ದು, ರಾಜ್ಯದಲ್ಲಿ129 ಶಾಲೆಗಳನ್ನು ಗುರುತಿಸಲಾಗಿದೆ.

4-schools-selected-for-pm-shri-scheme

ಈ ಪೈಕಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅಮರಗೋಳದ ಎಂಪಿಎಸ್‌ ಶಾಲೆ, ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಎಚ್‌ಪಿಎಸ್‌ ಶಾಲೆ, ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಎಂಪಿಎಸ್‌ ಶಾಲೆ, ಅಳ್ನಾವರದ ಎಚ್‌ಪಿಎಸ್‌ ನಂ.2 ಶಾಲೆಗಳು ಈ ಯೋಜನೆಗೆ ಆಯ್ಕೆಯಾಗಿವೆ.

ಜಿಲ್ಲೆಯಿಂದ ಪಿಎಂಶ್ರೀ ಯೋಜನೆಯ ಆಯ್ಕೆಗೆ 25 ಶಾಲೆಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಮೊದಲ ಹಂತದಲ್ಲಿ ನಾಲ್ಕು ಶಾಲೆಗಳನ್ನು ಗುರುತಿಸಿದ್ದು, ಈ ಶಾಲೆಗಳಲ್ಲಿ ಮೂಲಸೌಕರ್ಯ, ಗುಣಮಟ್ಟದ ಬೋಧನೆ, ಕಲಿಕಾ ಉಪಕರಣಗಳು ಸೇರಿದಂತೆ ಮಾದರಿಯಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಪಿಎಂಶ್ರೀ ಯೋಜನೆಯ ಮೂಲಕ ಎನ್‌ಇಪಿ ಅಂಶಗಳ ಅನ್ವಯ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತದೆ. ಆಯ್ಕೆಯಾಗಿರುವ ಶಾಲೆಗಳಿಗೆ ಸೌರಫಲಕಗಳು, ಎಲ್‌ಇಡಿ ದೀಪಗಳು, ಉದ್ಯಾನ, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್‌ ಮುಕ್ತ, ಜಲ ಸಂರಕ್ಷಣೆ, ಮಳೆ ನೀರು ಕೊಯ್ಲು ಸೌಲಭ್ಯ ದೊರೆಯಲಿದೆ.

ಜೊತೆಗೆ ಬೋಧನಾ ವಿಧಾನವು ಆಟ, ಆವಿಷ್ಕಾರ, ಚರ್ಚೆ ಆಧಾರಿತ, ವಿಜ್ಞಾನ ಮತ್ತು ಗಣಿತ ಕಿಟ್‌ ವಿತರಣೆ, ಸ್ಮಾರ್ಟ್‌ ತರಗತಿಗಳು, ಡಿಜಿಟಲ್‌ ಗ್ರಂಥಾಲಯ, ಡಿಜಿಟಲ್‌ ಬೋಧನಾ ಕ್ರಮ, ಮೂಲಸೌಕರ್ಯ ಬಲಪಡಿಸುವುದು ಸೇರಿದಂತೆ ಇನ್ನಿತರ ಸೌಲಭ್ಯ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.

ಒಟ್ಟಿನಲ್ಲಿ ಇಲ್ಲಿ ಕೈಗೊಳ್ಳುವ ಅಭಿವೃದ್ಧಿ ಇತರ ಶಾಲೆಗಳಿಗೂ ಮಾದರಿಯಾಗಬೇಕು ಎಂಬ ವಿಚಾರದ ಹಿನ್ನೆಲೆಯಲ್ಲಿಇಲ್ಲಿ ಎಲ್‌ಕೆಜಿ ತರಗತಿಗಳು ಆರಂಭಗೊಳ್ಳಲಿದ್ದು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸೌಲಭ್ಯಗಳಿರಲಿವೆ. ಜಿಲ್ಲೆಯಲ್ಲಿ ಗುರುತಿಸಲಾಗಿರುವ ನಾಲ್ಕು ಸರ್ಕಾರಿ ಶಾಲೆಗಳ ಮರು ಅಭಿವೃದ್ಧಿಗೆ ಮೊದಲ ಹಂತದಲ್ಲಿಅಂದಾಜು ತಲಾ 53 ಲಕ್ಷ ರೂಪಾಯಿ ಅನುದಾನ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಅನುದಾನ ದೊರೆಯಲಿದೆ. ಆಯ್ಕೆಯಾಗುವುದಕ್ಕೂ ಮೊದಲೇ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆಗಳನ್ನು ಪಿಎಂಶ್ರೀ ಯೋಜನೆಗೆ ನೀಡಲಾಗಿದೆ. ಈ ಮೂಲಕ ಶಾಲೆಗಳ ಅಭಿವೃದ್ಧಿಯಾಗಲಿದೆ. ಆಯ್ಕೆಯಾಗಿರುವ ಶಾಲೆಗಳು ಪ್ರಸ್ತುತ ಜನರ ಸಹಭಾಗಿತ್ವದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಈ ಬಗ್ಗೆ ಮುಖ್ಯಶಿಕ್ಷಕರು ಗೂಗಲ್‌ ಟ್ರ್ಯಾಕ್‌ನಲ್ಲಿ ಲೀಡ್‌ ಕೂಡ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+