ಧಾರವಾಡ: ಇ-ಮೇಲ್ ಮೂಲಕ ತಲಾಖ್ ನೀಡಿದ ಪತಿ ವಿರುದ್ಧ ಕ್ರಿಮಿನಲ್ ಕೇಸ್
ಧಾರವಾಡ, ಅಕ್ಟೋಬರ್ 8: ಸುಪ್ರಿಂ ಕೋರ್ಟ್ ತ್ರಿವಳಿ ತಲಾಖ್ ನಿರ್ಭಂಧಿಸಿ ತೀರ್ಪು ನೀಡಿದ ಬಳಿಕ ಧಾರವಾಡದಲ್ಲೊಂದು ಅಪರೂಪದ ಘಟನೆ ವರದಿಯಾಗಿದೆ. ಅಮೆರಿಕಾದಲ್ಲಿ ಇದ್ದುಕೊಂಡು ಧಾರವಾಡದಲ್ಲಿದ್ದ ತನ್ನ ಪತ್ನಿಗೆ ಇ-ಮೇಲ್ ಮೂಲಕ ತಲಾಖ್ ನೀಡಿ ಪತಿರಾಯರೊಬ್ಬರು ಪಜೀತಿಗೆ ಸಿಲುಕಿದ್ದಾರೆ.
ಮೂಲತ ಧಾರವಾಡದ ಆನಂದ ನಗರ ನಿವಾಸಿಯಾದ ಗುಲ್ಲಾರ್ ದಿಡಿಗುರು ತಮ್ಮ ಸಂಬಂಧಿ ಮಗಳಾದ ಮುಪ್ತಿನ ತಾಜ್ ಎಂಬ ಯುವತಿಯ ಜೊತೆಯಲ್ಲಿ 2010 ರಲ್ಲಿ ವಿವಾಹವಾಗಿದ್ದರು . ಆದರೆ ಎರಡು ವರ್ಷ ಜತೆಯಲ್ಲಿ ಸಂಸಾರ ಮಾಡಿದ ಪತಿರಾಯ ಕೆಲಸದ ನಿಮಿತ್ತ ದೂರದ ಅಮೇರಿಕಕ್ಕೆ ಹೋಗಿದ್ದರು.

ಇದೀಗ ಕಳೆದ ಒಂದು ತಿಂಗಳ ಹಿಂದೆ ಪತ್ನಿ ಮುಪ್ತಿನಗೆ ಇ-ಮೇಲ್ ಮೂಲಕ ತ್ರಿವಳಿ ತಲಾಕ್ ನೀಡಿದ್ದಾರೆ. ಪತಿ ಹೀಗೆ ಇ-ಮೇಲ್ ಮೂಲಕ ತಲಾಕ್ ನೀಡಿದನ್ನು ಪ್ರಶ್ನೆ ಮಾಡಿದ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮುಪ್ತಿನ ತಾಜ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಧಾರಾವಾಡ ಜಿಲ್ಲಾ ಜೆ.ಎಮ್.ಎಫ್.ಸಿ ಕೋರ್ಟ್ ಅಮೆರಿಕಾದಲ್ಲಿರುವ ಪತಿಯ ವಿರುದ್ಧ ಸ್ಥಳಿಯ ಪೊಲೀಸರಿಗೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದೆ.
ಅಲ್ಲದೆ ಪತಿರಾಯನಿಗೆ ಸಮನ್ಸ್ ಕೂಡಾ ಜಾರಿ ಮಾಡಿ ಆದೇಶ ಹೊರಡಿಸಿದೆ. ಒಟ್ಟಿನಲ್ಲಿ ಭಾರತದಲ್ಲಿ ತಲಾಕ್ ಬ್ಯಾನ್ ಅಗಿದ್ದು ಗೊತ್ತು ಇಲ್ಲದೆ ಅಥವಾ ಗೊತಿದ್ದೂ ಇಮೇಲ್ ಮೂಲಕ ತಲಾಖ್ ನೀಡಿದ ಅಮೆರಿಕಾದಲ್ಲಿರುವ ಪತಿಗೆ ನ್ಯಾಯಾಲಯ ಅಚ್ಚರಿಯ ತೀರ್ಪು ನೀಡಿದೆ.












Click it and Unblock the Notifications