ಧಾರವಾಡ-ಅಂಬೇವಾಡಿ ರೈಲು ವೇಳಾಪಟ್ಟಿ ಬದಲಾವಣೆ

ಧಾರವಾಡ, ಡಿಸೆಂಬರ್ 11 : ಧಾರವಾಡ-ಅಂಬೇವಾಡಿ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ನವೆಂಬರ್‌ನಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗಿತ್ತು, ವೇಳಾಪಟ್ಟಿ ಬದಲಾಯಿಸುವಂತೆ ಒತ್ತಾಯ ಕೇಳಿ ಬಂದಿತ್ತು.

ನೈಋತ್ಯ ರೈಲ್ವೆ ಧಾರವಾಡ-ಅಂಬೇವಾಡಿ ನಡುವಿನ ರೈಲು ಮಾರ್ಗದ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಮಾಜಿ ಸಚಿವ ಆರ್. ವಿ. ದೇಶಪಾಂಡೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ವೇಳಾಪಟ್ಟಿ ಬದಲಾವಣೆ ಮಾಡುವಂತೆ ಪತ್ರ ಬರೆದು ಒತ್ತಾಯಿಸಿದ್ದರು.

ಜನರ ಅನುಕೂಲತೆಗಾಗಿ ವೇಳಾಪಟ್ಟಿಯನ್ನು ಬದಲಾವಣೆ ಮಾಡುವಂತೆ ಜನರು ಸಹ ಒತ್ತಾಯಿಸಿದ್ದರು. ಈಗ ನೈಋತ್ಯ ರೈಲ್ವೆ ವೇಳಾಪಟ್ಟಿ ಪರಿಷ್ಕರಣೆ ಮಾಡಿದ್ದು, ನೂತನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಜನರ ಒತ್ತಾಯಕ್ಕೆ ಮಣಿದಿದೆ.

Dharwad Ambewadi Passenger Train Schedule Changed

ಪ್ರತಿದಿನ ಬೆಳಗ್ಗೆ 11.30ಕ್ಕೆ ಧಾರವಾಡದಿಂದ ಹೊರಡುತ್ತಿದ್ದ ರೈಲು ಮಧ್ಯಾಹ್ನ 1 ಗಂಟೆಗೆ ಅಂಬೇವಾಡಿಗೆ ತಲುಪುತ್ತಿತ್ತು. ಮಧ್ಯಾಹ್ನ 3 ಗಂಟೆಗೆ ಅಂಬೇವಾಡಿಯಿಂದ ಹೊರಟು ಸಂಜೆ 4.40ಕ್ಕೆ ಧಾರವಾಡಕ್ಕೆ ತಲುಪುತ್ತಿತ್ತು.

ಅಂಬೇವಾಡಿ-ಧಾರವಾಡ ರೈಲು ಮಾರ್ಗ 26 ಕಿ. ಮೀ. ಇದೆ. ಮೊದಲು ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸುತ್ತಿತ್ತು. 1995ರಲ್ಲಿ ಗೇಜ್ ಪರಿವರ್ತನೆ ಆದ ಬಳಿಕ ರೈಲು ಸಂಚಾರ ಸ್ಥಗಿತವಾಗಿತ್ತು. ಈಗ ಪ್ಯಾಸೆಂಜರ್ ರೈಲು ಪುನಃ ಸಂಚಾರ ನಡೆಸುತ್ತಿದೆ.

Dharwad Ambewadi Passenger Train Schedule Changed

ಧಾರವಾಡ-ಅಂಬೇವಾಡಿ ರೈಲು ಮಾರ್ಗದಲ್ಲಿ ಕ್ಯಾರ್ ಕೊಪ್ಪ, ಮಗುದ, ಕಂಬಾರಗಣವಿ ರೈಲ್ವೆ ನಿಲ್ದಾಣಗಳಿವೆ. ಈ ರೈಲ್ವೆ ಮಾರ್ಗವನ್ನು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+