ವಿಧಾನ ಪರಿಷತ್ ಚುನಾವಣೆ, ಧಾರವಾಡದಲ್ಲಿ ಸಿದ್ಧತೆ ಪೂರ್ಣ

ಹುಬ್ಬಳ್ಳಿ, ಡಿಸೆಂಬರ್, 26: ಸ್ಥಳೀಯ ಸಂಸ್ಥೆಗಳಿಂದ ನಡೆಯಲಿರುವ ವಿಧಾನ ಪರಿಷತ್ ಚುನಾವಣೆ ಎದುರಿಸಲು ಧಾರವಾಡ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ತಹಶೀಲ್ದಾರ್ ಎಚ್.ಡಿ.ನಾಗಾವಿ ಉಸ್ತುವಾರಿಯಲ್ಲಿ ಮತಪೆಟ್ಟಿಗೆಗಳನ್ನು ಮತದಾನ ಕೇಂದ್ರಕ್ಕೆ ಶನಿವಾರ ಒಯ್ಯಲಾಯಿತು.

ಚುನಾವಣೆಯ ಬಹಿರಂಗ ಪ್ರಚಾರವು ನಿನ್ನೆಯೇ ಮುಕ್ತಾಯಗೊಂಡಿದೆ. ದ್ವಿಸದಸ್ಯತ್ವ ಕ್ಷೇತ್ರವಾದ ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಿಂದ ಶ್ರೀನಿವಾಸ ಮಾನೆ, ಬಿಜೆಪಿಯಿಂದ ಪ್ರದೀಪ್ ಶೆಟ್ಟರ (ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಸಹೋದರ), ಜೆಡಿಎಸ್ ನಿಂದ ವಾಗೀಶ ಪ್ರಸಾದ ಸೇರಿದಂತೆ ಒಟ್ಟು 10 ಜನ ಸ್ಪರ್ಧೆಯಲ್ಲಿದ್ದಾರೆ.[ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]

legislative council

ಮೂರು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಸದಸ್ಯರು ಮತ ಚಲಾವಣೆ ಮಾಡಲಿದ್ದಾರೆ. 64 ಅತೀಸೂಕ್ಷ್ಮ, 45 ಸೂಕ್ಷ್ಮ ಹಾಗೂ 41 ಸಾಮಾನ್ಯ ಮತಗಟ್ಟೆ ಸೇರಿ ಧಾರವಾಡ ಜಿಲ್ಲೆಯಲ್ಲಿ 150, 47 ಅತೀಸೂಕ್ಷ್ಮ, 74 ಸೂಕ್ಷ್ಮ ಹಾಗೂ 110 ಸಾಮಾನ್ಯ ಸೇರಿ ಹಾವೇರಿ 231, 43 ಅತೀಸೂಕ್ಷ್ಮ, 39 ಸೂಕ್ಷ್ಮ ಹಾಗೂ 50 ಸಾಮಾನ್ಯ ಸೇರಿ ಗದಗ ಜಿಲ್ಲೆಯಲ್ಲಿ 131 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಒಟ್ಟು 7993 ಮತದಾರರಲ್ಲಿ 3915 ಮಹಿಳೆಯರು ಮತ್ತು 4078 ಪುರುಷ ಮತದಾರರಿದ್ದಾರೆ. ಹಾವೇರಿ ಜಿಲ್ಲೆಯ 3591, ಗದಗ ಜಿಲ್ಲೆಯ 2102 ಹಾಗೂ ಧಾರವಾಡ ಜಿಲ್ಲೆಯ 2300 ಮತದಾರರಿದ್ದಾರೆ.[ಡಿ. 30ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ]

ಭಾನುವಾರ ಡಿಸೆಂಬರ್ 27 ರಂದು ಬೆಳಗ್ಗೆ 8 ಕ್ಕೆ ಆರಂಭವಾಗುವ ಮತದಾನ ಸಂಜೆ 4 ಗಂಟೆಯವರೆಗೂ ನಡೆಯಲಿದೆ. ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಲಾಗಿದೆ. ಮೂರು ಜಿಲ್ಲೆಗಳಿಗೆ ಸೇರಿಕೊಂಡು 1500 ಕ್ಕೂ ಹೆಚ್ಚು ಪೊಲೀಸರನ್ನು ಜಿಲ್ಲಾಡಳಿತ ನಿಯೋಜಿಸಿದೆ. ಡಿಸೆಂಬರ್ 30 ರಂದು ರಾಜ್ಯಾದ್ಯಂತ ಮತ ಎಣಿಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+