ಸಿ.ಎಂ.ಇಬ್ರಾಹಿಂ ಒಬ್ಬ ವಿದೂಷಕನಿದ್ದಂತೆ: ಪ್ರಲ್ಹಾದ ಜೋಶಿ

ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ನ ವಿದೂಷಕ, ಸರ್ಕಸ್‌ನಲ್ಲಿ ಇರುವ ಜೋಕರ್ ರೀತಿ ಇಬ್ರಾಹಿಂ ವರ್ತಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.

ಧಾರವಾಡ, ಜನವರಿ 05: ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ನ ವಿದೂಷಕ, ಸರ್ಕಸ್‌ನಲ್ಲಿ ಇರುವ ಜೋಕರ್ ರೀತಿ ಇಬ್ರಾಹಿಂ ವರ್ತಿಸುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಏನಾದರೂ ಸಿಗುತ್ತದೆ ಅಂತಾ ಇಬ್ರಾಹಿಂ ವಿದೂಷಕನಂತೆ ಮಾತನಾಡುತ್ತಾರೆ, ಸರ್ಕಸ್‌ನಲ್ಲಿ ಜೋಕರ್ ಏನಾದರೂ ಮಾಡಿದಾಗ ಎಂಜಾಯ್ ಮಾಡಿದಂತೆ ಮಾಡಬೇಕಷ್ಟೇ ಎಂದು ಹೇಳಿದರು.

ಇನ್ನು ಇದೇ ಸಂದರ್ಭದಲ್ಲಿ ಪ್ರಹ್ಲಾದ ಜೋಶಿ ಸಿಎಂ, ಶೆಟ್ಟರ್ ಗವರ್ನರ್ ಆಗ್ತಾರೆಂಬ ವದಂತಿ ವಿಚಾರವಾಗಿ ಮಾತನಾಡಿದ ಜೋಶಿ, ಪ್ರತಿಕ್ರಿಯೆ ಕೊಡುವುದಕ್ಕೂ ಉಪಯೋಗ ಇಲ್ಲದ ವಂದತಿ ಹಬ್ಬಿಸುತ್ತಿದ್ದಾರೆ. ಸಿಎಂ ಹುದ್ದೆ ಈಗ ಖಾಲಿ ಇಲ್ಲ ಎಂದರು.

CM Ibrahim Like a Baffoon: Pralhad Joshi

ನಂತರ ಇರಾನ್-ಅಮೇರಿಕಾ ಯುದ್ಧದಿಂದ ಭಾರತಕ್ಕೆ ತೈಲದ ಸಮಸ್ಯೆ ಆಗಲಿದೆ ಎಂದ ಅವರು, ಇದಕ್ಕೆ ಈಗಾಗಲೇ ಪರ್ಯಾಯ ವ್ಯವಸ್ಥೆಗಳನ್ನು ಭಾರತ ಮಾಡಿಕೊಂಡಿದೆ ಎಂದರು.

ಇದೇ ವೇಳೆ ಧಾರವಾಡದ ವಕೀಲ ಕೆ.ಎಲ್.ಪಾಟೀಲ ಹಾಗೂ ಕ್ರಿಶ್ಚಿಯನ್ ಮುಖಂಡ ಕ್ಲಿಸ್ಟೊಫರ್ ಮನೆಗೆ ಭೇಟಿ ಮಾಡಿದ ಜೋಶಿ, ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿದರು.

ದೇಶದಲ್ಲಿ ಇತ್ತೀಚೆಗೆ ಪೌರತ್ವ ಕಾನೂನು ತಿದ್ದುಪಡಿ ಮಾಡಿದ್ದೇವೆ ಎಂದ ಪ್ರಹ್ಲಾದ ಜೋಶಿ, ಅದಾದ ಬಳಿಕ ಧಾರ್ಮಿಕ ಆಧಾರದಲ್ಲಿ ಜನರನ್ನು ಒಡೆಯುವ ಷಡ್ಯಂತ್ರವನ್ನು ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಮಾಡುತ್ತಿವೆ ಎಂದು ಆರೋಪಿಸಿದರು.

CM Ibrahim Like a Baffoon: Pralhad Joshi

ಈ ಕಾನೂನು ಪೌರತ್ವ ಕಿತ್ತುಕೊಳ್ಳುವುದು ಅಲ್ಲ, ಪೌರತ್ವ ಕೊಡುವಂತಹ ಕಾನೂನು ಇದಾಗಿದೆ ಎಂದ ಜೋಶಿ, ಆದರೂ ಕಾಂಗ್ರೆಸ್ ಧರ್ಮ ಒಡೆಯುವ ಪ್ರಯತ್ನ ಮಾಡುತ್ತಿದೆ, ಹೀಗಾಗಿ ೩ ಕೋಟಿ ಮನೆಗಳನ್ನು ಭೇಟಿಯಾಗಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಲಿದ್ದೇವೆ ಎಂದು ಹೇಳಿದರು.

ಕೊಪ್ಪಳದಲ್ಲಿರುವ ಬಾಂಗ್ಲಾ ನಿರಾಶ್ರಿತರಿಗೆ ಪೌರತ್ವ ಕೊಡುವ ಬಗ್ಗೆ ಸಂಗಣ್ಣ ಕರಡಿ ಪತ್ರ ವಿಚಾರವಾಗಿ ಮಾತನಾಡಿ, ಅವರಿಗೆ ಪೌರತ್ವ ಸಿಕ್ಕೇ ಸಿಗುತ್ತದೆ, ಯಾರೂ ಧಾರ್ಮಿಕ ಅತ್ಯಾಚಾರಕ್ಕೆ ಒಳಗಾಗಿ ದೇಶಕ್ಕೆ ಬಂದಿದ್ದಾರೆ ಅವರಿಗೆ ಪೌರತ್ವ ಸಿಗುತ್ತದೆ ಎಂದರು.

ಮಹಾತ್ಮ ಗಾಂಧಿಯೇ ಪಾಕ್‌ನಲ್ಲಿರುವವರಿಗೆ ತೊಂದರೆ ಆದರೆ ಅದರ ಜವಾಬ್ದಾರಿ ಭಾರತ ಹೊರಬೇಕು ಅಂತಾ ಹೇಳಿದ್ದರು, ಆದರೆ ಈಗ ಕಾಂಗ್ರೆಸ್ ಪೌರತ್ವದ ವಿಷಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಇನ್ನು ಸೋಮಶೇಖರ ರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿದ ಸಚಿವ ಪ್ರಹ್ಲಾದ ಜೋಶಿ, ಸೋಮಶೇಖರ ರೆಡ್ಡಿ ಆ ರೀತಿ ಹೇಳಬಾರದಿತ್ತು, ಅವರಿಗೆ ಏನು ಹೇಳಬೇಕಿತ್ತೋ ಅದನ್ನು ಪಕ್ಷದಿಂದ ಹೇಳಲಾಗುವುದು, ಆದರೆ ಬಿಜೆಪಿ ನಿಲುವು ಪೌರತ್ವ ಕೊಡುವಂತಹುದು ಆಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+