ನಮೋ ಸಮಾವೇಶಕ್ಕಾಗಿ ಹುಬ್ಬಳ್ಳಿಯಲ್ಲಿ ಬೈಕ್ ಜಾಥಾ
ಧಾರವಾಡ,
ಫೆ.26 : ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶಕ್ಕಾಗಿ ಬಿಜೆಪಿ ಕಾರ್ಯಕರ್ತರು ಸಜ್ಜಾಗುತ್ತಿದ್ದು, ಮಂಗಳವಾರ ಬೈಕ್ ಜಾಥಾ ನಡೆಸುವ ಮೂಲಕ ಸಮಾವಶಕ್ಕೆ ಜನರನ್ನು ಆಹ್ವಾನಿಸಿದರು. ಫೆ.28ರ ಶುಕ್ರವಾರ ನರೇಂದ್ರ ಮೋದಿ ಸಮಾವೇಶ ನಡೆಯಲಿದೆ. id="toptextpromo"> id='are-slot-1' class='oiad oi-axt oiadv'>ಬಿಜೆಪಿ
ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಹುಬ್ಬಳ್ಳಿಯಲ್ಲಿ ಫೆ.28ರಂದು ನಡೆಯುವ ಭಾರತ ಗೆಲ್ಲಿಸಿ ಸಮಾವೇಶದ ಕುರಿತು ಪ್ರಚಾರ ನಡೆಸುವ ಜೊತೆಗೆ ಚುನಾವಣಾ ಪ್ರಚಾರಕ್ಕೂ ಜಿಲ್ಲಾ ಬಿಜೆಪಿ ಘಟಕ ಚಾಲನೆ ನೀಡಿದೆ. ಚಿತ್ರಗಳಲ್ಲಿ ನೋಡಿ ಬೈಕ್ ಜಾಥಾ [ಹುಬ್ಬಳ್ಳಿಯಲ್ಲಿ ನಮೋ ಜಪ] id='are-slot-2' class='oiad oi-axt oiadv'>
ಸಮಾವೇಶದ ಪ್ರಚಾರಕ್ಕೆ ಬೈಕ್ ಜಾಥಾ
ಫೆ.28ರಂದು ನಡೆಯುವ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಜನರನ್ನು ಆಹ್ವಾನಿಸಲು ಬಿಜೆಪಿ ಕಾರ್ಯಕರ್ತರು ಬೈಕ್ ಜಾಥಾ ಹಮ್ಮಿಕೊಂಡಿದ್ದರು.

ಪ್ರಹ್ಲಾದ್ ಜೋಶಿ ಚಾಲನೆ
ಬೈಕ್ ಜಾಥಾಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯನ ನವನಗರದಲ್ಲಿ ಚಾಲನೆ ನೀಡಿದರು. ಹಲವಾರು ಬಿಜೆಪಿ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಫೆ.28ಕ್ಕೆ ಸಮಾವೇಶ
ಹುಬ್ಬಳ್ಳಿಯ ಕುಸುಗಲ್ ರಸ್ತೆಯಲ್ಲಿರುವ ಆಕ್ಸ್ ಫರ್ಡ್ ಕಾಲೇಜ್ ಪಕ್ಕದ ಮೈದಾನದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಫೆ.28ರ ಶುಕ್ರವಾರ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

ಎರಡು ಸಮಾವೇಶ
ಫೆ.28ರಂದು ನರೇಂದ್ರ ಮೋದಿ ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಸಮಾವೇಶ ನಡೆಯಲಿದೆ.

ಬಿಜೆಪಿ ಭರದ ಸಿದ್ಧತೆ
ಎರಡು ಸಮಾವೇಶಗಳ ಯಶಸ್ಸಿಗಾಗಿ ಬಿಜೆಪಿ ಭರದ ಸಿದ್ಧತೆ ಆರಂಭಿಸಿದೆ. ಈಗಾಗಲೇ ಬೈಕ್ ಜಾಥಾ, ಆಟೋಗಳ ಜಾಥಾ ನಡೆಸುವ ಮೂಲಕ ಸಮಾವೇಶಕ್ಕೆ ಜನರನ್ನು ಆಹ್ವಾನಿಸುತ್ತಿದೆ. ಹುಬ್ಬಳ್ಳಿ ಸಮಾವೇಶದಲ್ಲಿ ಸುಮಾರು 3 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ.












Click it and Unblock the Notifications