ಹುಬ್ಬಳ್ಳಿ-ಚೆನ್ನೈ ನಡುವೆ ವಿಶೇಷ ರೈಲು ಸೇವೆ
ಹುಬ್ಬಳ್ಳಿ, ಏ. 2 : ಹುಬ್ಬಳ್ಳಿ-ಚೆನ್ನೈ ನಡುವೆ ವಾರಕ್ಕೆರಡು ಬಾರಿ ಸಂಚಾರ ನಡೆಸುವ ವಿಶೇಷ ರೈಲು ಸೇವೆಯನ್ನು ಆರಂಭಿಸಲು ನೈಋತ್ಯ ರೇಲ್ವೆ ವಲಯ ನಿರ್ಧರಿಸಿದೆ. ಏ.6ರಿಂದ ಈ ಸೇವೆ ಆರಂಭವಾಗಲಿದ್ದು, ಮೇ ತಿಂಗಳ ತನಕ ಸಂಚಾರ ನಡೆಸಲಿದೆ.
ಹುಬ್ಬಳ್ಳಿಯಿಂದ ಸೋಮವಾರ, ಬುಧವಾರ ಹೊರಡುವ ರೈಲು, ಮಂಗಳವಾರ ಮತ್ತು ಗುರುವಾರ ಚೆನ್ನೈನಿಂದ ವಾಪಸ್ ಆಗಲಿದೆ. ಎರಡೂ ಮಾರ್ಗದಲ್ಲಿ ಒಟ್ಟು 16 ಟ್ರಿಪ್‌ಗಳಲ್ಲಿ ಈ ರೈಲು ಸಂಚಾರ ನಡೆಸಲಿದೆ. [ಹುಬ್ಬಳ್ಳಿ-ಬೆಂಗಳೂರು ಏ.12ರಿಂದ ವಿಮಾನ ಸೇವೆ]

ವೇಳಾಪಟ್ಟಿ : ಹುಬ್ಬಳ್ಳಿಯಿಂದ ಸೋಮವಾರ ಮತ್ತು ಬುಧವಾರ ರಾತ್ರಿ 8.20ಕ್ಕೆ ಹೊರಡುವ ರೈಲು ಮರುದಿನ ಬೆಳಗ್ಗೆ 11 ಗಂಟೆಗೆ ಚೆನ್ನೈ ತಲುಪಲಿದೆ. ಏ.6ರಿಂದ ಮೇ 27ರ ತನಕ ಈ ರೈಲು ಸಂಚಾರ ನಡೆಸಲಿದೆ.[ಅಬ್ಬಬ್ಬಾ.. ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಇದೆಂಥಾ ಮೋಸ]
ಚೆನ್ನೈನಿಂದ ಮಂಗಳವಾರ ಮತ್ತು ಗುರುವಾರ ಮಧ್ಯಾಹ್ನ 1.15ಕ್ಕೆ ಹೊರಡುವ ರೈಲು ಬೆಳಗ್ಗೆ 5 ಗಂಟೆಗೆ ಹುಬ್ಬಳ್ಳಿ ನಿಲ್ದಾಣವನ್ನು ತಲುಪಲಿದೆ. ಈ ವಿಶೇಷ ರೈಲು ಏ.7ರಿಂದ ಮೇ.28ರ ತನಕ ಸಂಚಾರ ನಡೆಸಲಿದೆ.
ಎಲ್ಲೆಲ್ಲಿ ನಿಲುಗಡೆ : ಈ ವಿಶೇಷ ಎಕ್ಸ್‌ಪ್ರೆಸ್ ರೈಲು ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್, ಕಡಪ, ರಾಜಂಪೇಟ್ ಮುಂತಾದ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.












Click it and Unblock the Notifications