ಬೆಣ್ಣೆ ನಗರಿಯಲ್ಲಿ ದೋಸೆಯಲ್ಲಿ ಮೂಡಿದ ಮತದಾನ ಜಾಗೃತಿ
ದಾವಣಗೆರೆ, ಏಪ್ರಿಲ್ 28: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮೇ 7ರ ಮಂಗಳವಾರ ಮತದಾನ ನಡೆಯುತ್ತಿದೆ. ದಾವಣಗೆರೆ ಬೆಣ್ಣೆ ನಗರಿ ಎಂದು ಹೆಸರು ಪಡೆದಿದೆ. ಬೆಣ್ಣೆ ದೋಸೆಗೆ ಬ್ರಾಂಡ್ ಆಗಿದೆ. ಆದ್ದರಿಂದ ದೋಸೆ ಕಾವಲಿಯಲ್ಲಿ ಮತದಾನ ಜಾಗೃತಿ ಮೂಡಿಸಲಾಗಿದೆ.
ದೋಸೆ ಕಾವಲಿ ಮೇಲೆ ದೋಸೆಯ ಹಿಟ್ಟನ್ನು ಬಳಸಿ 'ನಮ್ಮ ಮತ, ನನ್ನ ಹಕ್ಕು' 'ತಪ್ಪದೇ ಮೇ 7ರಂದು ಮತದಾನ ಮಾಡಿ' ಎಂಬ ಘೋಷಣೆಯನ್ನು ದೋಸೆಯಲ್ಲಿ ಮೂಡಿಸಿ ದಾವಣಗೆರೆಯಲ್ಲಿ ಮತದಾನ ಜಾಗೃತಿ ಮೂಡಿಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸ್ವೀಪ್ ಸಮಿತಿಯಿಂದ ಏರ್ಪಡಿಸಲಾದ ದೋಸೆಯ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ವೆಂಕಟೇಶ್ ಎಂ. ವಿ. 'ನನ್ನ ಮತ, ನನ್ನ ಹಕ್ಕು' ಮತ್ತು ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ. ಇಟ್ನಾಳ್ 'ಮೈ ವೋಟ್, ಮೈ ವಾಯ್ಸ್ ಮೇ 7' ಎಂದು ದೋಸೆ ಹಿಟ್ಟಿನಲ್ಲಿ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದರು.
ಡಾ. ವೆಂಕಟೇಶ್ ಎಂ. ವಿ. ಮಾತನಾಡಿ, "ಅಕ್ಷರ ದೋಸೋತ್ಸವದ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನವಾಗಬೇಕೆಂಬ ಗುರಿ ನಮ್ಮದಾಗಿದೆ" ಎಂದರು.
ಮತದಾರರ ವಿವರಗಳು: ದಾವಣಗೆರೆ ಲೋಕಸಭಾ ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೂ ಕ್ರಮಸಂಖ್ಯೆ ಹಾಗೂ ಪಕ್ಷವಾರು ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ. ಬಿಜೆಪಿಯಿಂದ ಗಾಯಿತ್ರಿ ಸಿದ್ದೇಶ್ವರ, ಕಾಂಗ್ರೆಸ್‌ನ ಡಾ. ಪ್ರಭಾ ಮಲ್ಲಿಕಾರ್ಜುನ್ ಪ್ರಮುಖ ಅಭ್ಯರ್ಥಿಗಳು. ಮೇ 7ರಂದು ಮತದಾನ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
ದಾವಣಗೆರೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಅಧಿಕವಾಗಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಅಂತಿಮ ಮತದಾರರ ಸಂಖ್ಯೆ 17,09,244. ಇವರಲ್ಲಿ ಪುರುಷರು 8,51,990, ಮಹಿಳೆಯರು 8,57,117 ಹಾಗೂ ತೃತೀಯ ಲಿಂಗಿಗಳು 137 ಮತದಾರರಿದ್ದಾರೆ.
ಜಗಳೂರು ಕ್ಷೇತ್ರದಲ್ಲಿ 100046 ಪುರುಷ, 98759 ಮಹಿಳಾ, 10 ಇತರೆ ಸೇರಿ 198815 ಮತದಾರರು. ಹರಪನಹಳ್ಳಿಯಲ್ಲಿ 112969 ಪುರುಷ, 110985 ಮಹಿಳಾ, 19 ಇತರೆ ಸೇರಿ 223973 ಮತದಾರರು. ಹರಿಹರದಲ್ಲಿ 105510 ಪುರುಷ, 106870 ಮಹಿಳೆ, 17 ಇತರೆ ಒಟ್ಟು 212397 ಮತದಾರರು ಇದ್ದಾರೆ.
ದಾವಣಗೆರೆ ಉತ್ತರದಲ್ಲಿ 124485 ಪುರುಷ, 128635 ಮಹಿಳೆ, 36 ಇತರೆ ಸೇರಿ 253156 ಮತದಾರರು. ದಾವಣಗೆರೆ ದಕ್ಷಿಣ 109184 ಪುರುಷ, 111774 ಮಹಿಳೆ, 39 ಇತರೆ ಸೇರಿ 220997 ಮತದಾರರು. ಮಾಯಕೊಂಡದಲ್ಲಿ 97759 ಪುರುಷ, 97326 ಮಹಿಳೆ, 4 ಇತರೆ ಸೇರಿ 195089 ಮತದಾರರು. ಚನ್ನಗಿರಿಯಲ್ಲಿ 101653 ಪುರುಷ, 102208 ಮಹಿಳೆ, 9 ಇತರೆ ಸೇರಿ 203870 ಹಾಗೂ ಹೊನ್ನಾಳಿ ಕ್ಷೇತ್ರದಲ್ಲಿ 100384 ಪುರುಷ, 100560 ಮಹಿಳೆ ಹಾಗೂ 3 ಇತರೆ ಸೇರಿ 200947 ಮತದಾರರಿದ್ದಾರೆ.
ದೇಶದ 3ನೇ ಹಂತ, ರಾಜ್ಯದ 2ನೇ ಹಂತದಲ್ಲಿ ದಾವಣಗೆರೆಯಲ್ಲಿ ಮತದಾನ ನಡೆಯುತ್ತಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಲ್ಲಿಯೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ಕ್ಷೇತ್ರದಲ್ಲಿ ಏಪ್ರಿಲ್ 25 ರಿಂದ 27ರ ವರೆಗೆ ಮನೆಯಿಂದಲೇ ಮತದಾನ ಪ್ರಕ್ರಿಯೆ ಮುಗಿದಿದೆ.
ಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷ ಮೇಲ್ಪಟ್ಟ 12,845 ಮತದಾರರಿದ್ದು ಇದರಲ್ಲಿ ಮನೆಯಲ್ಲಿಯೇ ಮತದಾನ ಮಾಡಲು 1458 ಹಿರಿಯ ನಾಗರೀಕರು ಒಪ್ಪಿಗೆ ನೀಡಿದ್ದರು. 22,922 ವಿಶೇಷಚೇತನ ಮತದಾರರಲ್ಲಿ 804 ಮತದಾರರು ಮನೆಯಲ್ಲಿಯೇ ಮತದಾನ ಮಾಡಲು ಒಪ್ಪಿಗೆ ನೀಡಿದ್ದರು. ಮನೆಯಿಂದ ಮತದಾನ ಮಾಡಲು ಒಪ್ಪಿಗೆ ನೀಡಿದ ಮತದಾರರು ಮತಗಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಇಲ್ಲ.
-
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications