ಎಸ್‌ಎಸ್‌ಎಲ್‌ಸಿಯಲ್ಲಿ ಸಂತೆಬೆನ್ನೂರು ವಿದ್ಯಾರ್ಥಿನಿಗೆ 90ರ ಬದಲಿಗೆ ಸಿಕ್ಕಿದ್ದು ಕೇವಲ 46 ಅಂಕ

SSLC Results 2026: ರಾಜ್ಯದಲ್ಲಿ ಇತ್ತೀಗಷ್ಟೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಂದಿದೆ. ಆದರೆ, ದಾವಣಗೆರೆ ಜಿಲ್ಲೆ, ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ತೇಜಸ್ವಿನಿ ಎಂಬ ವಿದ್ಯಾರ್ಥಿನಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಅಂಕ ನಮೂದಿಸುವಲ್ಲಿ ಮಂಡಳಿಯಿಂದ ದೊಡ್ಡ ಲೋಪವಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ವಿಜ್ಞಾನ ವಿಷಯದಲ್ಲಿ ತೇಜಸ್ವಿನಿ ಅವರು 90 ಅಂಕಗಳನ್ನು ಗಳಿಸಿದ್ದರು. ಆದರೆ ಫಲಿತಾಂಶ ಪ್ರಕಟವಾದಾಗ ಕೇವಲ 46 ಅಂಕಗಳು ಮಾತ್ರ ನಮೂದಾಗಿದ್ದವು. ಇದರಿಂದ ಆತಂಕಗೊಂಡ ವಿದ್ಯಾರ್ಥಿನಿ ಉತ್ತರ ಪತ್ರಿಕೆಯ ಸ್ಕ್ಯಾನ್ ಪ್ರತಿಯನ್ನು ತರಿಸಿಕೊಂಡು ಪರಿಶೀಲನೆ ಮಾಡಿದಾಗ ಮೌಲ್ಯಮಾಪನದ ಅಸಲಿ ವಿಚಾರ ಹೊರಬಿದ್ದಿದೆ. ಕಂಪ್ಯೂಟರ್‌ನಲ್ಲಿ ಅಂಕಗಳನ್ನು ದಾಖಲಿಸುವಾಗ 90ರ ಬದಲಿಗೆ 46 ಎಂದು ತಪ್ಪಾಗಿ ನಮೂದಿಸಿರುವುದು ದೃಢಪಟ್ಟಿದೆ. ಇನ್ನುಳಿದಂತೆ ಉಳಿದ ವಿಷಯಗಳಲ್ಲೂ ಕೂಡ ಇವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.

SSLC Results 2026 Davanagere district s Student Scores 90 but Gets 46 Due to Data Entry Mistake

ಇತರ ವಿಷಯಗಳಲ್ಲಿ ತೇಜಸ್ವಿನಿ ಪಡೆದ ಅಂಕಗಳು

* ಕನ್ನಡ : 125ಕ್ಕೆ 120 ಅಂಕ
* ಇಂಗ್ಲಿಷ್ : 100ಕ್ಕೆ 93 ಅಂಕ
* ಹಿಂದಿ : 100ಕ್ಕೆ 91
* ಸಮಾಜ ವಿಜ್ಞಾನ: 100ಕ್ಕೆ 85
* ಗಣಿತ : 100ಕ್ಕೆ 82

ನ್ಯಾಯ ಒದಗಿಸಲು ಶಿಕ್ಷಣ ಇಲಾಖೆಗೆ ಮನವಿ

ಇನ್ನೂ ಹಿಂದಿ ವಿಷಯದಲ್ಲೂ 5 ಅಂಕದ ಎರಡು ಪ್ರಶ್ನೆಗಳಿಗೆ ಮೌಲ್ಯಮಾಪನವೇ ನಡೆದಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗ್ರಾಮದಲ್ಲಿ ಸಣ್ಣದೊಂದು ಪುಸ್ತಕದ ಅಂಗಡಿ ಇಟ್ಟುಕೊಂಡಿರುವ ಬಡ ಕುಟುಂಬದ ಈ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಅನ್ಯಾಯವಾಗಿದೆ. ಕಂಪ್ಯೂಟರ್ ನಮೂದಿನ ವೇಳೆ ಆಗಿರುವ ಈ ತಾಂತ್ರಿಕ ಲೋಪವನ್ನು ಶಿಕ್ಷಣ ಇಲಾಖೆ ಕೂಡಲೇ ಸರಿಪಡಿಸಿ ವಿದ್ಯಾರ್ಥಿನಿಯ ಭವಿಷ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಸಂತೆಬೆನ್ನೂರು ಭಾಗದ ಜನರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಮಾರ್ಚ್ 18 ರಿಂದ ಏಪ್ರಿಲ್ 2, 2026ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆದಿದ್ದವು. ಏಪ್ರಿಲ್‌ 23ರಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡಿದ್ದರು. ಇನ್ನೂ ಆನ್‌ಲೈನ್‌ ಫಲಿತಾಂಶದಲ್ಲಿ ಕೆಲವು ವಿದ್ಯಾರ್ಥಿಗಳ ಅಂಕಗಳಲ್ಲಿ ವ್ಯತ್ಯಾಸ ಆಗಿರುವುದು ಕಂಡುಬಂದಿದೆ. ಇದನ್ನು ಸರಿಪಡಿಸುವಂತೆಯೂ ಶಿಕ್ಷಣ ಇಲಾಖೆಗೆ ಜನರು ಮನವಿ ಮಾಡಿದ ಘಟನೆಗಳು ನಡೆದಿವೆ. ಇದೀಗ ಇಂತಹದ್ದೇ ಅನ್ಯಾಯ ಸಂತೆಬೆನ್ನೂರಿನ ವಿದ್ಯಾರ್ಥಿನಿಗೆ ಆಗಿದೆ ಎಂದು ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+