ದಾವಣಗೆರೆಯಲ್ಲಿ ಜೋರಾಗಿ ನಡೆಯಿತು ಟಗರು "ಹ್ಯಾಪಿ ಬರ್ತ್ ಡೇ"

ದಾವಣಗೆರೆ, ನವೆಂಬರ್ 29: ತಾವು ಹುಟ್ಟಿದ ದಿನವನ್ನು ಸ್ಮರಣೀಯವಾಗಿಸಲೆಂದು ಕೆಲವರು ವಿಜೃಂಭಣೆಯಿಂದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಾರೆ. ಮತ್ತೂ ಕೆಲವರು ವಿಶೇಷ ಪರಿಕಲ್ಪನೆಯೊಂದಿಗೆ ತಮ್ಮ ಮಕ್ಕಳ, ಒಡಹುಟ್ಟಿದವರ, ತಂದೆ ತಾಯಿಯ ಹುಟ್ಟುಹಬ್ಬವನ್ನೂ ಆಚರಿಸುತ್ತಾರೆ.

ಮತ್ತೂ ಕೆಲವರು ತಾವು ಸಾಕಿದ ನಾಯಿ, ಬೆಕ್ಕಿನಂಥ ಮುದ್ದಿನ ಪ್ರಾಣಿಗಳಿಗೂ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಹಾಗೆಯೆ ಇಲ್ಲೊಬ್ಬರು ಟಗರು ಪ್ರೇಮಿ ತಾನು ಸಾಕಿದ ಟಗರಿಗೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.

Person Grandly Celebrated Sheep Birthday In Davanagere

ದಾವಣಗೆರೆಯ ಹೊನ್ನಾಳಿ ತಾಲ್ಲೂಕಿನ ದುರ್ಗಾಂಬಿಕ ದೇವಾಲಯ ಬಡಾವಣೆಯಲ್ಲಿ ಲಕ್ಕಿ ಎನ್ನುವ ಹೆಸರಿಗೆ ಟಗರಿಗೆ ಆ ಬಡಾವಣೆಯ ಯುವಕರೆಲ್ಲ ಸೇರಿ ಐದು ಕೆ.ಜಿ ತೂಕದ ಕೇಕ್ ತಂದು ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.

Person Grandly Celebrated Sheep Birthday In Davanagere

ಪುನೀತ್ ಎನ್ನುವವರಿಗೆ ಸೇರಿದ ಟಗರು ಇದಾಗಿದ್ದು, ಟಗರು ಕಾಳಗದಲ್ಲಿ ಇದು ಭಾರೀ ಫೇಮಸ್. ಹೊನ್ನಾಳಿ, ದಾವಣಗೆರೆ, ಶಿಕಾರಿಪುರ, ರೆಟ್ಟೆಹಳ್ಳಿ, ರಾಣೀಬೆನ್ನೂರು ಸೇರಿದಂತೆ ಎಲ್ಲಿ ಟಗರು ಕಾಳಗ ನಡೆದರೂ ಅಲ್ಲಿ ಈ ಲಕ್ಕಿ ಹಾಜರ್. ರಣರಂಗದಲ್ಲಿ ಕಾದಾಡಿ, ಸಾಕಷ್ಟು ಮೆಡಲ್ ಗಳನ್ನು, ಬಿರುದುಗಳನ್ನು ತಇದು ನ್ನದಾಗಿಸಿಕೊಂಡಿದೆ. ಬಡಾವಣೆಯ ಯುವಕರಿಗೂ ಈ ಟಗರು ಅಚ್ಚುಮೆಚ್ಚು. ಹಾಗಾಗೇ ಲಕ್ಕಿಯ ಹುಟ್ಟುಹಬ್ಬವನ್ನು ದುರ್ಗಾಂಬಿಕ ದೇವಾಲಯದ ಮುಂಭಾಗ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ ಈ ಯುವಕರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+