ಡಿಜಿಟಲ್ ಯುಗದಲ್ಲಿ ಜನರನ್ನು ಸೆಳೆದ ಹಳೆಯ ನೋಟು, ನಾಣ್ಯ

ದಾವಣಗೆರೆ, ಮಾರ್ಚ್ 06: ಇದು ಡಿಜಿಟಲ್ ಯುಗ. ಕೈಯಲ್ಲಿರುವ ಸ್ಮಾರ್ಟ್ ಫೋನ್‌ಗಳ ಮೂಲಕ ಹಣದ ವ್ಯವಹಾರ ಮಾಡಬಹುದು. ಡಿಜಿಟಲ್ ವ್ಯವಹಾರ, ಹೊಸ ನೋಟುಗಳ ಅಬ್ಬರದಲ್ಲಿ ಹಳೆಯ ನೋಟು, ನಾಣ್ಯಗಳು ಕಣ್ಮರೆಯಾಗುತ್ತಿವೆ.

ಇಂತಹ ಸಮಯಲ್ಲಿ ರಾಜರ ಕಾಲದ ನಾಣ್ಯಗಳಿಂದ ಹಿಡಿದು 150ಕ್ಕೂ ಹೆಚ್ಚು ದೇಶದ ನೋಟುಗಳು ಜನರನ್ನು ಆಕರ್ಷಿಸಿದವು. ದಾವಣಗೆರೆಯಲ್ಲಿ ನಡೆದ ಪ್ರದರ್ಶನದಲ್ಲಿ ಹಳೆಯ ನೋಟು, ನಾಣ್ಯಗಳ ಲೋಕ ಅನಾವರಣಗೊಂಡಿದೆ.

ನಗರದ ಎಂಸಿಸಿ 'ಬಿ' ಬ್ಲಾಕ್ ನಲ್ಲಿರುವ ಸಮುದಾಯ ಭವನದಲ್ಲಿ ರೋಟರಿ ಕ್ಲಬ್ ವತಿಯಿಂದ ಹಳೆಯ ನೋಟು ಹಾಗೂ ನಾಣ್ಯಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಬೆಳಗಾವಿಯ ಈರಪ್ಪ ಜಿ. ಪರಮಶೆಟ್ಟಿ ಎನ್ನುವರು ಸಂಗ್ರಹಿಸಿರುವ ನಾಣ್ಯ ಹಾಗೂ ನೋಟುಗಳು ಇಲ್ಲಿವೆ.

Old Coin And Notes Two Days Exhibition by Rotary club

ರಾಜರ ಕಾಲದಲ್ಲಿ ಬಳಕೆಯಾಗುತ್ತಿದ್ದ ನಾಣ್ಯಗಳು, 150ಕ್ಕೂ ಹೆಚ್ಚು ದೇಶಗಳ ನೋಟು ಹಾಗೂ ಚಂದ್ರಗುಪ್ತ ಮೌರ್ಯ, ಹೊಯ್ಸಳ, ಕದಂಬ, ಪೇಶ್ವೆಗಳ ಕಾಲದ ನಾಣ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. 92 ಮಾದರಿಯ ಒಂದು ರೂಪಾಯಿ ನೋಟುಗಳು ಇಲ್ಲಿವೆ.

ಚಿಕ್ಕವಯಸ್ಸಿನಿಂದಲೇ ನೋಟು ಮತ್ತು ನಾಣ್ಯಗಳನ್ನು ಸಂಗ್ರಹ ಮಾಡುವ ಹವ್ಯಾಸ ಹೊಂದಿದ್ದ ಈರಪ್ಪ ಜಿ. ಪರಮಶೆಟ್ಟಿ ಅವುಗಳನ್ನು ಪ್ರದರ್ಶನ ಮಾಡುವ ಮೂಲಕ ಈಗಿನ ತಲೆಮಾರಿನ ಜನರಿಗೂ ಅದನ್ನು ತೋರಿಸುತ್ತಿದ್ದಾರೆ, ಅವುಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

Old Coin And Notes Two Days Exhibition by Rotary club

ಮಕ್ಕಳು ನೋಟು‌, ನಾಣ್ಯಗಳ ಬಗ್ಗೆ ಅಧ್ಯಯನ ನಡೆಸಲು ಈರಣ್ಣ ಮಾರ್ಗದರ್ಶನ ನೀಡುತ್ತಾರೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡು ಜ್ಞಾನ ವನ್ನು ಹೆಚ್ವಿಸಿಕೊಳ್ಳಲು ಈ ಮೇಳ ಸಹಕಾರಿಯಾಗಿದೆ.

ರಿಸರ್ವ್ ಬ್ಯಾಂಕ್‌ನ ಗವರ್ನರ್‌ಗಳ ಅವಧಿಯಲ್ಲಿ ಯಾವ ಯಾವ ನೋಟುಗಳು ಮುದ್ರಣವಾಯಿತು. ಎನ್ನುವುದರ ಬಗ್ಗೆ ಕೂಡ ವಿದ್ಯಾರ್ಥಿಗಳಿಗೆ ಮಾಹಿತಿ ‌ನೀಡಲಾಯಿತು.

ದೇಶ ವಿದೇಶಗಳ ನೋಟು ಹಾಗೂ ನಾಣ್ಯಗಳನ್ನು ಪ್ರದರ್ಶನಕ್ಕೆ ಎರಡು ದಿನಗಳ ಕಾಲ ನಡೆಯಲಿದೆ. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ರೋಟರಿ ಕ್ಲಬ್ ಜಿಲ್ಲಾಧ್ಯಕ್ಷ ಆರ್. ಟಿ. ಮೃತ್ಯುಂಜಯ ಮುಂತಾದವರು ನೋಟುಗಳ ಸಂಗ್ರಹ ವೀಕ್ಷಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+