ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸಂಸದ ಸಿದ್ದೇಶ್ವರ ಮನೆ ಮೇಲೆ ಐಟಿ ದಾಳಿ

ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಗಳು ಗುರುವಾರ(ಮೇ 18) ದಂದು ದಾಳಿ ನಡೆಸಿದ್ದಾರೆ.

By Mahesh
|
Google Oneindia Kannada News

ದಾವಣಗೆರೆ, ಮೇ 18: ಬಿಜೆಪಿ ಸಂಸದ, ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಅವರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ (ಮೇ 18) ದಂದು ದಾಳಿ ನಡೆಸಿದ್ದಾರೆ.

ಚಿತ್ರದುರ್ಗದ ಭೀಮಸಮುದದಲ್ಲಿರುವ ಜಿಎಂ ಸಿದ್ದೇಶ್ವರ ಅವರ ಎರಡು ಮನೆ, ಗುಟ್ಕಾ ಫ್ಯಾಕ್ಟರಿ, ಜಿಎಂ ಸಹಕಾರಿ ಸೌಹಾರ್ದ ಪತ್ತಿನ ನಿಯಮಿತದ ಮೇಲೆ ಐಟಿ ದಾಳಿ ನಡೆಸಲಾಗಿದೆ. [ಜಿಎಂ ಸಿದ್ದೇಶ್ವರ ಪರಿಚಯ]

IT Raid on BJP MP former Union Minister GM Siddeshwara

ಎಲ್ಲೆಲ್ಲಿ ದಾಳಿ: ದಾವಣಗೆರೆ ಮಂಡಿಪೇಟೆಯಲ್ಲಿ ಸಹಕಾರಿ ಸಂಘದ ಕಚೇರಿಯಲ್ಲಿರುವ ಅಧಿಕಾರಿಗಳು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಜಿ.ಎಂ.ಸೌಹಾರ್ದ ಬ್ಯಾಂಕ್, ಜಿಎಂಐಟಿ ಕಾಲೇಜ್, ಅಡಿಕೆ ಮಂಡಿ, ಸಿದ್ದೇಶ್ವರ ಅವರ ಸೋದರ ಪ್ರಸನ್ನ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಭಾರಿ ಕೈಗಾರಿಕೆ, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಎಂ ಸಿದ್ದೇಶ್ವರ ಅವರು 2016ರಲ್ಲಿ ರಾಜೀನಾಮೆ ನೀಡಿದ್ದರು.

English summary
Officials of the Income Tax department raided residence and properties belonging to BJP MP G M Siddeshwara in Chitradurga on Thursday. Searches are being carried out at the residences of Siddeshwara who is the former minister of state for Heavy Industries and Public Enterprises and civil aviation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X