ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾವಣಗೆರೆ ಬಿಜೆಪಿ ಅಭ್ಯರ್ಥಿ ಜಿಎಂ ಸಿದ್ದೇಶ್ ಪರಿಚಯ

|
Google Oneindia Kannada News

ದಾವಣಗೆರೆ, ಮಾ.27 : ದಾವಣಗೆರೆ ಕ್ಷೇತ್ರದಲ್ಲಿ ಯಾವುದೇ ಗೊಂದಲಗಳಿಲ್ಲದಂತೆ ಬಿಜೆಪಿ ಆಯ್ಕೆ ಮಾಡಿದ ಅಭ್ಯರ್ಥಿ ಹಾಲಿ ಸಂಸದ ಜಿಎಂ ಸಿದ್ದೇಶ್. ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಸಿದ್ದೇಶ್ 2014ರ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.

ಗೌಡರ್ ಮಲ್ಲಿಕಾರ್ಜುನ ಸಿದ್ದೇಶ್ವರ ಅವರು ಜಿಎಂ ಸಿದ್ದೇಶ್ ಎಂದು ಪ್ರಸಿದ್ಧಿ ಪಡೆದಿದ್ದಾರೆ. ಕೃಷಿಕರಾಗಿರುವ ಅವರು, ರೈತರ ಸಂಕಷ್ಟಗಳನ್ನು ಹತ್ತಿರದಿಂದ ಬಲ್ಲವರು. ಸಂಸತ್ ನಲ್ಲಿ 835 ಪ್ರಶ್ನೆಗಳನ್ನು ಕೇಳುವ ಮೂಲಕ ಕರ್ನಾಟಕದ ಇತೆ ಸಂಸದರಿಗೂ ಮಾದರಿಯಾಗಿದ್ದಾರೆ.[ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

2014ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ, ಜೆಡಿಎಸ್ ಅಭ್ಯರ್ಥಿ ಮಹಿಮಾ ಪಟೇಲ್ ಸಿದ್ದೇಶ್ ಅವರಿಗೆ ಎದುರಾಳಿಗಳು. ಈ ಬಾರಿಯ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿರುವ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಸಿದ್ದೇಶ್ ಸಂಕ್ಷಿಪ್ತ ಪರಿಚಯ ಇಲ್ಲಿದೆ

ಸಕ್ರಿಯ ಸಂಸದ

ಸಕ್ರಿಯ ಸಂಸದ

* 61 ವರ್ಷದ ಜಿಎಂ ಸಿದ್ದೇಶ್ ಯುವ ಸಂಸದರಿಗೂ ಮಾದರಿ
* 835 ಪ್ರಶ್ನೆಗಳನ್ನು ಸಂಸತ್ ನಲ್ಲಿ ಕೇಳುವ ಮೂಲಕ ಸದನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ
* ಪ್ರಧಾನ ಮಂತ್ರಿ ಗಾಮ ಸಡಕ್ ಯೋಜನೆ ಯಡಿ 270 ಕಿ.ಮೀ.ರಸ್ತೆಯನ್ನು 75.95 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ

ಎರಡು ಬಾರಿ ಸಂಸತ್ ಪ್ರವೇಶ

ಎರಡು ಬಾರಿ ಸಂಸತ್ ಪ್ರವೇಶ

*2004 ಮತ್ತು 2009ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಿದ್ದೇಶ್ ಸಂಸತ್ ಪ್ರವೇಶಿಸಿದರು
* ಇಂದಿರಾ ಆವಾಸ್ ಯೋಜನಾ
* ಗಂಗಾ ಕಲ್ಯಾಣ ಯೋಜನಾ
* ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ
* ಕೇಂದ್ರ ರಸ್ತೆ ನಿಧಿ ಯೋಜನಾ ಮುಂತಾದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ.

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ

ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ

* ಸಿದ್ದೇಶ್ ಜಿಎಂ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರು
* ಶ್ರೀಶೈಲ ಎಜುಕೇಷನ್ ಟ್ರಸ್ಟ್ ನಿರ್ದೇಶಕರು
* ಕರ್ನಾಟಕ ಅರೆಕಾ ಛೇಂಬರ್ಸ್ ಆಫ್ ಕಾಮರ್ಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕ್ರೀಡಾಪ್ರೇಮಿ

ಕ್ರೀಡಾಪ್ರೇಮಿ

* ರಾಜಕಾರಣದ ಜೊತೆ ಕ್ರೀಡೆಯಲ್ಲೂ ಸಿದ್ದೇಶ್ ಅವರಿಗೆ ಅಪಾರ ಆಸಕ್ತಿ ಇದೆ
* ಬ್ಯಾಡ್ಮಿಂಟನ್, ವಾಲಿಬಾಲ್ ಆಟ ಸಿದ್ದೇಶ್ ಅವರಿಗೆ ಬಹಳ ಪ್ರೀತಿ
* ಫ್ರಾನ್ಸ್, ಜರ್ಮನಿ, ಹಾಲೆಂಡ್, ಇಟಲಿ ಮುಂತಾದ ದೇಶಗಳಲ್ಲಿ ಹಲವಾರು ಸಮ್ಮೇಳನಗಳಲ್ಲಿ ಸಿದ್ದೇಶ್ ಭಾಗವಹಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ

* ವೆಬ್ ಸೈಟ್ http://www.gmsiddeshwara.com/default.htm
* ಫೇಸ್ ಬುಕ್ https://www.facebook.com/gm.siddeswara [ಜಿಎಂ ಸಿದ್ದೇಶ್ ಚಿತ್ರಗಳು]

English summary
Elections 2014 : Gowdar Mallikarjunappa Siddeswara, well known by name G.M. Siddeshwara is a member of the 15th Lok Sabha, elected from the Davangere constituency of Karnataka. He is contesting for 2014 election from same constituency, here is brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X