ಸಚಿವ ಸ್ಥಾನಕ್ಕೆ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ರಾಜೀನಾಮೆ

Written By:
Subscribe to Oneindia Kannada

ನವದೆಹಲಿ, ಜುಲೈ, 12: ಅಂತಿಮವಾಗಿ ನರೇಂದ್ರ ಮೋದಿ ಸರ್ಕಾರದಿಂದ ಕರ್ನಾಟಕದ ಒಂದು ವಿಕೆಟ್ ಪತನವಾಗಿದೆ. ನಿರೀಕ್ಷೆಯಂತೆ ಕೇಂದ್ರ ಭಾರೀ ಕೈಗಾರಿಕೆ ರಾಜ್ಯ ಖಾತೆ ಸಚಿವ ಜಿ.ಎಂ. ಸಿದ್ದೇಶ್ವರ ಮಂಗಳವಾರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕಾರ ಮಾಡಿದ್ದಾರೆ.

ಕೇಂದ್ರ ಸಚಿವ ಸಂಪುಟ ಪುನಾರಚನೆ ನಂತರ ಸಿದ್ದೇಶ್ವರ ಅವರು ರಾಜೀನಾಮೆ ನೀಡುವುದು ಖಚಿತವಾಗಿತ್ತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ನೆಜ್ಮಾ ಹೆಫ್ತುಲ್ಲಾ ಸಹ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.[ತಲೆದಂಡ ತಪ್ಪಿಸಿಕೊಂಡ್ರೂ ಸಿದ್ದೇಶ್ವರರಿಂದ ರಾಜೀನಾಮೆ ನಿರ್ಧಾರ]

gm siddesh

ರಾಜ್ಯ ಖಾತೆ ಸಚಿವರಾಗಿದ್ದ ಎಂ ಎ ನಖ್ವಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಬಾಬುಲ್ ಸುಪ್ರಿಯೋ ಭಾರೀ ಕೈಗಾರಿಕೆಗಳ ರಾಜ್ಯ ಖಾತೆಯನ್ನು ನಿಭಾಯಿಸಲಿದ್ದಾರೆ.[ಮೋದಿ ಸಂಪುಟದಲ್ಲಿ ಯಾರಿಗೆ, ಯಾವ ಖಾತೆ?]

ಸಂಪುಟವನ್ನು ಪುನಾರಚನೆ ಮಾಡಿದ್ದ ಮೋದಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದರು. ಕರ್ನಾಟಕದ ಡಿ.ವಿ. ಸದಾನಂದ ಗೌಡ, ಸ್ಮೃತಿ ಇರಾನಿ ಸೇರಿದಂತೆ ಕೆಲವು ಸಚಿವರ ಖಾತೆಯನ್ನು ಬದಲಾವಣೆ ಮಾಡಿದ್ದರು. [ಮೋದಿ ಸಂಪುಟ: 19 ಹೊಸ ಮುಖಗಳು ಇನ್, 6 ಮಂದಿ ಔಟ್]

ಕರ್ನಾಟಕದ ರಮೇಶ್ ಜಿಗಜಿಣಗಿ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಾಗಲೇ ಸಿದ್ದೇಶ್ವರ ರಾಜೀನಾಮೆ ಪಕ್ಕಾ ಆಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Union Minister of State for Major Industries and Public Enterprises G M Siddeshwar, MP from Davangere, Karnataka, Minority Affairs Minister Najma A. Heptulla have tendered their resignations on Tuesday. President Pranab Mukherjee accepted the Ministers' resignation with immediate effect.
Please Wait while comments are loading...