ದಾವಣಗೆರೆಗೂ ಹಬ್ಬಿದ ಅಕ್ರಮ ವಲಸೆ ಕಾಟ
ದಾವಣಗೆರೆ, ಸೆಪ್ಟೆಂಬರ್ 26: ಪಾಸ್ ಪೋರ್ಟ್ ಸೇರಿದಂತೆ ಯಾವುದೇ ದಾಖಲೆ ಇಲ್ಲದೆ ಅಕ್ರಮವಾಗಿ ಪ್ರವೇಶ ಮಾಡಿದ್ದ ಆಸ್ಮಾ ಎಂಬಾಕೆಗೆ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದೆ.
ಬಾಂಗ್ಲಾದೇಶದ ದಾಲ್ ಚೋಡಾ ಜಿಲ್ಲೆಯ ಭರತ್ ಪುರ್ ಗ್ರಾಮದ ನಿವಾಸಿ ಹಸೀಯಾ ಅಲಿಯಾಸ್ ಆಸ್ಮಾ (30) ಅಕ್ರಮವಾಗಿ ವಲಸೆ ಬಂದ ಬಾಂಗ್ಲಾದೇಶ ನಿವಾಸಿ.

2018 ಜೂನ್ 18ರಂದು ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಆಸ್ಮಾ ಪತ್ತೆಯಾಗಿದ್ದರು. ದಾವಣಗೆರೆ ಬಡಾವಣೆ ಠಾಣೆ ಪೊಲೀಸರು ಈಕೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಮೂರ್ತಿ ಕುಲಕರ್ಣಿ ಅಂಬಾದಾಸ್ ಅವರು ತೀರ್ಪು ಪ್ರಕಟಿಸಿದ್ದಾರೆ. ಶಿಕ್ಷೆ ಅವಧಿ ಮುಗಿದ ಬಳಿಕ ಬಾಂಗ್ಲಾದೇಶಕ್ಕೆ ಕಳುಹಿಸಲು ಆದೇಶಿಸಲಾಗಿದೆ.












Click it and Unblock the Notifications